Asianet Suvarna News Asianet Suvarna News

ವಾಣಿಜ್ಯ ಮಳಿಗೆ, ಹೋಟೆಲ್‌ಗಳಿಗೆ ಬಾಡಿಗೆ ವಿನಾಯಿತಿ...!

ಲಾಕ್‌ಡೌನ್‌ನಿಂದಾಗಿ ಎಲ್ಲಾ ರೀತಿಯ ಉದ್ಯಮಗಳು ಬಂದ್ ಆಗಿವೆ. ಕೆಎಸ್‌ಆರ್‌ಟಿಸಿಯೂ ಕೂಡಾ ಇದರಿಂದ ಹೊರತಾಗಿಲ್ಲ. ಆದರೂ ಸಂಸ್ಥೆಯ ಬಸ್‌ ನಿಲ್ದಾಣಗಳಲ್ಲಿರೋ ವಾಣಿಜ್ಯ ಮಳಿಗೆಗಳು, ಹೋಟೆಲ್‌ಗಳು, ಜಾಹೀರಾತುದಾರರಿಗೆ ಸಿಹಿಸುದ್ದಿಯನ್ನು ನೀಡಿದೆ.

Rent relief for commerial shops Which In ksrtc bus station
Author
Bengaluru, First Published Apr 24, 2020, 9:25 PM IST

ಬೆಂಗಳೂರು, (ಏ.24): ಲಾಕ್‌ಡೌನ್‌ನಿಂದಾಗಿ  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿದೆ. ಇದರ ಮಧ್ಯೆಯೂ ಬಸ್‌ ನಿಲ್ದಾಣಗಲ್ಲಿ ಇರುವ ಮಳಿಗೆಗಳಿಗೆ ಬಾಡಿಗೆ ವಿನಾಯಿತಿ ನೀಡಿ ಮಾನವೀಯತೆ ಮೆರೆದಿದೆ.

 ಹೌದು...ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ಪರವಾನಿಗೆ ಪಡೆದು ಕಾರ್ಯನಿರ್ವಹಿಸುತ್ತಿದ್ದ ವಾಣಿಜ್ಯ ಮಳಿಗೆಗಳು, ಹೋಟೆಲ್‌ ಮಾಲೀಕರು ಲಾಕ್‌ಡೌನ್ ಮುಗಿಯುವವರೆಗೆ ಬಾಡಿಗೆ ನೀಡುವಂತಿಲ್ಲ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ. 

ಲಾಕ್‌ ಆಗಿರುವ ಕೂಲಿ ಕಾರ್ಮಿಕರು ತಮ್ಮ-ತಮ್ಮ ಊರಿಗೆ ಹೋಗಲು ಅವಕಾಶ

ಇಂದು (ಶುಕ್ರವಾರ) ಸುತ್ತೋಲೆ ಹೊರಡಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮಾನವೀಯತೆ ದೃಷ್ಟಿಯಿಂದ ಲಾಕ್‌ಡೌನ್ ಘೋಷಣೆಯಾದ ಮಾರ್ಚ್‌ 22ರಿಂದ ಮುಗಿಯುವವರೆಗೂ ಬಾಡಿಗೆ ವಿನಾಯಿತಿಯನ್ನು ನೀಡಿದೆ.

ಅಲ್ಲದೇ ಕೆಸ್‌ಆರ್‌ಟಿಸಿಗೆ ಜಾಹೀರಾತು ನೀಡುತ್ತಿದ್ದ ಜಾಹೀರಾತುದಾರರು ಕೂಡಾ ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ. ಮೊಬೈಲ್ ಟವರ್ ಮತ್ತು ಎಟಿಎಂ ಇರುವ ಕಟ್ಟಡಗಳಿಗೆ ಬಾಡಿಗೆಯಿಂದ ವಿನಾಯಿತಿ ಇಲ್ಲ. 

ಹೋಟೆಲ್ ಮಾಲೀಕರು, ವಾಣಿಜ್ಯ ಮಳಿಗೆ ಮಾಲೀಕರು ಒಂದು ವೇಳೆ ಮಾರ್ಚ್‌ ತಿಂಗಳಿನ ಬಾಡಿಗೆ ನೀಡಿದ್ದರೆ, ಅದನ್ನು ಲಾಕ್‌ಡೌನ್ ಬಳಿಕ ಕಾರ್ಯನಿರ್ವಹಿಸುವ 10 ದಿನಗಳ ಬಾಡಿಗೆಗೆ ವಿನಾಯಿತಿ ನೀಡಲಾಗುತ್ತದೆ ಎಂದು ತನ್ನ ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಕೆಎಸ್‌ಆರ್‌ಟಿಸಿ ಸುತ್ತೋಲೆ‌ ಹೊರಡಿಸಿದೆ.

Follow Us:
Download App:
  • android
  • ios