Asianet Suvarna News Asianet Suvarna News

ಕನ್ನಡದ ಖ್ಯಾತ ಸಾಹಿತಿ, ಹಿರಿಯ ಜಾನಪದ ವಿದ್ವಾಂಸ ಪ್ರೊ.ಅಮೃತ ಸೋಮೇಶ್ವರ ಇನ್ನಿಲ್ಲ

ಖ್ಯಾತ ಸಾಹಿತಿ, ಹಿರಿಯ ಜಾನಪದ ವಿದ್ವಾಂಸ ಪ್ರೊ.ಅಮೃತ ಸೋಮೇಶ್ವರ(88) ಅವರು ಶನಿವಾರ ಬೆಳಿಗ್ಗೆ ತಮ್ಮ ಸ್ವಗೃಹ ಸೋಮೇಶ್ವರದ "ಒಲುಮೆ"ಯಲ್ಲಿ ನಿಧನರಾಗಿದ್ದಾರೆ.

Renowned Kannada literature senior folklore scholar Prof. Amrutha Someshwara passed away gow
Author
First Published Jan 6, 2024, 12:31 PM IST

ಮಂಗಳೂರು (ಜ.6): ಖ್ಯಾತ ಸಾಹಿತಿ, ಹಿರಿಯ ಜಾನಪದ ವಿದ್ವಾಂಸ ಪ್ರೊ.ಅಮೃತ ಸೋಮೇಶ್ವರ(88) ಅವರು ಶನಿವಾರ ಬೆಳಿಗ್ಗೆ ತಮ್ಮ ಸ್ವಗೃಹ ಸೋಮೇಶ್ವರದ "ಒಲುಮೆ"ಯಲ್ಲಿ ನಿಧನರಾಗಿದ್ದಾರೆ.  ಕನ್ನಡ, ತುಳು ಸಾಹಿತಿ, ಯಕ್ಷಗಾನ ಪ್ರಸಂಗಕರ್ತರಾಗಿದ್ದ ಇವರು ಸಜ್ಜನರಾಗಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ  ಮಂಗಳೂರು ತಾಲೂಕಿನ ಸೋಮೇಶ್ವರ ಗ್ರಾಮದ ಅಡ್ಕ ನಿವಾಸಿಯಾಗಿರುವ ಅಮೃತ ಸೋಮೇಶ್ವರ ಅವರು 1935 ಸೆಪ್ಟೆಂಬರ್ 27‌ ರಂದು ಜನಿಸಿದ್ದು, ತಮ್ಮ ಬಾಲ್ಯ ಜೀವನವನ್ನು ಮುಂಬೈನಲ್ಲಿ ಕಳೆದು ಬಳಿಕ ಐದು ವರ್ಷದವರಿದ್ದಾಗ ತಮ್ಮ ಊರಿಗೆ ಮರಳಿ ವಿದ್ಯಾಭ್ಯಾಸ ಮಾಡಿದರು.

ಅವಧಿ ಮೀರಿ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ಗುಂಡು ತುಂಡು ಪಾರ್ಟಿ, ಜಟ್ಲಾಗ್ ರೆಸ್ಟೋಬಾರ್ ವಿರುದ್ಧ ಎಫ್ಐಆರ್

1954ರಲ್ಲಿ ಎಸೆಸೆಲ್ಸಿ ಪೂರ್ಣಗೊಳಿಸಿದ ಅಮೃತರು ಬಳಿಕ ಸಾಹಿತ್ಯದ ಹೆಚ್ಚಿನ ಒಲವು ಹೊಂದಿ ಕಥೆ ಕವನಗಳ ರಚನೆ ಜೊತೆಗೆ ಯಕ್ಷಗಾನ ಪ್ರಸಂಗವನ್ನು ಕೂಡಾ ರಚಿಸಿದ್ದಾರೆ. ಸಾಕಷ್ಟು ಧ್ವನಿಸುರುಳಿಗಳಿಗೆ ಸಾಹಿತ್ಯ ಬರೆದಿದ್ದು, ಸೋಮೇಶ್ವರ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇವರ ಕೃತಿಗಳಲ್ಲಿ ಕೆಲವು ಪಠ್ಯಪುಸ್ತಕದಲ್ಲಿ ಕೂಡ ಇತ್ತು.

ತುಳುನಾಡಿನ ಸಂಸ್ಕ್ರತಿ ಮತ್ತು ಕಲೆಯ ಬಗೆಗೆ ವಿಶೇಷ ಅಭಿಮಾನ ಹೊಂದಿದ್ದ ಇವರ ಮೊದಲ ಕೃತಿ 'ಎಲೆಗಿಳಿ' ಎಂಬ ಸಣ್ಣಕತೆ 1957ರಲ್ಲಿ ಪ್ರಕಟವಾಯಿತು.  ರುದ್ರಶಿಲೆ ಸಾಕ್ಷಿ, ಕೆಂಪು ನೆನಪು, ಮಾನವತೆ ಗೆದ್ದಾಗ ಮತ್ತು ಇತರ ಕಥೆಗಳು  ಇತರ ಸಣ್ಣ ಕಥಾ ಸಂಕಲನಗಳು.

5 ಬಾರಿ ಮದುವೆಯಾದ ನಟಿಗೆ ಒಲಿಯದ ಗಂಡಂದಿರ ಪ್ರೀತಿ, ನಯಾಪೈಸೆ ಇಲ್ಲದೆ ಮರಣ, ದೇಣಿಗೆ ಸಂಗ್ರಹಿಸಿ ಅಂತ್ಯಸಂಸ್ಕಾರ!

ವನಮಾಲೆ, ಭ್ರಮಣ ಉಪ್ಪು ಗಾಳಿ ಮೊದಲಾದ ಕವನ ಸಂಕಲನ, ತೀರದ ತೆರೆ ಕಾದಂಬರಿ ಬರೆದಿದ್ದಾರೆ. ಇದಲ್ಲದೆ ಯಕ್ಷಗಾನ ಕೃತಿ ಸಂಪುಟ, ತುಳು ಪಾಡ್ದನದ ಕಥೆಗಳು, ಅವಿಲು, ತುಳು ಬದುಕು, ಯಕ್ಷಗಾನ ಹೆಜ್ಜೆಗುರುತು, ಭಗವತಿ ಆರಾಧನೆ, ಮೋಯ-ಮಲೆಯಾಳ ನಿಘಂಟು ಮೊದಲಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ತುಳುವಿನಲ್ಲೂ ಬರೆಯಬಲ್ಲ ಅಮೃತರು 'ತಂಬಿಲ', 'ರಂಗಿತ' ಕವನ ಸಂಗ್ರಹ, 'ಗೋಂದೋಲ್', 'ರಾಯ ರಾವುತೆ' ಮೊದಲಾದ ನಾಟಕಗಳನ್ನು ಪ್ರಕಟಿಸಿದವರು.

ಅಮೃತರಿಗೆ 10 ಕ್ಕೂ ಹೆಚ್ಚು ಅನೇಕ ಪ್ರಶಸ್ತಿಗಳು ಸಂದಿವೆ. ಮುಖ್ಯವಾಗಿ  ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಹಾಗೂ ಯಕ್ಷಾನ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತರಾಗಿದ್ದಾರೆ.

Follow Us:
Download App:
  • android
  • ios