* ಇಂದು(ಜೂನ್.20) ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ.* ಮೋದಿಯ ತಲೆಯ ಮೇಲೆ ಮೀರ ಮೀರ ರಾರಾಜಿಸುವ ಆಕರ್ಷಕ ಪೇಟ.* ಮೈಸೂರು ಮಹಾರಾಜರಂತೆ ಕೆಂಪು ಪೇಟೆ ತೊಡಿಸಲು ತಯಾರಿ

ಮೈಸೂರು, (ಜೂನ್.20): ವಿಶ್ವ ಯೋಗ ದಿನಾಚರಣೆಗೆ ಮೈಸೂರು ಸಜ್ಜಾಗಿದ್ದು, ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುತ್ತಿರುವುದದು ವಿಶೇಷ. ಜಗತ್ ಪ್ರಸಿದ್ಧ ಅರಮನೆ ಆವರಣದಲ್ಲಿ ಯೋಗ ದಿನಾಚರಣೆ ಹಿನ್ನೆಲೆ ಅರಮನೆಯ ಪೂರ್ವ ದಿಕ್ಕಿನಲ್ಲಿ ಭವ್ಯ ವೇದಿಕೆ ನಿರ್ಮಾಣ ಮಾಡಲಾಗಿದೆ.ಜಯ ಮಾರ್ತಾಂಡ ದ್ವಾರದ ಬಳಿ ಭವ್ಯ ವೇದಿಕೆ ನಿರ್ಮಾಣವಾಗಿದ್ದು, ಅರಮನೆ ಆವರಣದ ಬಹುತೇಕ ಕಡೆ LED ಪರದೆಗಳ ಅಳವಡಿಕೆ ಮಾಡಲಾಗಿದೆ. 

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವೇಳೆ ಅರಮನೆ ಆವರಣದಲ್ಲಿ ನಡೆಯಲಿರುವ ಬೃಹತ್ ಯೋಗ ಪ್ರದರ್ಶನ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪಾಲ್ಗೊಳ್ಳಲು ಮೈಸೂರು ರಾಜ ಮನೆತನದ ಕುಟುಂಬಕ್ಕೆ ಆಹ್ವಾನ ನೀಡಲಾಗಿದೆ. ಅರಮನೆಯ ಯೋಗ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಾಜ ಮನೆತನದವರು ವೇದಿಕೆ ಹಂಚಿಕೊಳ್ಳಲಿದ್ದಾರೆ. ನಂತರ ಪ್ರಮೋದದೇವಿ ಒಡೆಯರ್ ಅವರ ಆಹ್ವಾನದ ಮೇರೆಗೆ ಮೋದಿಯವರು ಉಪಹಾರದಲ್ಲಿ ಭಾಗಿಯಾಗಲಿದ್ದಾರೆ.

ಪ್ರಧಾನಿ ಸ್ವಾಗತಕ್ಕೆ ಮೈಸೂರು ಸಜ್ಜು, ಈ ಬಾರಿಯೂ ಮೋದಿ ತಂಗೊದು ಅದೇ ಕೊಠಡಿಯಲ್ಲೇ

ಮೋದಿ ಸಿದ್ಧವಾಗಿದೆ ಮೈಸೂರು ಪೇಟ
ಹೌದು....ಮಂಗಳವಾರ ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಮೈಸೂರು ರಾಜಮನೆತನದದಿಂದ ವಿಶೇಷ ಪೇಟ ಸಿದ್ಧವಾಗಿದೆ. ಮೈಸೂರು ಮಹಾರಾಜರಂತೆ ಕೆಂಪು ಪೇಟೆ ತೊಡಿಸಲು ತಯಾರಿ ಮಾಡಿಕೊಳ್ಳಲಾಗಿದೆ. 

Scroll to load tweet…

ಮೈಸೂರಿನ ಕಲಾವಿದ ನಂದನ್ ಎನ್ನುವರು ಮೋದಿಗಾಗಿ ಆಕರ್ಷಕ ಪೇಟ ಸಿದ್ದಪಡಿಸಿದ್ದು, ಮೋದಿಯ ತಲೆಯ ಮೇಲೆ ಪೇಟ ಮೀರ ಮೀರ ರಾರಾಜಿಸಲಿದೆ. ರೇಷ್ಮೇ ನೂಲಗಳಿಂದ ಕೆಂಪು ಹಾಗೂ ಗೋಲ್ಡ್ ಕಲರ್ ಮೈಸೂರು ಸಾಂಪ್ರದಾಯಿಕ ಶೈಲಿಯ ಪೇಟ ತಯಾರಿಸಲಾಗಿದ್ದು. ಇಂದು ಸಂಜೆ ಮಹಾರಾಜ ಕಾಲೇಜು ಮೈದಾನದಲ್ಲಿ ಮೋದಿಗೆ ಮೈಸೂರು ಪೇಟ ತೊಡಿಸಲು ತೀರ್ಮಾನಿಸಲಾಗಿದೆ. ಆದ್ರೆ, ಇದಕ್ಕೆ ಎಸ್‌ಪಿಜಿಯಿಂದ ಕ್ಲಿಯರೆನ್ಸ್ ಸಿಕ್ಕಿಲ್ಲ.

Scroll to load tweet…