Asianet Suvarna News Asianet Suvarna News

ಜನರ ಗ್ರಹಿಕೆ ಬದಲಾಯಿಸುವ ಸಾಮರ್ಥ್ಯ ಭಾರತೀಯ ಕಲೆಗಿದೆ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

75 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಭಾರತೀಯ ಕಲೆಗಳನ್ನು ಅಭ್ಯಾಸ ಮಾಡುವ ಮತ್ತು ಸಮಾಜಕ್ಕೆ ಪರಿಚಯಿಸುವ ಸಾಧಕರನ್ನು ಗುರುತಿಸಿ ಗೌರವಿಸಲು ಈ ರೀತಿಯ ಉಪಕ್ರಮವನ್ನು ಕೈಗೊಳ್ಳಲಾಗಿದೆ. ‘ಕಲೆ ಒಂದು ವಿದ್ಯೆಯಾಗಿದ್ದು, ಅಂತ್ಯದಲ್ಲಿ ನಮ್ಮ ಮುಕ್ತಿಗೂ ಕಾರಣವಾಗುತ್ತದೆ ಎಂದು ಆರೆಸ್ಸೆಸ್ ಮುಖ್ಯಸ್ಥ  ಮೋಹನ್ ಭಾಗವತ್ ಹೇಳಿದರು.

RSS chief Mohan Bhagwats speech at the All India Kalasadhak Sangam programme Bengaluru rav
Author
First Published Feb 4, 2024, 12:02 PM IST

ಬೆಂಗಳೂರು (ಫೆ.4): ಜನರ ಗ್ರಹಿಕೆಯನ್ನು ಬದಲಾಯಿಸುವ ಹಾಗೂ ವಿಶ್ವ ಕಲೆಗಳಿಗೆ ದಾರಿ ಮಾಡಿಕೊಡುವ ಸಾಮರ್ಥ್ಯ ಭಾರತೀಯ ಕಲೆಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಶನಿವಾರ ಹೇಳಿದರು.

ಬೆಂಗಳೂರಿನ ಅಖಿಲ ಭಾರತೀಯ ಕಲಾಸಾಧಕ ಸಂಗಮದಲ್ಲಿ ನಡೆದ ಸಮಾರಂಭದಲ್ಲಿ ಜನಪದ ಕಲಾವಿದರಾದ ಗಣಪತ್ ಸಖಾರಾಮ್ ಮಸಗೆ ಮತ್ತು ಚಿತ್ರ ಕಲಾವಿದ ವಿಜಯ ದಶರಥ್ ಆಚ್ರೆಕರ್ ಅವರಿಗೆ ಪ್ರಥಮ ವರ್ಷದ ‘ಭರತ ಮುನಿ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ದಿನಕ್ಕೊಂದು ಮಸೀದಿ ವಿವಾದಗಳು ಬೇಡ: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್!

ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್ ಅವರು, 75 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಭಾರತೀಯ ಕಲೆಗಳನ್ನು ಅಭ್ಯಾಸ ಮಾಡುವ ಮತ್ತು ಸಮಾಜಕ್ಕೆ ಪರಿಚಯಿಸುವ ಸಾಧಕರನ್ನು ಗುರುತಿಸಿ ಗೌರವಿಸಲು ಈ ರೀತಿಯ ಉಪಕ್ರಮವನ್ನು ಕೈಗೊಳ್ಳಲಾಗಿದೆ. ‘ಕಲೆ ಒಂದು ವಿದ್ಯೆಯಾಗಿದ್ದು, ಅಂತ್ಯದಲ್ಲಿ ನಮ್ಮ ಮುಕ್ತಿಗೂ ಕಾರಣವಾಗುತ್ತದೆ. ಕಲೆ ಜನರ ಗ್ರಹಿಕೆಯನ್ನು ಬದಲಾಯಿಸಬಲ್ಲದು. ವಿಕಾರಗಳಿಂದ ನಮ್ಮನ್ನು ಮೇಲಕ್ಕೆತ್ತಿ ಸಮಾಜದ ವಿಚಾರ, ಸಂವೇದನೆಗಳನ್ನು ಅರ್ಥ ಮಾಡಿಸಿಕೊಡಲು ಕಲೆ ಪ್ರಮುಖ ಪಾತ್ರ ವಹಿಸುತ್ತದೆ, ಭಾರತೀಯತೆಯನ್ನು ಉಳಿಸುವ ಕೆಲಸವನ್ನು ಕಲೆಯ ಮೂಲಕ ಕಲಾವಿದರು ಮಾಡುತ್ತಿದ್ದಾರೆ. ಅವರ ಸಂಖ್ಯೆ ಇನ್ನೂ ಹೆಚ್ಚಾಗಬೇಕು ಎಂದು ಹೇಳಿದರು.

Follow Us:
Download App:
  • android
  • ios