ಕಾರವಾರ [ಡಿ.27]: ಇಲ್ಲಿನ ಅರಬ್ಬೀ ಸಮುದ್ರದಲ್ಲಿರುವ ನೇತ್ರಾಣಿ ದ್ವೀಪದ ಬಳಿ ಸ್ಕೂಬಾ ಡೈವಿಂಗ್‌ ಇತ್ತೀಚಿಗೆ ಜನಪ್ರಿಯಗೊಳ್ಳುತ್ತಿದ್ದು, ಜನಸಾಮಾನ್ಯರ ಜತೆಗೆ ರಾಜ್ಯದ ಹಿರಿಯ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳನ್ನು ಸಹ ಸೆಳೆಯುತ್ತಿದೆ.

ಡಿ.19ರಂದು ಐಪಿಎಸ್‌ ಅಧಿಕಾರಿ ಡಿ.ರೂಪಾ ಮುದ್ಗಲ್‌ ಅವರು ಇಲ್ಲಿ ಸ್ಕೂಬಾ ಡೈವಿಂಗ್‌ ಮಾಡಿದ ಬೆನ್ನಲ್ಲಿಯೇ, ಇದೀಗ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಗುರುವಾರ ತಮ್ಮ ಪತ್ನಿಯ ಜೊತೆಯಲ್ಲಿ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್‌ ಮಾಡಿ ಸಮುದ್ರದಾಳದ ವಿಸ್ಮಯಗಳನ್ನು ಕಣ್ತುಂಬಿಕೊಂಡರು.

ಅ.10ರಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ ದವೆ, ಐಎಫ್‌ಎಸ್‌ ಅಧಿಕಾರಿ ವಿಜಯಕುಮಾರ್‌ ಅವರು ನೇತ್ರಾಣಿಗೆ ಆಗಮಿಸಿ ಸ್ಕೂಬಾ ಡೈವಿಂಗ್‌ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮುರ್ಡೇಶ್ವರದಿಂದ 18 ಕಿ.ಮೀ. ದೂರದಲ್ಲಿರುವ ನೇತ್ರಾಣಿಯ ಆಳ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್‌ ಜಲ ಸಾಹಸ ಮಾಹಬಹುದಾಗಿದ್ದು, ಪ್ರತಿಯೊಬ್ಬರಿಗೂ ತಲಾ 5 ಸಾವಿರ ರು. ಶುಲ್ಕ ವಿಧಿಸಲಾಗುತ್ತದೆ. ಮುರ್ಡೇಶ್ವರದಿಂದ ಬೋಟ್‌ನಲ್ಲಿ ಕರೆದೊಯ್ಯಲಾಗುತ್ತದೆ. ಸಾಗರದಾಳದ ಜೀವವೈವಿಧ್ಯಗಳನ್ನು, ಜಲಚರಗಳನ್ನು ವೀಕ್ಷಿಸುವ ಅವಕಾಶ ಲಭಿಸಲಿದೆ.

ನೇತ್ರಾಣಿ ಅಡ್ವೆಂಚರ್ಸ್‌ನಿಂದ ಸ್ಕೂಬಾ ಡೈವಿಂಗ್‌:

ಮುರ್ಡೇಶ್ವರದ ನೇತ್ರಾಣಿ ಅಡ್ವೆಂಚರ್ಸ್‌ ಸ್ಕೂಬಾ ಡೈವಿಂಗ್‌ ನಡೆಸುತ್ತಿದ್ದು, ಗಣೇಶ ಹರಿಕಂತ್ರ ಎಂಬುವರು ಇದರ ಮುಖ್ಯಸ್ಥರಾಗಿದ್ದಾರೆ. ಮಾಹಿತಿಗಾಗಿ ಮೊಬೈಲ್‌ ಸಂಖ್ಯೆ: 9900554422, 9900431111 ಸಂಪರ್ಕಿಸಬಹುದಾಗಿದೆ.