ತಡರಾತ್ರಿ ಆದರೂ ಮನೆಗೆ ಹೋಗದೆ ಠಾಣೆ ಮುಂದೆ ನಿಂತ ದರ್ಶನ್ ಅಭಿಮಾನಿಗಳು!
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಅಂಡ್ ಗ್ಯಾಂಗ್ ಸದ್ಯ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿರುವ ಹಿನ್ನೆಲೆ ಮನೆಗೆ ತೆರಳದೇ ಠಾಣೆಯ ಮುಂಭಾಗದಲ್ಲಿ ನಿಂತ ದರ್ಶನ್ ಅಭಿಮಾನಿಗಳು!
ಬೆಂಗಳೂರು (ಜೂ.11): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಅಂಡ್ ಗ್ಯಾಂಗ್ ಸದ್ಯ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿರುವ ಹಿನ್ನೆಲೆ ಠಾಣೆಯ ಮುಂಭಾಗದಲ್ಲಿ ಇನ್ನೂವರೆಗೆ ನಿಂತಿರುವ ದರ್ಶನ್ ಅಭಿಮಾನಿಗಳು. ತಡರಾತ್ರಿ ಆಗಿದೆ ಮನೆಗೆ ತೆರಳುವಂತೆ ಪೊಲೀಸರು ಸೂಚಿಸಿದರೂ ಮನೆಕಡೆ ಹೋಗದೇ ಠಾಣೆ ಮುಂಭಾಗವೇ ಜಮಾಯಿಸಿದ್ದಾರೆ. ಈ ಹಿನ್ನೆಲೆ ಸ್ಟೇಷನ್ ಸುತ್ತಮುತ್ತ ಬ್ಯಾರಿಕೇಡ್ ಹಾಕಿ ಖಾಕಿ ಬಂದೋಬಸ್ತ್ ಮಾಡಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ದರ್ಶನ್ ಹಾಗೂ ಪವಿತ್ರಾ ಗೌಡ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿರುವ ಪೊಲೀಸರು. ರೇಣುಕಾ ಸ್ವಾಮಿ ಮಾಡಿರುವ ಮೆಸೇಜ್ ಹಾಗೂ ಪವಿತ್ರಾ ಗೌಡ ರಿಪ್ಲೇ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಒಂದು ವೇಳೆ ಮೆಸೇಜ್ ಡಿಲಿಟ್ ಆಗಿದ್ರೆ ಎಫ್‌ಎಸ್‌ಎಲ್‌ಗೆ ಕಳುಹಿಸಿ ಮೊಬೈಲ್ ರಿಟ್ರೀವ್ ಮಾಡಿ ಇಬ್ಬರ ನಡುವೆ ನಡೆದ ಸಂಭಾಷಣೆಯ ಸಂಪೂರ್ಣ ಮಾಹಿತಿ ಪಡೆಯಲಿರುವ ಪೊಲೀಸರು.
'ನನ್ನ ಮಗನ್ನ ಸಾಯಿಸಿದಂತೆ ನಟ ದರ್ಶನನ್ನೂ ಸಾಯಿಸಿ ಬಿಡಿ' ಮೃತ ರೇಣುಕಾಸ್ವಾಮಿ ತಾಯಿ ಆಕ್ರೋಶ!
ಯಾವ ವಿಚಾರಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಮೆಸೇಜ್ ಮಾಡಿದ್ದ. ಅವಾಚ್ಯವಾಗಿ ನಿಂದಿಸಿರೋದು ಹೌದಾ? ಯಾವ ವಿಚಾರಕ್ಕೆ ಅವಾಚ್ಯವಾಗಿ ಸಂದೇಶ ಕಳುಹಿಸಲಾಗಿತ್ತು? ಈ ಎಲ್ಲಾ ವಿಚಾರಗಳ ಬಗ್ಗೆ ಪವಿತ್ರಾ ಗೌಡಳಿಂದ ಮಾಹಿತಿ ಕಲೆ ಹಾಕಲಿರುವ ಪೊಲೀಸರು. ಆರೋಪಿಗಳ ಪ್ರತಿಯೊಬ್ಬರ ಮೊಬೈಲ್ ನಂಬರ್ ಸಿಡಿಆರ್ ತೆಗೆದು ಪರಿಶೀಲನೆ ನಡೆಸಲಾಗುತ್ತದೆ. ದರ್ಶನ್ ನಂಬರ್ ರೇಣುಕಾ ಸ್ವಾಮಿ ಕೊಲೆಯಾದಾಗ ಯಾವ ಲೋಕೆಷನ್ ನಲ್ಲಿತ್ತು? ಇನ್ನುಳಿದ ಆರೋಪಿಗಳ ಜೊತೆ ದರ್ಶನ್ ಯಾವಾಗೆಲ್ಲ ಸಂಪರ್ಕದಲ್ಲಿದ್ರು, ರೇಣುಕಾ ಸ್ವಾಮಿಯನ್ನ ಮೊದಲು ತಂದಿಟ್ಟ ಜಾಗದಲ್ಲಿ ಯಾವ ಯಾವ ನಂಬರ್ ಗಳು ಅಕ್ಟೀವ್ ಅಗಿದ್ವೂ ಎಂಬ ಬಗ್ಗೆ ಟೆಕ್ನಿಕಲ್ ಎವಿಡೆನ್ಸ್ ಮುಂದಿಟ್ಟು ಕೊಂಡು ದರ್ಶನ್ ಹಾಗೂ ಇತರೆ ಆರೋಪಿಗಳ ವಿಚಾರಣೆ ನಡೆಸುತ್ತಿರುವ ಪೊಲೀಸರು.
ಹಿಂಸಿಸಿ.. ಕೊಂದು, ಮೋರಿಗೆ ಎಸೆದ್ರು; ಕೊಲೆ ಕೇಸ್‌ನಲ್ಲಿ ದರ್ಶನ್ ಪೊಲೀಸರ ಎದುರು ಹೇಳಿದ್ದೇನು?
ಆರೋಪಿಗಳಿಗೆ ಡೋಲೊ 650 ಮಾತ್ರೆ
ಆರೋಪಿಗಳಿಗೆ ಮಲಗಲು ಬೆಡ್‌ಶೀಟ್, ತಲೆದಿಂಬು ಜೊತೆಗೆ ಕಾರ್ಪೆಟ್ ಕುಡಿಯಲು ನೀರಿನ ಬಾಟೆಲ್ ಒದಗಿಸಿದ ಪೊಲೀಸರು. ಅಲ್ಲದೇ ಬಂಧನದ ಭಯದಲ್ಲಿ ಆರೋಪಿಗಳಿಗೆ ತಲೆನೋವು ಬಂದಿರುವ ಹಿನ್ನೆಲೆ ಡೋಲೊ 650 ಮಾತ್ರೆ ಕೂಡ ನೀಡಲಾಗಿದೆ. ಜೊತೆಗೆ ಮೈಕೈ ನೋವು ಅಂತಾ ಟ್ಯಾಬ್ಲೆಟ್ ತರಿಸಿಕೊಂಡ ಆರೋಪಿಗಳು