Asianet Suvarna News Asianet Suvarna News

ಕೆಟ್ಟು ನಿಂತಿರುವ 16 ಮೊಬೈಲ್‌ ಇಂದಿರಾ ಕ್ಯಾಂಟೀನ್‌ ದುರಸ್ತಿಗೆ ಬಿಬಿಎಂಪಿ ಆದೇಶ

ಸ್ಥಗಿತಗೊಂಡಿದ್ದ ಮೊಬೈಲ್‌ ಇಂದಿರಾ ಕ್ಯಾಂಟೀನ್‌ಗಳನ್ನು ಪುನರ್‌ ಆರಂಭಿಸಲು ಬಿಬಿಎಂಪಿ ನಿರ್ಧರಿಸಿದ್ದು, ಕೆಟ್ಟು ನಿಂತಿರುವ ಮೊಬೈಲ್‌ ಕ್ಯಾಂಟೀನ್‌ ರಿಪೇರಿಗೆ ಆದೇಶಿಸಿದೆ. 2017ರಲ್ಲಿ 198 ವಾರ್ಡ್‌ಗಳ ಪೈಕಿ 175 ವಾರ್ಡ್‌ಗಳಲ್ಲಿ ಸ್ಥಿರ ಕ್ಯಾಂಟೀನ್‌, ಉಳಿದ ವಾರ್ಡ್‌ಗಳಲ್ಲಿ ಮೊಬೈಲ್‌ ಇಂದಿರಾ ಕ್ಯಾಂಟೀನ್‌ ಆರಂಭಿಸಿತ್ತು.

Repair of 16 mobile Indira canteen which is in bad condition at bengaluru rav
Author
First Published Aug 22, 2023, 5:33 AM IST

ಬೆಂಗಳೂರು (ಆ.22) :  ಸ್ಥಗಿತಗೊಂಡಿದ್ದ ಮೊಬೈಲ್‌ ಇಂದಿರಾ ಕ್ಯಾಂಟೀನ್‌ಗಳನ್ನು ಪುನರ್‌ ಆರಂಭಿಸಲು ಬಿಬಿಎಂಪಿ ನಿರ್ಧರಿಸಿದ್ದು, ಕೆಟ್ಟು ನಿಂತಿರುವ ಮೊಬೈಲ್‌ ಕ್ಯಾಂಟೀನ್‌ ರಿಪೇರಿಗೆ ಆದೇಶಿಸಿದೆ. 2017ರಲ್ಲಿ 198 ವಾರ್ಡ್‌ಗಳ ಪೈಕಿ 175 ವಾರ್ಡ್‌ಗಳಲ್ಲಿ ಸ್ಥಿರ ಕ್ಯಾಂಟೀನ್‌, ಉಳಿದ ವಾರ್ಡ್‌ಗಳಲ್ಲಿ ಮೊಬೈಲ್‌ ಇಂದಿರಾ ಕ್ಯಾಂಟೀನ್‌ ಆರಂಭಿಸಿತ್ತು.

ಇದೀಗ 23 ಮೊಬೈಲ್‌ ಕ್ಯಾಂಟೀನ್‌(Mobile canteen)ಗಳ ಪೈಕಿ ಕೆಟ್ಟು ನಿಂತಿರುವ 16 ಮೊಬೈಲ್‌ ಕ್ಯಾಂಟೀನ್‌ಗಳ ದುರಸ್ತಿ ಮಾಡಿ ಮರು ಆರಂಭಕ್ಕೆ ಸರ್ಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತರು ಮೊಬೈಲ್‌ ಇಂದಿರಾ ಕ್ಯಾಂಟೀನ್‌ ರಿಪೇರಿ ಮಾಡಿಸುವಂತೆ ವಲಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇಂದಿರಾ ಕ್ಯಾಂಟೀನ್ ಊಟದ ಬೆಲೆಯಲ್ಲಿ ಯಾವುದೇ ಹೆಚ್ಚಳ ಇಲ್ಲ: ರಾಜ್ಯ ಸರ್ಕಾರ ಸ್ಪಷ್ಟನೆ

ದಕ್ಷಿಣ ವಲಯದಲ್ಲಿ ಐದು, ಪಶ್ಚಿಮ ವಲಯ ಹಾಗೂ ಆರ್‌ಆರ್‌ ನಗರ(Rajarajeshwari nagar) ವಲಯದಲ್ಲಿ ತಲಾ ಮೂರು, ಪೂರ್ವ ವಲಯದಲ್ಲಿ ನಾಲ್ಕು ಹಾಗೂ ಮಹದೇವಪುರ ವಲಯದಲ್ಲಿ ಒಂದು ಮೊಬೈಲ್‌ ವಾಹನ ದುರಸ್ತಿ ಮಾಡಬೇಕಾಗಿದೆ. ಇವುಗಳ ರಿಪೇರಿಗೆ .1.22 ಕೋಟಿ ವೆಚ್ಚವಾಗಲಿದೆ ಎಂದು ಖಾಸಗಿ ಸಂಸ್ಥೆಯಿಂದ ಅಂದಾಜು ಪಟ್ಟಿಪಡೆಯಲಾಗಿದೆ. ಅಂದಾಜು ಪಟ್ಟಿದರದ ಶೇ.50 ರಷ್ಟುಹಣವನ್ನು ಮುಂಗಡವಾಗಿ ಪಾವತಿಸಿ ದುರಸ್ತಿಗೆ ಕ್ರಮ ವಹಿಸುವುದು. ದುರಸ್ತಿಯ ಸಂಪೂರ್ಣ ವೆಚ್ಚವನ್ನು ಹಣಕಾಸು ವಿಭಾಗದ ವಿಶೇಷ ಆಯುಕ್ತರ ಅನುಮೋದನೆ ಪಡೆದು ಭರಿಸುವಂತೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತರು ಸೂಚಿಸಿದ್ದಾರೆ.

Follow Us:
Download App:
  • android
  • ios