ಖ್ಯಾತ ಜಾನಪದ ವಿದ್ವಾಂಸ, ಚಿಂತಕ ಪ್ರೊ. ಜ್ಯೋತಿ ಹೊಸೂರ ನಿಧನ, ದೇಹದಾನ
* ಖ್ಯಾತ ಜಾನಪದ ವಿದ್ವಾಂಸ, ಚಿಂತಕ ಪ್ರೊ. ಜ್ಯೋತಿ ಹೊಸೂರ ನಿಧನ
* ಹೃದಯಾಘಾತದಿಂದ ಕೊನೆಯುಸಿರೆಳೆದ ಪ್ರೊ. ಜ್ಯೋತಿ ಹೊಸೂರ
* ಸಾಹಿತ್ಯ, ಜಾನಪದ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ರು
ಬೆಳಗಾವಿ, (ನ.01): ನಾಡಿನ ಖ್ಯಾತ ಜಾನಪದ (folk) ವಿದ್ವಾಂಸರು ಹಾಗೂ ಸಾಹಿತಿಗಳು ಆದ ಪ್ರೋ. ಜ್ಯೋತಿ ಹೊಸರ )Prof Jyoti Hosura) ಅವರು ಇಂದು (ಸೋಮವಾರ) ಬೆಳಗಾವಿಯ (Belagavi) ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅವರಿಗೆ 84 ವರ್ಷ ವಯಸ್ಸಾಗಿತ್ತು. ಹೃದಯಾಘಾತ ಕಾಣಿಸಿಕೊಂಡ ಕಾರಣ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು. ಕೆಎಲ್ಇ (KLE) ಸಂಸ್ಥೆಗೆ ದೇಹದಾನ ಮಾಡುವ ಮೂಲಕ ಸಾವಿನಲ್ಲೂ ಅವರು ಸಾರ್ಥಕತೆ ಮೆರೆದಿದ್ದಾರೆ.
'ಪುನೀತ್ರನ್ನ ಶವವಾಗಿ ನೋಡುವುದಕ್ಕೆ ಮನಸ್ಸಾಗಿಲ್ಲ, ಹಾಗಾಗಿ ಬಂದಿರಲಿಲ್ಲ'
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿವಾಸಿಯಾಗಿದ್ದ ಪ್ರೊ.ಜ್ಯೋತಿ ಹೊಸೂರ ಸಾಹಿತ್ಯ, ಜಾನಪದ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಜಾನಪದ ಸಾಹಿತ್ಯದಲ್ಲಿ ಗಾದೆ, ಒಡಪು ಹಾಗು ಗ್ರಾಮದೇವತೆ ಬಗ್ಗೆ ಅವರು ಮಾಡಿರುವ ಸಂಶೋಧನೆಗಳು ವಿದ್ವತ್ ಪ್ರಪಂಚದಲ್ಲಿ ಗೌರವ ಪಡೆದಿದ್ದವು.
ಹೊಸೂರ ಅವರು ಕೈಗೊಂಡಿರುವ ಸಂಶೋಧನೆಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದವು. ಶಂಬಾ ಜೋಶಿಯವರ ಸಂಶೋಧನೆಯ ಬಗ್ಗೆ ವಿಶೇಷ ಅಧ್ಯಯನ ಮಾಡಿದ ಜ್ಯೋತಿ ಹೊಸೂರ ಕಾಲಗತಿ ಪ್ರಕಾಶನ ಎಂಬ ಸಂಸ್ಥೆ ಸ್ಥಾಪಿಸಿ, ಆ ಮೂಲಕ ಶಂಬಾ ಜೋಶಿಯವರ ಸಮಗ್ರ ಸಾಹಿತ್ಯವನ್ನು ಪ್ರಕಟಿಸಿದ್ದರು.ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ಕನಕದಾಸ ಹಾಗು ವಚನ ಸಾಹಿತ್ಯ ಕುರಿತು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ.
ಇವರ ಸಾಹಿತ್ಯ ಸೇವೆ ಪರಿಗಣಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ, ಬೆಟಗೇರಿ ಕೃಷ್ಣಶರ್ಮಾ ಸಂಶೋಧಕ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.