Asianet Suvarna News Asianet Suvarna News

ಹಿಂಸಿಸಿ.. ಕೊಂದು, ಮೋರಿಗೆ ಎಸೆದ್ರು; ಕೊಲೆ ಕೇಸ್‌ನಲ್ಲಿ ದರ್ಶನ್‌ ಪೊಲೀಸರ ಎದುರು ಹೇಳಿದ್ದೇನು?


ರೇಣುಕಾಸ್ವಾಮಿ ಮರ್ಡರ್‌ ಕೇಸ್‌ನಲ್ಲಿ ಡಿ ಗ್ಯಾಂಗ್‌ ಪೊಲೀಸ್‌ ಕಸ್ಟಡಿಗೆ ಸೇರಿದ್ದಾರೆ. ಕೋರ್ಟ್‌ ದರ್ಶನ್‌ ಸೇರಿದಂತೆ 13 ಮಂದಿ ಆರೋಪಿಗಳನ್ನ 6 ದಿನ ಪೊಲೀಸ್‌ ಕಸ್ಟಡಿಗೆ ನೀಡಿದೆ.

ಬೆಂಗಳೂರು (ಜೂ.11): ಚಿತ್ರದುರ್ಗದ ಸಾಮಾನ್ಯ ವ್ಯಕ್ತಿ ರೇಣುಕಾಸ್ವಾಮಿ ಮರ್ಡರ್‌ ಕೇಸ್‌ನಲ್ಲಿ ನಟ ದರ್ಶನ್‌ ಪೊಲೀಸ್ ಕಸ್ಟಡಿಗೆ ಸೇರಿದ್ದಾರೆ. ಇದರ ನಡುವೆ ಪೊಲೀಸರು ಕೂಡ  ದರ್ಶನ್‌ ಅವರ ವಿಚಾರಣೆ ನಡೆಸಿದ್ದು ಮಾಹಿತಿಗಳನ್ನು ಕಲೆ ಹಾಕಿದ್ದಾರೆ.

ವಿಚಾರಣೆಯ ವೇಳೆ ದರ್ಶನ್‌, ನಾನು ಕೊಲೆ ಮಾಡಿಲ್ಲ.. ಕಪಾಳಕ್ಕೆ ಒಂದೇಟು ಹೊಡೆದಿದ್ದೆ ಅಷ್ಟೇ. ಕೊಲೆ ಮಾಡುವ ಉದ್ದೇಶ ನನಗಿರಲಿಲ್ಲ, ಎಚ್ಚರಿಕೆ ನೀಡಿದ್ದೆ ಎಂದು ಹೇಳಿದ್ದಾರೆ.  ಪೊಲೀಸ್ ವಿಚಾರಣೆಯಲ್ಲಿ ಎಲ್ಲೂ ತಾವು ಕೊಲೆ ಮಾಡಿಲ್ಲ ಎಂದಿದ್ದಾರೆ.

ಅಂದು ನಾನು ಆ ಶೆಡ್ ಗೆ ಹೋಗಿರುವುದು ನಿಜ. ನಾನು ಒಂದೇಟು ಕಪಾಳಕ್ಕೆ ಹೊಡೆದಿರುವುದು ನಿಜ. ರೇಣುಕಾಸ್ವಾಮಿ ಕೊಲೆ ಮಾಡುವ ಉದ್ದೇಶ ನನಗಿಲ್ಲ. ಮತ್ತೆ ಈ ರೀತಿ ಮಾಡಬೇಡ ಅಂತಾ ಎಚ್ಚರಿಸಿದ್ದೆ. ಆ ಬಳಿಕ ಊಟ ಕೊಟ್ಟು ಕಳಿಸಿ ಅಂತಾ ಹೇಳಿದ್ದೇನೆ . ವಾರ್ನಿಂಗ್ ಮಾಡಿ ಬೇಗ ವಾಪಾಸ್ ಬಂದುಬಿಟ್ಟೆ. ಇಷ್ಟು ಬಿಟ್ಟರೆ ನನಗೆ ಈ ಕೇಸ್​ನಲ್ಲಿ ಬೇರೇನೂ ಗೊತ್ತಿಲ್ಲ ಎಂದು ದರ್ಶನ್‌ ಹೇಳಿದ್ದಾರೆ.