Asianet Suvarna News Asianet Suvarna News

Eidgah maidana: ಸರ್ಕಾರದ ವತಿಯಿಂದಲೇ ಗಣರಾಜ್ಯೋತ್ಸವ ಆಚರಣೆ; ಸಂಸದ ಪಿ.ಸಿ.ಮೋಹನ್

ವಿವಾದಿತ ಈದ್ಗಾ ಮೈದಾನ ಗಣರಾಜ್ಯೋತ್ಸವವನ್ನು ಸರ್ಕಾರದ ವತಿಯಿಂದ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಂಸದ ಪಿ.ಸಿ.ಮೋಹನ್ ಹೇಳಿದ್ದಾರೆ.

Republic Day celebration by the government itself says MP PC Mohan rav
Author
First Published Jan 22, 2023, 1:58 PM IST

ಚಾಮರಾಜಪೇಟೆ (ಜ.22) :  ವಿವಾದಿತ ಈದ್ಗಾ ಮೈದಾನ ಗಣರಾಜ್ಯೋತ್ಸವವನ್ನು ಸರ್ಕಾರದ ವತಿಯಿಂದ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಂಸದ ಪಿ.ಸಿ.ಮೋಹನ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ.26ರಂದು ಗಣರಾಜ್ಯೋತ್ಸವ ದಿನಕ್ಕೆ ಈದ್ಗಾ ಮೈದಾನ ಸಜ್ಜುಗೊಳಿಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಬಗ್ಗೆ ಬೆಂ.ನಗರ ಜಿಲ್ಲಾಧಿಕಾರಿ ಕೆ.ಎ ಕೆ.ಎ ದಯಾನಂದ್ ಅವರಿಗೆ ಕಂದಾಯ ಸಚಿವ ಆರ್ ಅಶೋಕ್ ಸೂಚನೆ ನೀಡಿದ್ದಾರೆ ಎಂದರು.

Assembly election: ಕೋಲಾರ ಬಳಿಕ ಚಾಮರಾಜಪೇಟೆಯಲ್ಲಿ ಸಿದ್ದು ಮಿಂಚಿನ ಸಂಚಾರ

ಈದ್ಗಾ ಮೈದಾನದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೂ ಭಾಗವಹಿಸಲು ಆಹ್ವಾನ ನೀಡಿದೆ. ಈ ಬಾರಿ ಸ್ವಾತಂತ್ರ್ಯ ದಿನಾಚರಣೆಗಿಂತಲೂ ಅದ್ದೂರಿಯಾಗಿ ಗಣರಾಜ್ಯೋತ್ಸವ ಆಚರಿಸಲು ಸರ್ಕಾರ ಭರದಿಂದ ಸಿದ್ದತೆ ನಡೆಸಿದೆ. ಕಳೆದ ಬಾರಿ ಬೆಂ.ಉತ್ತರ ಎ.ಸಿ ಶಿವಣ್ಣ ನೇತೃತ್ವದಲ್ಲಿ ಧ್ವಜಾರೋಹಣ ನಡೆದಿತ್ತು ಈ ಬಾರಿಯೂ ಎ.ಸಿ ಸಮ್ಮುಖದಲ್ಲೇ ಗಣರಾಜ್ಯೋತ್ಸವ ನಡೆಯಲಿದೆ ಎಂದರು.

ಗಣರಾಜ್ಯೋತ್ಸವ ಆಚರಿಸುವ ಸಂಬಂಧ ರೂಪುರೂಷೆ ಸಿದ್ದಪಡಿಸಲು ಜಿಲ್ಲಾಧಿಕಾರಿಗಳಿಗೆ ಒಂದು ದಿನ ಕಾಲವಾಕಾಶ ನೀಡಲಾಗುತ್ತೆ ಎಂದರು. ಮುಂದುವರಿದು  ಮಂಗಳವಾರ ನಾನು ಕೂಡ ಜಿಲ್ಲಾಧಿಕಾರಿಗಳ ಜೊತೆ ಭೇಟಿ ಮಾಡಿ ಮಾತನಾಡುತ್ತೇನೆ ಎಂದರು.

ಸ್ವಾತಂತ್ರ್ಯ ದಿನಾಚರಣೆ ವೇಳೆ ಕೆಲವು ನಿರ್ಬಂಧಗಳಿದ್ದವು. ಆದರೆ ಈ ಬಾರಿ ಇರುವುದಿಲ್ಲ. ಈ ಬಾರಿ ಕಂದಾಯ ಇಲಾಖೆ ನೇತೃತ್ವದಲ್ಲಿ ಅದ್ಧೂರಿಯಾಗಿ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತೆ. ಈ ಭಾಗದ ಶಾಸಕರಿಗೂ ಸರ್ಕಾರದಿಂದ ಆಹ್ವಾನ ಹೋಗಲಿದೆ. ನನಗೂ ಸರ್ಕಾರದಿಂದಲೇ ಆಹ್ವಾನ ಬರಲಿದೆ. ನನಗೆ ಈ ಬಗ್ಗೆ ಕಂದಾಯ ಸಚಿವರು ಪೋನ್ ಮೂಲಕ ಹೇಳಿದ್ದಾರೆ ಎಂದು ತಿಳಿಸಿದರು.

ಸರ್ಕಾರದ ನಿರ್ಧಾರ ಸ್ವಾಗತಿಸಿ ನಾಗರಿಕ ಒಕ್ಕೂಟ:

ಈ ಬಾರಿ ಚಾಮರಾಜಪೇಟೆಯಲ್ಲಿ ಕಂದಾಯ ಇಲಾಖೆ ನೇತೃತ್ವದಲ್ಲೇ ಗಣರಾಜ್ಯೋತ್ಸವ ಆಚರಿಸುವ ಸರ್ಕಾರ ನಿರ್ಧಾರವನ್ನು ನಾಗರಿಕ ಒಕ್ಕೂಟ ಸ್ವಾಗತಿಸಿದ್ದು  ಚಾಮರಾಜಪೇಟೆ ನಾಗರಿಕ ವೇದಿಕೆ ಅಧ್ಯಕ್ಷ ರಾಮೇಗೌಡ ಅವರು ಸಂತಸ ವ್ಯಕ್ತಪಡಿಸಿದ್ದಾರೆ. 

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕ ಸ್ಥಬ್ಧ ಚಿತ್ರಕ್ಕೆ ಅವಕಾಶ ನಿರಾಕರಣೆ, ಕೇಂದ್ರದ ವಿರುದ್ಧ ಆಕ್ರೋಶ!

ಸರ್ಕಾರದ ವತಿಯಿಂದ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಿಸುತ್ತೇವೆ ಎಂದು ಸಂಸದರು ಹೇಳಿದ್ದಾರೆ. ಈ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಗಣರಾಜ್ಯೋತ್ಸವ ದಿನ ಕಾಟಾಚಾರದಂತೆ ಆಗಬಾರದು, ಶಾಲಾ ಮಕ್ಕಳಿಂದ ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬೇಕು, ಗಣ್ಯರಿಗೆ ಸಮ್ಮಾನಿಸಬೇಕು ನಮ್ಮ ಸಲಹೆಗಳನ್ನ ನೀಡಲು ನಾಳೆ ಜಿಲ್ಲಾಧಿಕಾರಿಗಳ ಭೇಟಿ ಮಾಡುತ್ತೇವೆ ಎಂದು ಹೇಳಿದರು.

Follow Us:
Download App:
  • android
  • ios