ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಗೋಕಾಕ್‌ ಶಾಸಕ ರಮೇಶ್ ಜಾರಕಿಹೊಳಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. 

ಬೆಳಗಾವಿ[ಡಿ.23]: ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನದಿಂದ ಕೈಬಿಟ್ಟಬೆನ್ನಲ್ಲೇ ಗೋಕಾಕ್‌ ಶಾಸಕ ರಮೇಶ ಜಾರಕಿಹೊಳಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರ ಮೊಬೈಲ್‌ ಸ್ವಿಚ್‌್ಡ ಆಫ್‌ ಆಗಿದ್ದು, ಅವರ ನಡೆ ಈಗ ನಿಗೂಢವಾಗಿದೆ. ಇದು ಹಲವು ಅನುಮಾನಗಳಿಗೂ ಕಾರಣವಾಗಿದೆ.

ಜಾರಕಿಹೊಳಿ ಗಾಯಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್‌ ಬರೆ

ತಮ್ಮನ್ನು ಸಂಪುಟದಿಂದ ಕೈಬಿಡಲಾಗಿದೆ ಎಂಬ ಮಾಹಿತಿ ಅರಿತ ರಮೇಶ ಜಾರಕಿಹೊಳಿ ಕೂಡಲೇ ತಮ್ಮ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿದ್ದಾರೆ. ಗೋಕಾಕ್‌ನಲ್ಲಿರುವ ಮನೆಯಲ್ಲೂ ಯಾರ ಸಂಪರ್ಕಕ್ಕೂ ಸಿಗದೆ ಸೀದಾ ಬೆಂಗಳೂರಿಗೆ ತೆರಳಿದರು ಎಂದು ಅವರ ಆಪ್ತಮೂಲಗಳು ತಿಳಿಸಿವೆ.

ರಮೇಶ್ ಜಾರಕಿಹೊಳಿ, ಶಂಕರ್‌ ಮಂತ್ರಿಗಿರಿ ಕಿತ್ತುಕೊಂಡಿದ್ಯಾಕೆ? ಕಾಂಗ್ರೆಸ್‌ ಉತ್ತರವೇನು?

ಸಂಪುಟದಿಂದ ಅವರನ್ನು ಕೈಬಿಟ್ಟಿರುವುದನ್ನು ಖಂಡಿಸಿ ಅವರ ಬೆಂಬಲಿಗರಾರ‍ಯರು ಪ್ರತಿಭಟನೆಗೂ ಇಳಿದಿಲ್ಲ. ಪಿಎಲ್‌ಡಿ ಬ್ಯಾಂಕ್‌ ವಿಚಾರವಾಗಿ ಪಕ್ಷವನ್ನು ಎದುರು ಹಾಕಿಕೊಂಡಿದ್ದ, ಪಕ್ಷದ ಮತ್ತೊಬ್ಬ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್‌ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದ ರಮೇಶ್‌ ಅವರಿಗೆ ಕಾಂಗ್ರೆಸ್‌ನಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನ ಇತ್ತು. ಕೆಲ ತಿಂಗಳಿಂದ ಅವರು ಸಚಿವ ಸಂಪುಟ ಸಭೆಗಳಿಗೂ ಸತತ ಗೈರಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ರಮೇಶ್‌ ಜಾರಕಿಹೊಳಿ ಮುಂದಿನ ರಾಜಕೀಯ ನಡೆ ತೀವ್ರ ಕುತೂಹಲ ಮೂಡಿಸಿದೆ.