ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ ಗೆಳತಿ ಪವಿತ್ರಾ ಗೌಡಗೆ ಜಾಮೀನಿಲ್ಲ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಹಾಗೂ ಏಳನೇ ಆರೋಪಿ ಅನುಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬೆಂಗಳೂರಿನ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ವಜಾ ಮಾಡಿದೆ.
ಬೆಂಗಳೂರು (ಸೆ.01): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಹಾಗೂ ಏಳನೇ ಆರೋಪಿ ಅನುಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬೆಂಗಳೂರಿನ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ವಜಾ ಮಾಡಿದೆ. ಅರ್ಜಿಯ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ಕೋರ್ಟ್ ಶನಿವಾರ ತೀರ್ಪು ಪ್ರಕಟಿಸಿತು.
ಕೃತ್ಯ ಭೀಕರವಾಗಿದ್ದು, ಕೇವಲಮಹಿಳೆ ಎಂಬ ಕಾರಣಕ್ಕೆ ಜಾಮೀನು ನೀಡಲು ಸಾಧ್ಯವಿಲ್ಲ .ಮೃತನಿಗೆ ಊಹಿಸಲಾಗದಷ್ಟು ಚಿತ್ರಹಿಂಸೆ ನೀಡಲಾಗಿದೆ. ಆರೋಪಿ ಸ್ಥಳದಲ್ಲಿ ಇದ್ದದ್ದನ್ನು ಇಬ್ಬರು ಪ್ರತ್ಯಕ್ಷದರ್ಶಿಗಳು ಗುರುತಿಸಿದ್ದಾರೆ ಎಂದು ಪ್ರತಿವಾದಿಗಳು ಹೇಳಿದ್ದಾರೆ.ಮುಖ್ಯವಾಗಿ ಪವಿತ್ರಾ ಧರಿಸಿದ್ದ ಬಟ್ಟೆಯಲ್ಲಿ ಮೃತನ ಡಿಎನ್‌ಎ ಪತ್ತೆಯಾಗಿದೆ. ಹಾಗೂ ಅಪರಾಧಕ್ಕೆ ಬಳಕೆಯಾದ ಕಾರಿನಲ್ಲಿ ಇವರು ಪ್ರವೇಶಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿದೆ ಎಂದು ಕಾರಣ ನೀಡಿತು.
ದರ್ಶನ್‌ಗೆ ತಲುಪದ ಪ್ರಸಾದ: ಶಾಸ್ತ್ರಿ ಸಿನಿಮಾ ನೋಡಿದ್ದು ಬರೀ 13 ಅಭಿಮಾನಿಗಳು!
ಮತ್ತೊಬ್ಬ ಆರೋಪಿ, ಅನುಕುಮಾರ್ ಅಪರಾಧ ಸ್ಥಳದ ಉದ್ದಕ್ಕೂ ಇರುವುದು ಕಂಡು ಬಂದಿದ್ದು, ತನಿಖೆ ಇನ್ನೂ ಬಾಕಿ ಇದೆ. ಇವರ ಬಟ್ಟೆಯ ಮೇಲೆಯೂ ಡಿಎನ್‌ಎ ಪತ್ತೆ ಯಾಗಿದೆ. ಮುಖ್ಯವಾಗಿ ಇತರ ಆರೋಪಿಗಳ ಜೊತೆ ಸೇರಿ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಣ ಮಾಡಿರುವ ಆರೋಪವಿದೆ ಎಂದು ಹೇಳಿ ಜಾಮೀನು ನಿರಾಕರಿಸಿತು. ಪವಿತ್ರಾ ಗೌಡ ಪರವಾಗಿ ವಾದಮಂಡಿಸಿದ್ದ ಹಿರಿಯ ವಕೀಲ ಸೆಬಾಸ್ಟಿಯನ್, ರೇಣುಕಾಸ್ವಾಮಿ ಕೊಲೆಯಲ್ಲಿ ಪವಿತ್ರಾ ಅವರ ಯಾವುದೇ ಪಾತ್ರವಿಲ್ಲ. ಮಹಿಳೆ ಎಂಬ ಕಾರಣಕ್ಕೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು.
ಬಳ್ಳಾರಿ ಜೈಲಲ್ಲಿ ಮಂಕಾದ ದರ್ಶನ್: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಶಿಫ್ಟ್ ಆಗಿರುವ ನಟ ದರ್ಶನ್ ಒಬ್ಬಂಟಿಯಾದಂತಾಗಿದ್ದು, ತೀವ್ರ ಮಂಕಾಗಿದ್ದಾರೆ. ಊಟ, ಉಪಾಹಾರ ಸರಿಯಾಗಿ ಮಾಡದೆ ಮೌನವಾಗಿಯೇ ದಿನ ಕಳೆಯತ್ತಿದ್ದಾರೆ. ಜೈಲು ಸಿಬ್ಬಂದಿ ಬಳಿಯೂ ಮಾತನಾಡದೆ ಮೌನಕ್ಕೆ ಜಾರಿರುವ ಅವರು, ಸಮಯ ಕಳೆಯಲು ಪುಸ್ತಕಗಳ ಮೊರೆ ಹೋಗಿದ್ದಾರೆ. ಬಳ್ಳಾರಿ ಜೈಲು ಸೇರಿದ ಬಳಿಕ ಮೊದಲ ದಿನವಾದ ಗುರುವಾರ ರಾತ್ರಿ ಅವರು ಸರಿಯಾಗಿ ಊಟ ಮಾಡಿರಲಿಲ್ಲ. 2ನೇ ದಿನವಾದ ಶುಕ್ರವಾರ ಬೆಳಗಿನ ಉಪಾಹಾರಕ್ಕೆಂದು ನೀಡಿದ್ದ ಉಪ್ಪಿಟ್ಟು, ಮಧ್ಯಾಹ್ನ ರಾಗಿಮುದ್ದೆ, ಚಪಾತಿ ಮತ್ತು ಅನ್ನ ಸಾಂಬಾರು ಸೇವಿಸಿದ್ದಾರೆ.
ನನ್ನ ಗ್ರಹಚಾರ, ಟೈಮ್ ಸರಿಯಿಲ್ಲ ಸರ್ ಅಷ್ಟೇ: ಪೊಲೀಸರ ಮುಂದೆ ದರ್ಶನ್ ಪಶ್ಚಾತ್ತಾಪದ ಮಾತು!
ಬಳ್ಳಾರಿಯ ತಾಪಮಾನ ಸಂಕಷ್ಟ ಅವರಿಗೆ ಸಮಸ್ಯೆ ತಂದೊಡ್ಡಿದೆ, ಜತೆಗೆ ಕಾರಾಗೃಹದ ಸೊಳ್ಳೆಗಳು ನಿದ್ರೆಗೆಡಿಸಿವೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ದರ್ಶನ್ ಕುಟುಂಬ ಸದಸ್ಯರು ಭಾನುವಾರ ಬಳ್ಳಾರಿಗೆ ಬರಲಿದ್ದು, ದರ್ಶನ್ ಭೇಟಿ ಮಾಡಲಿದ್ದಾರೆ. ಬಳ್ಳಾರಿಯಲ್ಲಿನ ವಾತಾವರಣ ಹೊಂದಾಣಿಕೆ ಸೇರಿ ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು ಜೈಲು ಬದಲಾವಣೆಗೆ ಅವರು ಪುನಃ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ವಕೀಲರ ಜತೆ ದರ್ಶನ್ ಚರ್ಚಿಸುವ ಸಾಧ್ಯತೆಯಿದೆ.