Panchamasali Reservation: ಡಿಸೆಂಬರ್ 19ಕ್ಕೆ ಅಂತಿಮ ಗಡುವು ನೀಡಿದ ಸ್ವಾಮೀಜಿ
ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿ ಮಾತನಾಡಿರುವ ಬಸವಜಯಮೃತ್ಯುಂಜಯ ಸ್ವಾಮೀಜಿ ಸರಕಾರ ಮಾತಿಗೆ ತಪ್ಪಿದೆ. ಯಡಿಯೂರಪ್ಪ ಅವರು ಸಹ ಮಾತಿಗೆ ತಪ್ಪಿದ್ದಾರೆ ಎಂದು ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಕೊಪ್ಪಳ (ನ.29): ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿ ಮಾತನಾಡಿರುವ ಬಸವಜಯಮೃತ್ಯುಂಜಯ ಸ್ವಾಮೀಜಿ ಸರಕಾರ ಮಾತಿಗೆ ತಪ್ಪಿದೆ. ಯಡಿಯೂರಪ್ಪ ಅವರು ಸಹ ಮಾತಿಗೆ ತಪ್ಪಿದ್ದಾರೆ ಎಂದು ಕೊಪ್ಪಳದ ಮುಧೋಳ ಗ್ರಾಮದಲ್ಲಿ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಡಿಸೆಂಬರ್ 19 ರಂದು ಕೊನೆ ಗಡುವು ನೀಡಿರುವ ಸ್ವಾಮೀಜಿ ಇನ್ನು 20 ದಿನ ಮಾತ್ರ ಬಾಕಿ ಇದೆ. ಅಷ್ಟರೊಳಗೆ ಆಯೋಗದ ವರದಿ ನೀಡಬೇಕು. ಸರಕಾರಕ್ಕೆ ಅಂತಿಮ ಗಡುವು ನೀಡಲಾಗಿದೆ. ಪಂಚಮಸಾಲಿ ಸಂಘಟನೆಗೆ ಕಾರಣ ಮೀಸಲಾತಿ ಹೋರಾಟ. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ. ಈಗ ನಮ್ಮ ಪಂಚಮಸಾಲಿ ಸಮಾಜದ ಕಾಲ. ನಮಗೊಂದು ಕಾಲ ಬಂದಿದೆ. ಪ್ರಚಂಡ ಪಂಚಮಸಾಲಿ ಸಮಾಜದ ಶಕ್ತಿಯನ್ನು ಅರಮನೆ ಮೈದಾನದಲ್ಲಿ ತೋರಿಸಲಾಗಿದೆ. 2 ವರ್ಷಗಳಿಂದ ಮಠ ಬಿಟ್ಟು ಹೋರಾಟ ಮಾಡುತ್ತಿದ್ದೇನೆ. ಎಲ್ಲ ಸಮಾಜಗಳ ಹೋರಾಟಕ್ಕೆ ಧ್ವನಿ ಪಂಚಮಸಾಲಿ ಸಮಾಜದ ಹೋರಾಟ. ಯಡಿಯೂರಪ್ಪ ಅವರು 3 ತಿಂಗಳಲ್ಲಿ ಮೀಸಲಾತಿ ಕೋಡುತ್ತೇವೆ ಹೋರಾಟ ಕೈಬಿಡಿ ಎಂದು ಮನವಿ ಮಾಡಿದ್ದರು. ಅಂದು ಪ್ರತಿಭಟನೆ ಕೈಬಿಟ್ಟಿದ್ದರೆ ಎಂದೂ ಮೀಸಲಾತಿ ಸಿಗುತ್ತಿರಲಿಲ್ಲ.
ಲಿಂಗಾಯತರ ಎನ್ನುವ ಮೂಲಕ ಉಳಿದ ಜಾತಿಗಳು ಸೌಲಭ್ಯ ಪಡೆದವು. ನಮ್ಮ ಮತವನ್ನು ಪಡೆದು ನಮ್ಮ ಹಿತ ಕಾಪಾಡಲಿಲ್ಲ. ಪೂಜ್ಯರು,ರಾಜಕಾರಣಿಗಳು ಸಿಎಂ ಗೆ 2 ಎ ಮೀಸಲಾತಿ ಕೊಡಲು ಮನವಿ ಮಾಡಿ. ಯಾರಾರು ಮೀಸಲಾತಿ ಕೇಳುತ್ತಿದ್ದಾರೆ ಅವರಿಗೆ ಕೊಡಲು ಶಾಸಕರು ಮನವಿ ಮಾಡಿ. ಯತ್ನಾಳ್ ಗೆ ಸಚಿವ ಸ್ಥಾನ ನೀಡುತ್ತೇವೆ ಹೋರಾಟಕ್ಕೆ ಹೋಗಬೇಡಿ ಎಂದು ಸಿಎಂ ಬೋಮ್ಮಾಯಿ ಮನವಿ ಮಾಡಿದರು. ನನಗೆ 30 ಸಚಿವ ಸ್ಥಾನ ಕೊಟ್ಟರೂ ನಾನು ಹೋರಾಟ ಕೈಬಿಡುವುದಿಲ್ಲ ಎಂದರು. ಡಿಸೆಂಬರ್ 12 ರೊಳಗಾಗಿ ಆಯೋಗದ ವರದಿ ತರಿಸಿಲೊಳ್ಳಿ. ನಿಮಗೆ ಗೌರವ ಕೊಟ್ಟು ಸುಮ್ಮನಿದ್ದೇವೆ. ಡಿಸೆಂಬರ್ 20 ರಂದು ಬೆಳಗಾವಿಯಲ್ಲಿ 25 ಲಕ್ಷ ಪಂಚಮಸಾಲಿ ಸಮಾಜದವರಿಂದ ಹೋರಾಟ ಮಾಡುತ್ತೇವೆ ಅಂದು ಎಲ್ಲರೂ ಬರಬೇಕೆಂದು ಮನವಿ ಮಾಡಿದ ಸ್ವಾಮೀಜಿ.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಅಗತ್ಯ: ವಚನಾನಂದ ಸ್ವಾಮೀಜಿ
ಡಿ 19 ಕ್ಕೆ ಅಂತಿಮ ಗಡುವು:
2 ಎ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮೀಸಲಾತಿ ನೀಡಲು ಡಿ 19 ಕ್ಕೆ ಅಂತಿಮ ಗಡುವು ನೀಡುತ್ತಿದ್ದೇವೆ. ಇದು ಐದನೇ ಹಂತದ ಹೋರಾಟ. ಇದು ಮಾಡು ಇಲ್ಲವೇ ಮಡಿ ಹೋರಾಟ. ಮಡಿಯುವ ಮನ್ನ ಮೀಸಲಾತಿ ಒಡೆದು ಮಡಿಯುತ್ತೇವೆ ಎಂದು ಕೊಪ್ಪಳದ ಮುಧೋಳದಲ್ಲಿ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಹೇಳಿಕೆ ನೀಡಿದ್ದಾರೆ. ಬೋಮ್ಮಾಯಿ ಅವರಿಗೆ ಮೀಸಲಾತಿ ನೀಡಲು ಹೇಳಿದ್ದೇವೆ. ಯತ್ನಾಳ್ ಅವರು ಮಂತ್ರಿ ಬೇಡ ಕಂತ್ರಿ ಬೇಡ ಎಂದರು. ಸದನದಲ್ಲಿಯೂ ಸಹ ಯಾವ ಶಾಸಕರು ಅವರ ಜೊತೆ ಮಾತನಾಡಲಿಲ್ಲ. ಬಳಿಕ ನಾಲ್ಕು ಜನ ಅಂಗಿ ಹಿಡಿದುಕೊಂಡು ಹೋದರು. ಯತ್ನಾಳ್,ಕರಡಿ ಸಂಗಣ್ಣ ಅವರನ್ನು ಬಿಟ್ಟರೆ, ಬೋಮ್ಮಾಯಿ ಅವರು ಮಾತಿಗೆ ನಡೆದುಕೊಂಡರೆ ಸನ್ಮಾನ ಇಲ್ಲವೆಂದರೆ ಅವಮಾನ. ಯಾವ ಜಗದ್ಗುರುಗಳು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿಲ್ಲ. ಯಾರೂ ಮೀಸಲಾತಿ ಪರ ಹೋರಾಟ ಮಾಡಿಲ್ಲ. ಬಂದವರು ಹೊರಳಿ ಹೋಗಿದ್ದಾರೆ. ಬಂದವರು ಹೊಸ ಗಾಡಿ ತೊಂಡು ಹೋಗಿದ್ದಾರೆ. ಮರಳಿ ಅವರು ವಾಪಸ್ ಬಂದಿಲ್ಲ. ಈಗ ಮೀಸಲಾತಿ ಕೊಡಲು ಜಾಗೃತಿ ಸಭೆ ಮಾಡುತ್ತೇವೆ ಎಂದು ಹೇಳುತ್ತಾರೆ. ನಮಗೆ ಹುಚ್ಚು ಹಿಡಿದಿಲ್ಲ.ನಿಮಗೆ ಹುಚ್ಚು ಹಿಡಿದಿದೆ.
ಪಂಚಮಸಾಲಿಗೆ 2ಎ ಮೀಸಲಾತಿ ಕೊಡಲು ಆರ್ ಎಸ್‌ಎಸ್ ಸಹಮತಿ ಇದೆ : ಜಯ ಮೃತ್ಯುಂಜಯ ಶ್ರೀ
ಬಸವಜಯಮೃತ್ಯುಂಜ ಸ್ವಾಮೀಜಿ ಮಠದಲ್ಲಿ ಕೂಡಬಹುದಾಗಿತ್ತು. ಇಂತವರ ಬಗ್ಗೆ ಏನೇನೋ ಮಾತನಾಡುತ್ತಾರೆ. ಡಿಸೆಂಬಂರ್ 19 ರಂದು ಕೊಡದಿದ್ದರೆ 22 ರಂದು ಸುವರ್ಣ ವಿಧಾನಸೌಧ ಕಬ್ಜಾ ಮಾಡುತ್ತೇವೆ. 10 ಲಕ್ಷ ಸೇರಿದ ಮೇಲೆ ಪಂಚಮಸಾಲಿ ಬಗ್ಗೆ ಗೋತ್ತಾಯಿತು. ನಾವು ಮೀಸಲಾತಿ ಕೇಳಿದರೆ ಹೊಟ್ಟೆ ಕಿಚ್ಚು ಪಡುತ್ತಾರೆ. ಲಿಂಗಾಯತ ಒಳಪಂಡಗದ 32 ಜನ ಮೀಸಲಾತಿ ತೆಗೆದುಕೊಂಡಿದ್ದಾರೆ. ನಾವು ನೀವು ಬೀಗರು ಎಂದು ಹೇಳುತ್ತೇವೆ. ನಮ್ಮ ಮೀಸಲಾತಿಗೆ ನೀವು ಸ್ಪಂದನೆ ಮಾಡಿ ಎಂದು ಮನವಿ ಮಾಡುತ್ತೇನೆ. ನಾವು ಯಾರ ಮೇಲೆ ದ್ವೇಷ ಮಾಡಿ ಏನು ಮಾಡುವುದಿದೆ. ಕೆಲವರು ನಮ್ಮ ಸಮಾಜಕ್ಕೆ ಮೀಸಲಾತಿ ಕೊಡಲು ವಿರೋಧ ಮಾಡಿದ್ದಾರೆ. ವಿರೋಧ ಮಾಡಿದರೆ ನೀವು ಖುರ್ಚಿಯಲ್ಲಿ ಇರುವುದಿಲ್ಲ. ನಾಳೆ ಮತ ಕೇಳಲು ಬನ್ನಿ ಎಂದು ಸವಾಲು ಹಾಕಿದ ಕಾಶಪ್ಪನವರ್. ನೀವು ವಿರೋಧ ಮಾಡಿದರೆ ನಾವು ವಿರೋಧ ಮಾಡುತ್ತೇವೆ. ಪ್ರತಿಯೊಬ್ಬರೂ ವಿಶೇಷ ಸಪ್ಪಳ ಮಾಡಬೇಕು. ಯಾರು ಮಂತ್ರಿ, ಮುಖ್ಯಮಂತ್ರಿ ಆದರೂ ನಾವು ಪಾದಯಾತ್ರೆ ಬಿಡುವುದಿಲ್ಲ ಅಂದರೂ, ಅದರಂತೆ ಪಾದಯಾತ್ರೆ ಎಂದ ಕಾಶಪ್ಪನವರ್.