ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಹಸಿರಾಗಿರುವಂತೆಯೇ ಕೆಫೆಯ ಮತ್ತೊಂದು ಬ್ರಾಂಚ್ ನಲ್ಲೂ ಇಂತಹುದೇ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿತ್ತು ಎಂದು ರಾಮೇಶ್ವರಂ ಕೆಫೆ ಮಾಲೀಕ ಹಾಗೂ ಸಿಇಒ ರಾಘವೇಂದ್ರ ರಾವ್ ಹೇಳಿದ್ದಾರೆ.
ಬೆಂಗಳೂರು (ಮಾ.3): ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಹಸಿರಾಗಿರುವಂತೆಯೇ ಕೆಫೆಯ ಮತ್ತೊಂದು ಬ್ರಾಂಚ್ ನಲ್ಲೂ ಇಂತಹುದೇ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿತ್ತು ಎಂದು ರಾಮೇಶ್ವರಂ ಕೆಫೆ ಮಾಲೀಕ ಹಾಗೂ ಸಿಇಒ ರಾಘವೇಂದ್ರ ರಾವ್ ಹೇಳಿದ್ದಾರೆ.
ಸ್ಫೋಟ ಸಂಭವಿಸಿದ ವೈಟ್ ಫೀಲ್ಡ್ ನಲ್ಲಿರುವ ರಾಮೇಶ್ವರಂ ಕೆಫೆ ಬ್ರಾಂಚ್ ಗೆ ಭೇಟಿ ನೀಡಿದ್ದ ಸಿಇಒ ರಾಘವೇಂದ್ರ ರಾವ್ ಅವರು, ಇಂದು ಸಂಜೆಯಿಂದ ರಾಮೇಶ್ವರಂ ಕೆಫೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಪೊಲೀಸರು ಅನುಮತಿ ನೀಡಿದ್ದಾರೆ. ನಿನ್ನೆ ಘಟನೆ ಬಗ್ಗೆ ಎಲ್ಲರೂ ನನ್ನ ಜೊತೆಯಲ್ಲಿ ನಿಂತಿದ್ದು, ನಮ್ಮ ಸಂಸ್ಥೆಯ ಪರವಾಗಿ ಎಲ್ಲರಿಗೂ ವಂದನೆ ಹೇಳುತ್ತೇನೆ. ಇದು ನಿನ್ನೆ ಮೊನ್ನೆ ಹುಟ್ಟಿದ ಸಂಸ್ಥೆ ಅಲ್ಲ. 2012 ರಲ್ಲಿ ನಾಲ್ಕು ಜನ ಸೇರಿಕೊಂಡು ಕುಮಾರಪಾರ್ಕ್ ಬಳಿಯ ಪುಟ್ ಪಾತ್ ಮೇಲೆ ಆರಂಭಿಸಿದ್ದೆವು. ಅವತ್ತಿಂದಲೇ ನಮಗೆ ಕಷ್ಟಗಳು ಎದುರಾದವು, ಇದು ನಮಗೆ ಹೊಸದೇನಲ್ಲ. ನಾನು ನಂಬಿರೋದು ಎಪಿಜೆ ಅಬ್ದುಲ್ ಕಲಾಂ. ಅವರ ಪ್ರೇರಣೆ ಮೇಲೆ ರಾಮೇಶ್ವರಂ ಕೆಫೆ ಶುರು ಮಾಡಲಾಗಿದೆ ಎಂದರು.
Rameshwaram cafe blast: ಬಾಂಬರ್‌ಗಾಗಿ ಪೊಲೀಸರ ತಲಾಶ್, ಲಕ್ಷ ಲಕ್ಷ ಮೊಬೈಲ್ ಕರೆಗಳ ತಪಾಸಣೆ!
2 ಸಾವಿರ ಮಂದಿಗೆ ಕೆಲಸ ನೀಡಿದ್ದೇವೆ
ನಮ್ಮಲ್ಲಿ ಎಲ್ಲಾ ಬ್ರಾಂಚ್ ಸೇರಿ ಎರಡು ಸಾವಿರ ಜನ ಕೆಲಸ ಮಾಡ್ತಾರೆ. ಎಲ್ಲರೂ ಹಳ್ಳಿ ಕಡೆಯವರು. ಏನೂ ಮಾಡೋಕೆ ಆಗದವರು ದಿಕ್ಕು ತೋಚದೆ ಬರುವವರಿಗೆ ನಾವು ಕೆಲಸ ಕೊಡುತ್ತೇವೆ ಎಂದರು.
ಪೈಪೋಟಿ ಕೃತ್ಯ ಅಲ್ಲಗಳೆದ ಕೆಫೆ ಮಾಲೀಕ
ಇನ್ನು ಇತರೆ ಹೊಟೆಲ್ ಗಳ ಪೈಪೋಟಿಯಿಂದ ಈ ಕೃತ್ಯ ನಡೆದಿರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಮೇಶ್ವರಂ ಕೆಫೆ ಮಾಲೀಕ ರಾಘವೇಂದ್ರ ರಾವ್ ಅವರು, 'ಇಲ್ಲ ಅದು ಸಾಧ್ಯವಿಲ್ಲ.. ಹೊಟೇಲ್ ಬ್ಯುಸಿನೆಸ್ ಮಾಡುವವರು ಈ ರೀತಿ ಕೃತ್ಯ ಮಾಡುವುದಿಲ್ಲ. ಅನ್ನ ಹಾಕುವವರು ನಾವು ಇಂತಹ ಕೆಲಸ ಮಾಡಲ್ಲ ಎಂದರು. ಅಂತೆಯೇ ಪ್ರತಿ ಹಂತದಲ್ಲಿ ಹೊಡೆತ ಬಿದ್ದಿದೆ. ಶುಕ್ರವಾರ ನಡೆದ ಘಟನೆ ಸರಿಯಲ್ಲ. ಭಾರತೀಯರಾಗಿ ಇದನ್ನ ಖಂಡಿಸಬೇಕು. ಇದು ನಮಗೆಲ್ಲಾ ಮುನ್ನೆಚ್ಚರಿಕೆಯಾಗಿದ್ದು, ನಡೆದ ಘಟನೆಯನ್ನು ಎದುರಿಸಬೇಕಿದೆ ಎಂದರು.
ಬೆಂಗಳೂರು ಜನಸಂದಣಿ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಿ; ಇಂಟೆಲಿಜೆನ್ಸ್ ಅಲರ್ಟ್ ಆಗಿರಿ: ಸಿಎಂ ಸಿದ್ದರಾಮಯ್ಯ ಸೂಚನೆ
