ಶತಾಬ್ಧಿ ಪ್ರಯಾಣಕ್ಕೆ ಮುಂಗಡ ಬುಕ್ಕಿಂಗ್ ಕಡ್ಡಾಯ!
ಶಿವಮೊಗ್ಗ-ಯಶವಂತಪುರ ನಡುವೆ ಆರಂಭಗೊಂಡಿರುವ ಜನ ಶತಾಬ್ಧಿ ರೈಲಿನಲ್ಲಿ ಪ್ರಯಾಣಿಸಲು ಇಚ್ಛಿಸುವವರು ತಮ್ಮ ಸೀಟುಗಳನ್ನು ಮೊದಲೇ ಬುಕ್ಕಿಂಗ್ ಮಾಡುವುದು ಕಡ್ಡಾಯವಾಗಿದೆ.
ಶಿವಮೊಗ್ಗ : ಶಿವಮೊಗ್ಗ-ಯಶವಂತಪುರ ನಡುವೆ ಆರಂಭಗೊಂಡಿರುವ ಜನ ಶತಾಬ್ಧಿ ರೈಲಿನಲ್ಲಿ ಪ್ರಯಾಣಿಸಲು ಇಚ್ಛಿಸುವವರು ತಮ್ಮ ಸೀಟುಗಳನ್ನು ಮೊದಲೇ ಬುಕ್ಕಿಂಗ್ ಮಾಡಬೇಕು. ಕೊನೆ ಗಳಿಗೆಯಲ್ಲಿ ನಿಲ್ದಾಣದಲ್ಲಿ ಟಿಕೆಟ್ ಪಡೆದು ರೈಲಿಗೆ ಹತ್ತಿ ಸೀಟಿಗಾಗಿ ಹುಡುಕಾಟ ನಡೆಸುವಂತಿಲ್ಲ. ಏಕೆಂದರೆ ಈ ರೈಲಿನ ಎಲ್ಲ ಸೀಟುಗಳೂ ಮುಂಗಡ ಕಾಯ್ದಿರಿಸುವಿಕೆಗೆ ಒಳಪಟ್ಟಿದೆ.
ರೈಲು ನಿಲ್ದಾಣ ಬಿಡುವ ಅರ್ಧಗಂಟೆ ಮೊದಲಿನವರೆಗೂ ಆನ್‌ಲೈನ್‌ನಲ್ಲಿ ಅಥವಾ ಹಿಂದಿನ ದಿನ ರಾತ್ರಿ 8ರವರೆಗೂ ಕೌಂಟರ್‌ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಬೆಂಗಳೂರು ಶಿವಮೊಗ್ಗ ಮಧ್ಯೆ ಈಗ ಸಂಚರಿಸುವ ಈಗಿನ ಪ್ಯಾಸೆಂಜರ್ ರೈಲು 8ಗಂಟೆ ತೆಗೆದುಕೊಂಡರೆ, ಎಕ್ಸಪ್ರೆಸ್ ರೈಲುಗಳು 6.30 ಗಂಟೆ ತೆಗೆದುಕೊಳ್ಳುತ್ತದೆ. ಆದರೆ ಜನ ಶತಾಬ್ದಿ ಎಕ್ಸ್‌ಪ್ರೆಸ್ ರೈಲು ಭದ್ರಾವತಿ, ಕಡೂರು, ತುಮಕೂರಿನಲ್ಲಿ ಮಾತ್ರ ನಿಲ್ಲುವ ಕಾರಣ ಕೇವಲ 5 ಗಂಟೆಯಲ್ಲೇ ಶಿವಮೊಗ್ಗದಿಂದ ಯಶವಂತಪುರ ತಲುಪುತ್ತದೆ.
ವೇಳಾಪಟ್ಟಿ: ಈ ಜನ ಜತಾಬ್ದಿ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ- 12090) ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರ ಶಿವಮೊಗ್ಗದಿಂದ ಬೆಳಗ್ಗೆ 5.15ಕ್ಕೆ ಹೊರಟು, 10.10ಕ್ಕೆ ಯಶವಂತಪುರ ತಲುಪಲಿದೆ. ಅದೇ ದಿನಗಳಲ್ಲಿ ಯಶವಂತಪುರದಿಂದ (ರೈಲು ಸಂಖ್ಯೆ- 12089) ಸಂಜೆ 5.30ಕ್ಕೆ ಹೊರಟು ರಾತ್ರಿ 10.10 ಕ್ಕೆ ಶಿವಮೊಗ್ಗ ತಲುಪುತ್ತದೆ.