Asianet Suvarna News Asianet Suvarna News

Reservation Report ಮೀಸಲಾತಿ ನೀಡುವ ಶಿಫಾರಸು ವರದಿ ತಿಂಗಳೊಳಗೆ ಸರ್ಕಾರಕ್ಕೆ ಸಲ್ಲಿಕೆ: ಜಯಪ್ರಕಾಶ ಹೆಗ್ಡೆ

ರಾಜ್ಯದಲ್ಲಿ ಜಾತಿಯೇ ಇಲ್ಲದ ಅನಾಥ ಮಕ್ಕಳಿಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ಶಿಫಾರಸು ಮಾಡುವ ವರದಿಯ ಜೊತೆಗೆ ಒಟ್ಟು 17 ಜಾತಿಗಳ ಬಗ್ಗೆ ವರದಿಗಳನ್ನು ರಚಿಸಿ ಮುದ್ರಿಸಲಾಗಿದ್ದು, ಇನ್ನೂ 8 ಜಾತಿಗಳ ವರದಿಗಳು ಸಿದ್ದವಾಗಿವೆ. ತಿಂಗಳೊಳಗೆ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

Report on reservation to be submitted to the govt within month says Backward Classes chief Jayaprakash Hegde gow
Author
First Published Dec 2, 2022, 4:54 PM IST

ಉಡುಪಿ (ಡಿ.2): ರಾಜ್ಯದಲ್ಲಿ ಜಾತಿಯೇ ಇಲ್ಲದ ಅನಾಥ ಮಕ್ಕಳಿಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ಶಿಫಾರಸು ಮಾಡುವ ವರದಿಯ ಜೊತೆಗೆ ಒಟ್ಟು 17 ಜಾತಿಗಳ ಬಗ್ಗೆ ವರದಿಗಳನ್ನು ರಚಿಸಿ ಮುದ್ರಿಸಲಾಗಿದ್ದು, ಇನ್ನೂ 8 ಜಾತಿಗಳ ವರದಿಗಳು ಸಿದ್ದವಾಗಿವೆ. ತಿಂಗಳೊಳಗೆ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.   ಶುಕ್ರವಾರ ಉಡುಪಿಯ ಖಾಸಗಿ ಹೋಟೆಲಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಮುಖ್ಯವಾಗಿ ಉತ್ತರಕನ್ನಡ ಜಿಲ್ಲೆಯ ಕುಡುಬಿ ಜಾತಿಯವರು ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಮನವಿ ಮಾಡಿದ್ದಾರೆ. ಆದರೇ ಪ.ಜಾತಿ - ಪ.ಪಂ ಮೀಸಲಾತಿಗೆ ಸೇರಿಸುವುದು ಹಿಂ.ವ. ಆಯೋಗದ ವ್ಯಾಪ್ತಿಗೆ ಬರುವುದಿಲ್ಲ. ಅದಕ್ಕೆ ಪ.ಜಾತಿ ಮತ್ತು ಪಂಗಡದ ಆಯೋಗದ ಶಿಫಾರಸು ಬೇಕಾಗುತ್ತದೆ, ಈ ಶಿಫಾರಸನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ, ಅಲ್ಲಿಂದ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿ ಅಲ್ಲಿ ನಿರ್ಧಾರವಾಗಬೇಕಾಗುತ್ತದೆ.

ಆದರೇ ಅದಿಸೂಚಿತ ಬುಡಕಟ್ಟು ಎಂದು ಗುರುತಿಸುವ ಅಧಿಕಾರ ತಮ್ಮ ಆಯೋಗಕ್ಕೆ ಇದ್ದು, ಅದರಂತೆ ಕುಡುಬಿ ಜಾತಿಯವರನ್ನು ಅದಿಸೂಚಿತ ಬುಡಕಟ್ಟುಗೆ ಸೇರಿಸಲು ತಾವು ಸರ್ಕಾರಕ್ಕೆ ವರದಿ ಸಲ್ಲಿಸುತ್ತಿರುವುದಾಗಿ ಹೇಳಿದರು.

ಈಗಾಗಲೇ ಯೋಗದ ಅಧ್ಯಕ್ಷನಾಗಿ ರಾಜ್ಯದ 16 ಜಿಲ್ಲೆಗಳಿಗೆ ಪ್ರವಾಸ ಮಾಡಿದ್ದೇನೆ. ಪ್ರತಿಯೊಂದು ಜಿಲ್ಲೆಗಳಲ್ಲಿಯೂ ಜಾತಿ  ಪ್ರಮಾಣ ಪತ್ರಗಳದ್ದೇ ದೊಡ್ಡ ಸಮಸ್ಯೆ, ಇದನ್ನು ಆಯಾ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಬಗೆಹರಿಸಿದ್ದೇನೆ ಎಂದರು.

ಶ್ರೀ ಜಯಮೃತ್ಯುಂಜಯರವರು ಪಂಚಮಸಾಲಿ ಜಾತಿಯನ್ನು 2ಎ ಮೀಸಲಾತಿಗೆ ಸೇರಿಸಲು ಹಿಂ.ವ. ಆಯೋಗಕ್ಕೆ ಡಿ.19 ಗಡುವು ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಜಯಪ್ರಕಾಶ್ ಹೆಗ್ಡೆ, ಈ ರೀತಿ ಸರ್ಕಾರಕ್ಕೆ ಗಡುವು ನೀಡಬಹುದು, ಆದರೇ ಸಾಂವಿಧಾನಿಕ ಸಂಸ್ಥೆಯಾಗಿರುವ ಆಯೋಗಕ್ಕೆ ಗಡುವು ನೀಡುವುದಕ್ಕಾಗುವುದಿಲ್ಲ. ಅವರು ಈ ರೀತಿ ಆಯೋಗಕ್ಕೆ ಕೇಳುವುದೂ ಸರಿಯಲ್ಲ, ತಾವು ನೀಡುವುದಕ್ಕೂ ಆಗುವುದಿಲ್ಲ ಎಂದರು.

ಮೀಸಲಾತಿ ಹೆಚ್ಚಳ ಜಾರಿಗೆ ಆಗ್ರಹಿಸಿ ಮೌನ ಪ್ರತಿಭಟನೆ:
ಪರಿಶಿಷ್ಟಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ 50 ಲಕ್ಷದಿಂದ 1 ಕೋಟಿ ರುಪಾಯಿವರೆಗೂ ಹೆಚ್ಚಿಸಿರುವ ಗುತ್ತಿಗೆ ಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ರಾಜ್ಯ ಪರಿಶಿಷ್ಟಜಾತಿ ಮತ್ತು ಪಂಗಡದ ಗುತ್ತಿಗೆದಾರರ ಸಂಘದಿಂದ ನಗರದಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು.

Panchamasali Reservation: ಡಿಸೆಂಬರ್ 19ಕ್ಕೆ ಅಂತಿಮ ಗಡುವು ನೀಡಿದ ಸ್ವಾಮೀಜಿ

ಶಾಸಕರ ಭವನದಲ್ಲಿ ಸರ್ಕಾರದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಸಭೆ ನಡೆಯುತ್ತಿದ್ದಾಗ ಸಂಘದಿಂದ ಕೊಠಡಿ ಮುಂದೆ ಮೌನ ಪ್ರತಿಭಟನೆ ನಡೆಸಲಾಯಿತು. ಆಗ ಸಮಸ್ಯೆ ಆಲಿಸಿದ ಸಮಿತಿ ಅಧ್ಯಕ್ಷ ಎಂ.ಪಿ.ಕುಮಾರಸ್ವಾಮಿ ಮತ್ತು ಸದಸ್ಯರು, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು.

Chitradurga: ಮೀಸಲಾತಿ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಸಾಮೂಹಿಕ ಬಾಡೂಟ ಆಯೋಜನೆ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಮಹದೇವಸ್ವಾಮಿ, ಎಸ್ಸಿ, ಎಸ್ಟಿಗುತ್ತಿಗೆದಾರರಿಗೆ 50 ಲಕ್ಷ ರುಪಾಯಿವರೆಗೂ ಇದ್ದ ಕಾಮಗಾರಿ ಮೀಸಲಾತಿಯನ್ನು 1 ಕೋಟಿ ರುಪಾಯಿಗೆ ಹೆಚ್ಚಿಸಿದ್ದರೂ ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸಿಲ್ಲ. ಮತ್ತೊಂದೆಡೆ, ಇರುವ ಗುತ್ತಿಗೆಗಳನ್ನೇ ಪ್ಯಾಕೇಜ್‌ ಮಾಡಿ ಅವಕಾಶ ಸಿಗದಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

Follow Us:
Download App:
  • android
  • ios