ರಾಮನಗರ ಹೆಸರು ಬದಲಾವಣೆಯಿಂದ ಅಭಿವೃದ್ಧಿಯಾಗಲಿದೆ: ಶಾಸಕ ಇಕ್ಬಾಲ್ ಹುಸೇನ್

ರಾಮನಗರ ಜಿಲ್ಲೆ ಹೆಸರನ್ನು 'ಬೆಂಗಳೂರು ದಕ್ಷಿಣ' ಜಿಲ್ಲೆಯನ್ನಾಗಿ ಬದಲಿಸುವ ವಿಚಾರಕ್ಕೆ ಬಹಳ ಅಭಿಲಾಷೆ ಇಟ್ಟು ಸಿಎಂ ಬಳಿ ಮನವಿ ಮಾಡಿದ್ದೆವು. ಕ್ಯಾಬಿನೆಟ್‌ನಲ್ಲಿ ಒಳ್ಳೆಯ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಸಂತಸ ವ್ಯಕ್ತಪಡಿಸಿದರು.

Ramanagara MLA Iqbal hussain reacts about cm siddaramaiah cabinet renaming ramanagara district as bengaluru south rav

ರಾಮನಗರ (ಜು.26): ರಾಮನಗರ ಜಿಲ್ಲೆ ಹೆಸರನ್ನು 'ಬೆಂಗಳೂರು ದಕ್ಷಿಣ' ಜಿಲ್ಲೆಯನ್ನಾಗಿ ಬದಲಿಸುವ ವಿಚಾರಕ್ಕೆ ಬಹಳ ಅಭಿಲಾಷೆ ಇಟ್ಟು ಸಿಎಂ ಬಳಿ ಮನವಿ ಮಾಡಿದ್ದೆವು. ಕ್ಯಾಬಿನೆಟ್‌ನಲ್ಲಿ ಒಳ್ಳೆಯ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಸಂತಸ ವ್ಯಕ್ತಪಡಿಸಿದರು.

ರಾಮನಗರ ಜಿಲ್ಲೆ ಹೆಸರನ್ನ ಬೆಂ. ದಕ್ಷಿಣ ಜಿಲ್ಲೆಯಾಗಿ ಬದಲಿಸುವ ನಿರ್ಣಯಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿದ ವಿಚಾರ ಸಂಬಂಧ ಇಂದು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಬಿಡದಿಯವರೆಗೆ, ಇತ್ತ ದಾಬಸ್‌ಪೇಟೆವರೆಗೆ ಬೆಂಗಳೂರು ಬೆಳೆದಿದೆ. "ಗ್ರೇಟರ್ ಬೆಂಗಳೂರು' ಅಡಿಯಲ್ಲಿ ಮುಂದೆ ಅಭಿವೃದ್ಧಿಯಾಗಲಿದೆ. ಬೇರೆಯವರ ಅವಧಿಯಲ್ಲಿ ಜಿಲ್ಲೆಯಲ್ಲಿ ಕುಡಿಯೋಕೂ ನೀರಿರಲಿಲ್ಲ. ಚರಂಡಿ ವ್ಯವಸ್ಥೆ ಇರಲಿಲ್ಲ. ಮೂಲಭೂತ ಸೌಕರ್ಯಗಳಿರಲಿಲ್ಲ. ಈಗ ಅಭಿವೃದ್ಧಿ ಆಗುವತ್ತ ಹೆಜ್ಜೆ ಹಾಕಲಾಗಿದೆ ಎಂದರು.

ಡಿಕೆಶಿ ಭೇಟಿಗೆ ಸಮಯ ಕೇಳಿದ ವಿಜಯಲಕ್ಷ್ಮೀ; ದರ್ಶನ್‌ಗೆ ನ್ಯಾಯ ಕೊಡಿಸಲು ರೆಡಿ ಎಂದ ಡಿಕೆಶಿ!

ಒಳ್ಳೆಯ ಕೆಲಸ ಮಾಡುವಾಗ ಒಳ್ಳೆಯದನ್ನ ಬಯಸಬೇಕು. ಒಳ್ಳೆಯ ಕೆಲಸ ಮಾಡುವಾಗ ರಾಜಕಾರಣ ಮಾಡಬಾರದು. ಕುಡಿಯೋಕೆ ನೀರು ಕೊಟ್ಟು ಬೇರೆ ಯಾವ ಕೆಲಸವನ್ನಾದ್ರೂ ಮಾಡಿ. ಐದು ತಾಲ್ಲೂಕುಗಳು ಕೂಡ ಇದರಲ್ಲಿ ಇರಲಿದೆ. ಹೆಸರು ಬದಲಾವಣೆಯಿಂದ ಅಭಿವೃದ್ಧಿಯಾಗಲಿದೆ. ಕಂದಾಯ ಸಚಿವ ಕೃಷ್ಣಬೈರೇಗೌಡ 17 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ನಾವೆಲ್ಲರೂ ಜಿಲ್ಲೆಯ ಮಕ್ಕಳು, ನಮಗೆ ಗೊತ್ತು ಎಷ್ಟು ಕಷ್ಟ ಇದೆ ಅಂತಾ. ಹೊರಗಿನಿಂದ ಬಂದವರಿಗೆ ಏನು ಗೊತ್ತಿದೆ ನಮ್ಮ ಕಷ್ಟ? ಎಂದು ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.

 

ಬೆಂಗಳೂರಿನಿಂದ ರಾಮನಗರ ಜಿಲ್ಲೆಗೂ ಮೆಟ್ರೋ ವಿಸ್ತರಣೆ; ಡಿಸಿಎಂ ಡಿ.ಕೆ. ಶಿವಕುಮಾರ್ ತವರು ಜಿಲ್ಲೆಗೆ ಗುಡ್ ನ್ಯೂಸ್

 ಹಿಂದೆ ಇದ್ದವರು ಮತಕ್ಕೋಸ್ಕರ ಬಂದು ಓಟು ತೆಗೆದುಕೊಂಡು ಹೋದ್ರೆ ಹೊರತು ಏನೂ ಅಭಿವೃದ್ಧಿಯಾಗಿಲ್ಲ. ಈಗವರು ಚನ್ನಪಟ್ಟಣ ಬೈ ಎಲೆಕ್ಷನ್‌ಗೋಸ್ಕರ ಬೆಂಗಳೂರು ದಕ್ಷಿಣಕ್ಕೆ ಸೇರಿಸುತ್ತಿಲ್ಲ. ವಿರೋಧ ಮಾಡ್ತಿದ್ದಾರೆ. ಚನ್ನಪಟ್ಟಣದಿಂದ ರಾಜ್ಯದವರೆಗೆ ಅಭಿವೃದ್ಧಿ ಆಗಿಲ್ಲ. ಕುಮಾರಸ್ವಾಮಿಯವರು ಏನನ್ನೂ ಅಭಿವೃದ್ಧಿ ಮಾಡಿಲ್ಲ. ಇನ್ಮೇಲೆ ಅಭಿವೃದ್ಧಿ ಆಗತ್ತೆ ನೋಡಿ. ಹಿಂದೆ ಕುಮಾರಸ್ವಾಮಿ ಅವರೇ ಹಾರೋಹಳ್ಳಿ ತಾಲೂಕು ಮಾಡಿದ್ದು ಆದರೆ ಏನೂ ಪ್ರಯೋಜನ ಆಗಿಲ್ಲ. ಸರಿಯಾಗಿ ತಾಲೂಕು ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಕುಮಾರಸ್ವಾಮಿ ಅವರು ಹೇಳೋ ತರಾ ಯಾವುದೇ ಅಭಿವೃದ್ಧಿ ಆಗಿಲ್ಲ. ಕೇವಲ ಬಾಯಲ್ಲಿ ಅಭಿವೃದ್ಧಿ ಬಗ್ಗೆ  ಹೇಳ್ತಾರೆ ಎಂದು ಟೀಕಿಸಿದರು.

Latest Videos
Follow Us:
Download App:
  • android
  • ios