Asianet Suvarna News Asianet Suvarna News

ರಾಮನ ಜನ್ಮಸ್ಥಳ ಹಿಂದುಗಳ ಪವಿತ್ರ ಪುಣ್ಯಭೂಮಿ: ಚಕ್ರವರ್ತಿ ಸೂಲಿಬೆಲೆ

ರಾಮನ ಜನ್ಮಸ್ಥಳ ಅಯೋಧ್ಯೆ ಅಸಂಖ್ಯಾತ ಹಿಂದುಗಳ ಪವಿತ್ರ ಪುಣ್ಯಭೂಮಿ ಆಗಿದೆ. ಕಾಂಗ್ರೆಸ್‌ ಸರಕಾರ ಅಯೋಧ್ಯೆಯಲ್ಲಿ ರಾಮನ ದೇಗುಲ ನಿರ್ಮಿಸಲು ಎಂದಿಗೂ ಪ್ರಯತ್ನ ಮಾಡಲಿಲ್ಲ. 

Ramas Birthplace Hindu Holy Place Says Chakraborty Chakravarti Sulibele gvd
Author
First Published Oct 12, 2023, 4:45 AM IST

ಚಿಂಚೋಳಿ (ಅ.12): ರಾಮನ ಜನ್ಮಸ್ಥಳ ಅಯೋಧ್ಯೆ ಅಸಂಖ್ಯಾತ ಹಿಂದುಗಳ ಪವಿತ್ರ ಪುಣ್ಯಭೂಮಿ ಆಗಿದೆ. ಕಾಂಗ್ರೆಸ್‌ ಸರಕಾರ ಅಯೋಧ್ಯೆಯಲ್ಲಿ ರಾಮನ ದೇಗುಲ ನಿರ್ಮಿಸಲು ಎಂದಿಗೂ ಪ್ರಯತ್ನ ಮಾಡಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಪ್ರಯತ್ನದಿಂದ ಇಂದು ಆಯೋಧ್ಯೆಯಲ್ಲಿ ರಾಮ ಮಂದಿನ ನಿರ್ಮಾಣಗೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಹಾರಕೂಡ ಚೆನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ವಿಶ್ವಹಿಂದು ಪರಿಷತ್, ಬಜರಂಗ ದಳ ಏರ್ಪಡಿಸಿದ್ದ ಶೌರ್ಯ ಜಾಗರಣ ರಥಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವು ಅನೇಕ ವರ್ಷಗಳ ನಂತರ ನಡೆಯುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಶೌರ್ಯ ಪ್ರದರ್ಶಿಸಿ ರಾಷ್ಟ್ರ ಮತ್ತು ಧರ್ಮಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರರ ಸ್ಮರಣೆಗಾಗಿ ವಿಎಚ್‌ಪಿ ಶೌರ್ಯ ಜಾಗರಣ ರಥಯಾತ್ರೆ ಹಮ್ಮಿಕೊಂಡಿದೆ. ದೇಶದ ಸಂಸ್ಕೃತಿ ಮತ್ತು ಪರಂಪರೆ ರಕ್ಷಣೆಗೆ ಪ್ರತಿಯೊಬ್ಬರು ಶ್ರಮಿಸಬೇಕು. ಯುವಕರು ದುಶ್ಚಟಗಳಿಂದ ದೂರ ಇರಬೇಕು. 

ಜೊತೆಗೆ ಲವ್ ಜಿಹಾದ್ ಮುಕ್ತ ಭಾರತ ನಿರ್ಮಾಣಕ್ಕೆ ಶ್ರಮಿಸಿರಿ ಎಂದು ಕರೆ ನೀಡಿದರು. ಬೆಂಗಳೂರು ಕ್ಷತ್ರಿಯ ಮಠದ ವಯಂ ಧರ್ಮಚಾರ್ಯ ಸಂಪರ್ಕ ಪ್ರಮುಖ ವಕ್ತಾರ ಬಸವರಾಜ ಹಿರೇಮಠ ಮಾತನಾಡಿ, ಹಿಂದು ಧರ್ಮ ಮತ್ತು ಭಾರತಮಾತೆ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸೋಣ ವಿಶ್ವಹಿಂದು ಪರಿಷತ್‌ನಿಂದ ೮೦ಸಾವಿರಕ್ಕೂ ಅಧಿಕ ಗೋವು ಮತ್ತು 60ಸಾವಿರ ಮಹಿಳೆಯರ ಲವ್ ಜಿಹಾದ್‌ ಬಲಿಯಿಂದ ರಕ್ಷಣೆ ಮಾಡಲಾಗಿದೆ. ಹಿಂದು ಉಳಿವಿಗಾಗಿ ವಿಶ್ವ ಹಿಂದು ಪರಿಷತ್ ಕೆಲಸ ಮಾಡುತ್ತಿದೆ ಎಂದರು.

ಮದುವೆಯಾಗುವ ಹುಡುಗ ಅದಿತಿ ಗಂಡನ ಥರ ಇರಬೇಕು: ನಾನು ರಶ್ಮಿಕಾ ಬಿಂಬ ಎಂದ ಸೋನು ಗೌಡ!

ಸುಲೇಪೇಟ ತೆಂಗಿನಮಠದ ಪೂಜ್ಯಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಶ್ವ ಹಿಂದುಪರಿಷತ ಮತ್ತು ಬಜರಂಗ ದಳ ಮುಖಂಡರಾದ ಮಹಾದೇವ ಅಂಗಡಿ,ಮಹೇಶ ಕಿವಣೋರ, ಬಸವರಾಜ ಸೂಗೂರ, ಅಜಯಕುಮಾರ ಬಿದ್ರಿ, ಅಂಬರೀಶ ಸಾಲೆಗಾಂವ್, ಗುರುರಾಜ ಜೋಶಿ, ಸಂಗೀತ ಪವಾರ, ನಂದಕುಮಾರ ಅವಂಟಗಿ, ಸಿದ್ದಯ್ಯ ಸ್ವಾಮಿ, ವಸಂತಿ ಇಟಗಿ, ಆನಂದ ಗೌಳಿ, ಮಲ್ಲಿಕಾರ್ಜುನ, ಶ್ರೀಧರ ಪಾಟೀಲ, ಶ್ರೀಹರಿ ಕಾಟಾಪೂರ, ಭಾಸ್ಕರ ಕುಲಕರ್ಣಿ ನೀಲಾ ಕನ್ಯಾಕುಮಾರಿ ಮುರುಡಾ, ಭೀಮಶೆಟ್ಟಿಮುಕ್ಕಾ, ಭೀಮಶೆಟ್ಟಿ ಮುರುಡಾ, ಸಂತೋಷ ಗಡಂತಿ ಇನ್ನಿತರಿದ್ದರು.

Follow Us:
Download App:
  • android
  • ios