ಬೆಂಗಳೂರು, (ಸೆ.28):  ಆರು  IAS ಅಧಿಕಾರಿಗಳನ್ನು ಟ್ರಾನ್ಸ್‌ಫರ್ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಿಸಿದ್ದು, ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. 

 ಆಗಸ್ಟ್ 29ಕ್ಕೆ ಮೈಸೂರು ಜಿಲ್ಲಾಧಿಕಾರಿಯಾಗಿ ಬಿ.ಶರತ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಕೇವಲ ಒಂದೇ ಒಂದು ತಿಂಗಳಿನಲ್ಲಿಯೇ ಇದೀಗ ಅವರನ್ನು ವರ್ಗಾವಣೆ ಮಾಡಿರುವಂತ ರಾಜ್ಯ ಸರ್ಕಾರ, ಅವರ ಸ್ಥಾನಕ್ಕೆ ರೋಹಿಣಿ ಸಿಂಧೂರಿ ಅವರನ್ನು ನೇಮಕ ಮಾಡಿ ಆದೇಶಿಸಿದೆ.

ನೇತ್ರಾಣಿಯಲ್ಲಿ ಪತಿ ಜೊತೆ ಸಮುದ್ರದಾಳಕ್ಕೆ ಧುಮುಕಿದ ರೋಹಿಣಿ ಸಿಂಧೂರಿ

 ಧಾರ್ಮಿಕ ಮತ್ತು ಚಾರಿಟಬಲ್ ಎಂಡೋಮೆಂಟ್ ನ ಕಮೀಷನರ್ ಆಗಿದ್ದ ರೋಹಿಣಿ ಸಿಂಧೂರಿಯವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಆದ್ರೆ, ಮೈಸೂರು ಜಿಲ್ಲಾಧಿಕಾರಿಯಾಗಿ ಬಿ.ಶರತ್ ಅವರಿಗೆ ಸ್ಥಳ ನಿಯುಕ್ತಿಗೊಳಿಸದೇ ವರ್ಗಾವಣೆ ಮಾಡಿದೆ.

ಆದ್ರೆ, ಪ್ರಸ್ತುತ ಜಿಲ್ಲಾಧಿಕಾರಿ ಬಿ.ಶರತ್​ಗೆ ಸ್ಥಳ ತೋರಿಸದೆ ರಾಜ್ಯ ವರ್ಗಾವಣೆ ಮಾಡಿದೆ. ಒಂದು ತಿಂಗಳ ಹಿಂದಷ್ಟೇ ಮೈಸೂರು DC ಆಗಿ ಬಿ.ಶರತ್​ರನ್ನ ನೇಮಕ ಮಾಡಲಾಗಿತ್ತು. ಬಿ.ಶರತ್ ಕಲಬುರಗಿಯಿಂದ ಮೈಸೂರಿಗೆ ವರ್ಗಾವಣೆಯಾಗಿದ್ದರು.

ವರ್ಗಾವಣೆಗೊಂಡ ಇನ್ನುಳಿದ 5 IAS ಅಧಿಕಾರಿಗಳು