ಗೋವಾದಲ್ಲಿ ಸಮುದ್ರದ ಮಧ್ಯೆ ಸಿಲುಕಿದ್ದ ಕನ್ನಡಿಗರ ರಕ್ಷಣೆ: ನೆರವಾದ ಶಿವಮೊಗ್ಗ ಶಾಸಕ ಚನ್ನಬಸಪ್ಪ

ಗೋವಾ ರಾಜ್ಯದಲ್ಲಿ ಪ್ರವಾಸಕ್ಕೆಂದು ಹೋದ ಶಿವಮೊಗ್ಗ ಮೂಲದ ಆರು ಕುಟುಂಬಗಳು ಸೇರಿದಂತೆ ಸುಮಾರು 72 ಪ್ರವಾಸಿಗರಿಂದ ಬೋಟ್ ಒಂದು ಸಮುದ್ರದ ಕನ್ನಡಿಗರು ಪರೆದಾಡಿದ ಪ್ರಸಂಗ ನಡೆದಿದೆ. 

Rescue of Kannadigas stuck in the middle of the sea in Goa gvd

ಶಿವಮೊಗ್ಗ (ಮೇ.13): ಗೋವಾ ರಾಜ್ಯದಲ್ಲಿ ಪ್ರವಾಸಕ್ಕೆಂದು ಹೋದ ಶಿವಮೊಗ್ಗ ಮೂಲದ ಆರು ಕುಟುಂಬಗಳು ಸೇರಿದಂತೆ ಸುಮಾರು 72 ಪ್ರವಾಸಿಗರಿಂದ ಬೋಟ್ ಒಂದು ಸಮುದ್ರದ ಕನ್ನಡಿಗರು ಪರೆದಾಡಿದ ಪ್ರಸಂಗ ನಡೆದಿದೆ. ಈ ಸಂದರ್ಭದಲ್ಲಿ ಕನ್ನಡಿಗರ ಸಂಕಷ್ಟಕ್ಕೆ ಶಿವಮೊಗ್ಗ ಶಾಸಕ ಚನ್ನಬಸಪ್ಪನವರು ಜಿಲ್ಲಾಡಳಿತ ಮೂಲಕ ಸ್ಪಂದಿಸಿ ರಕ್ಷಣೆ ಮಾಡಿಸಿದ ಘಟನೆಯು ನಡೆದಿದೆ. ಹೌದು ಸಮುದ್ರದ ಮಧ್ಯೆ ಬೋಟ್ ಸ್ಥಗಿತಗೊಂಡು ಸಿಲುಕಿದ್ದರು ಕನ್ನಡಿಗರು. ಗೋವಾದ ವಾಸ್ಕೋಡಿಗಾಮ ಬಂದರು ನಿಂದ ಪ್ರವಾಸಿಗರಿಂದ ಸಮುದ್ರಯಾನ ಕೈಗೊಳ್ಳಲಾಗಿತ್ತು.  

ಸ್ಕೂಬಾ ಡೈವಿಂಗ್ ಗೆ ಎಂದು ಸಮುದ್ರದ ಮಧ್ಯಕ್ಕೆ ತೆರಳಿದ್ದ ಪ್ರವಾಸಿಗರು ಕಳೆದ ರಾತ್ರಿ 8:00 ಗಂಟೆ ಸುಮಾರಿಗೆ ಸಮುದ್ರದ ಮಧ್ಯದಲ್ಲಿ ಸಿಲುಕಿ ಆತಂಕಕ್ಕೀಡಾಗಿದ್ದರು. ಏನು ಮಾಡುವುದೆಂದು ತಿಳಿಯದೆ ಪರದಾಟ ನಡೆಸಿದ್ದರು. ಈ ಬೊಟ್ ನಲ್ಲಿದ್ದ ಶಿವಮೊಗ್ಗ ನಗರದ ಸುಮಾರು ಆರು ಕುಟುಂಬದ ಸದಸ್ಯರಿದ್ದರು. ವಾಸ್ಕೊ ಜಿಲ್ಲಾಡಳಿತದಿಂದ ತಕ್ಷಣ ನೆರವು ಸಿಗದೇ ಸುಮಾರು 72 ಜನರಿಂದ ಬೋಟ್ ಸಮುದ್ರದ ಮಧ್ಯೆ  ಸ್ಥಗಿತಗೊಂಡು ಆತಂಕ ಹೆಚ್ಚಾಗಿತ್ತು.  ಆ ಸಂದರ್ಭದಲ್ಲಿ ಶಿವಮೊಗ್ಗದ ಗಾಡಿ ಕೊಪ್ಪ ನಾಗ ಮಂಜು ಎಂಬಾತನಿಂದ ಶಾಸಕ ಚನ್ನಬಸಪ್ಪ ಅವರಿಗೆ ಮೊಬೈಲ್ ಕರೆ ಮಾಡಿ ತಮ್ಮನ್ನು ರಕ್ಷಣೆ ಮಾಡುವಂತೆ ಆತಂಕದಿಂದ ಮನವಿ ಮಾಡಿಕೊಂಡಿದ್ದಾರೆ. 

ಮನುಷ್ಯರಿಗೆ ಬೆರಳಚ್ಚಿನ ರೀತಿ ಪ್ರಾಣಿಗಳ ಮಾಹಿತಿಗೆ ಮೂಗಿನ ಅಚ್ಚು!

ನಾಗ ಮಂಜು ಕರೆ ಮಾಡಿದ ಹಿನ್ನೆಲೆ  ತಕ್ಷಣವೇ ಶಿವಮೊಗ್ಗ ಡಿಸಿ ಗುರುದತ್ತ ಹೆಗಡೆ ಮತ್ತು ಎಸ್ ಪಿ ಮಿಥುನ್ ಕುಮಾರ್ ಗೆ ಕರೆ ಮಾಡಿದ ಶಾಸಕ ಚನ್ನಬಸಪ್ಪ ಕನ್ನಡಿಗರ ರಕ್ಷಣೆಗೆ ಗೋವಾ ರಾಜ್ಯದೊಡನೆ ಸಂಪರ್ಕ ಸಾಧಿಸಿ ಸಹಕಾರ ನೀಡುವಂತೆ ಹೇಳಿದ್ದಾರೆ. ಶಾಸಕ ಚನ್ನಬಸಪ್ಪ ತುರ್ತು ಕರೆ ಹಿನ್ನೆಲೆ ರಕ್ಷಣೆ ಕಾರ್ಯಪ್ರವೃತ್ತರಾದ ಶಿವಮೊಗ್ಗ ಜಿಲ್ಲಾಡಳಿತ ವಾಸ್ಕೋ ಜಿಲ್ಲಾಡಳಿತದ ಜೊತೆ ನಿರಂತರ ಸಂಪರ್ಕ ಹಿನ್ನೆಲೆ  ವಾಸ್ಕೊ ಸಮುದ್ರದಲ್ಲಿ ಸಿಲುಕಿದ್ದ ಬೋಟ್ ಅನ್ನು ಟೋಲ್ ಮೂಲಕ  ಬಂದರು ಸಿಬ್ಬಂದಿ ದಡ ಸೇರಿಸಿದ್ದಾರೆ. ಬದುಕಿದೆಯಾ ಬಡಜೀವವೇ ..? ಎಂದು ನಿಟ್ಟುಸಿರು ಬಿಟ್ಟ ಕನ್ನಡಿಗರು  ಶಾಸಕ ಚನ್ನಬಸಪ್ಪನವರ ನೆರವಿನ ಸಹಾಯ ಹಸ್ತಕ್ಕೆ ಧನ್ಯವಾದ ಹೇಳಿದರು.  ಅಲ್ಲದೆ ಇದೀಗ ಮತ್ತೆ ಗೋವಾ ಪ್ರವಾಸವನ್ನು ಶಿವಮೊಗ್ಗ ಮೂಲದವರು ಸಂತಸದಿಂದ ಮುಂದುವರಿಸಿದ್ದಾರೆ.

Latest Videos
Follow Us:
Download App:
  • android
  • ios