Asianet Suvarna News Asianet Suvarna News

ಡಿಕೆಶಿ ಭೇಟಿಗೆ ಸಮಯ ಕೇಳಿದ ವಿಜಯಲಕ್ಷ್ಮೀ; ದರ್ಶನ್‌ಗೆ ನ್ಯಾಯ ಕೊಡಿಸಲು ರೆಡಿ ಎಂದ ಡಿಕೆಶಿ!

ನಟ ದರ್ಶನ್ ಗೆ ಅನ್ಯಾಯವಾಗಿದ್ದಲ್ಲಿ ನ್ಯಾಯ ಕೊಡಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದರ್ಶನ್ ಅಭಿಮಾನಿಗಳಿಗೆ ಭರವಸೆ ನೀಡಿದರು.

Karnataka DCM DK Shivakumar reacts abou darshan case in ramanagara rav
Author
First Published Jul 25, 2024, 8:26 AM IST | Last Updated Jul 25, 2024, 8:51 AM IST

ರಾಮನಗರ (ಜು.25)  : ನಟ ದರ್ಶನ್ ಗೆ ಅನ್ಯಾಯವಾಗಿದ್ದಲ್ಲಿ ನ್ಯಾಯ ಕೊಡಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದರ್ಶನ್ ಅಭಿಮಾನಿಗಳಿಗೆ ಭರವಸೆ ನೀಡಿದರು.
ಚಾಮುಂಡೇಶ್ವರಿ ಕರಗ ಮಹೋತ್ಸವದ ಅಂಗವಾಗಿ ನಡೆದ ಸಂಗೀತ ರಸ ಸಂಜೆ ಕಾರ್ಯಕ್ರಮದ ವೇದಿಕೆಗೆ ಆಗಮಿಸಿದ್ದ ಅವರು, ಭಾಷಣ ಮಾಡುವ ಸಮಯದಲ್ಲಿ ದರ್ಶನ್ ಅಭಿಮಾನಿಗಳು ಡಿಬಾಸ್ ಎಂದು ಘೋಷಣೆ ಕೂಗಲು ಆರಂಭಿಸಿದರು.

ಬೆಂಗಳೂರಿನಿಂದ ರಾಮನಗರ ಜಿಲ್ಲೆಗೂ ಮೆಟ್ರೋ ವಿಸ್ತರಣೆ; ಡಿಸಿಎಂ ಡಿ.ಕೆ. ಶಿವಕುಮಾರ್ ತವರು ಜಿಲ್ಲೆಗೆ ಗುಡ್ ನ್ಯೂಸ್

ಈ ವೇಳೆ ಡಿ.ಕೆ.ಶಿವಕುಮಾರ್(DK Shivakumar), ದರ್ಶನ್(darshan thugudeepa) ಅವರ ಧರ್ಮಪತ್ನಿ ನನ್ನನ್ನು ಭೇಟಿಯಾಗಲು ಸಮಯ ಕೇಳಿದ್ದಾರೆ. ಬುಧವಾರ ಭೇಟಿ ಸಮಯ ನೀಡಿದ್ದೇನೆ. ದರ್ಶನ್‌ಗೆ ಅನ್ಯಾಯವಾಗಿದ್ದರೆ ನ್ಯಾಯ ಕೊಡಿಸೋಣ. ಹಾಗೇ ಈ ದೇಶದ ಕಾನೂನನ್ನು ಗೌರವಿಸ ಬೇಕಿದೆ. ಕಾನೂನಿನ ಇತಿಮಿತಿಯಲ್ಲಿ ಸಹಾಯ ಮಾಡುವುದಾಗಿ ಸ್ಪಷ್ಟಪಡಿಸಿದರು.
(ಫೋಟೋ ಕಡ್ಡಾಯ)
ರಾಮನಗರ ಕರಗ ಮಹೋತ್ಸದಲ್ಲಿ(Ramanagara karaga mahotsav) ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಶಾಸಕ ಇಕ್ಬಾಲ್ ಹುಸೇನ್(Iqbal hussain) ಹಾಗೂ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗುರುಪ್ರಸಾದ್ ಅಭಿನಂದಿಸಿದರು.

ಸಮಗ್ರ ಅಭಿವೃದ್ಧಿ ಮಾಡಿ ಋಣ ತೀರಿಸುತ್ತೇನೆ:

 ಚುನಾವಣೆಯಲ್ಲಿ ನನಗೆ ಮತ ನೀಡುವಂತೆ ಮನವಿ ಮಾಡಿದ್ದೇ ನೀವೆಲ್ಲಾ ಇಕ್ಬಾಲ್ ಹುಸೇನ್ ಅವರನ್ನು ಗೆಲ್ಲಿಸುವ ಮೂಲಕ ನನಗೆ ಶಕ್ತಿ ನೀಡಿದ್ದೀರಿ. ನಿಮಗೆ ನಾನು ಆಭಾರಿಯಾಗಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದ್ದೇವೆ. ಇಡೀ ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿ ಮಾಡಿ ನಿಮ್ಮ ಋಣ ತೀರಿಸುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಪ್ರಕೃತಿ, ಚಾಮುಂಡಿದೇವಿ ಕಾಂಗ್ರೆಸ್‌ ಸರ್ಕಾರದ ಪರವಿದೆ: ಸಿಎಂ ಸಿದ್ದರಾಮಯ್ಯ

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಮುಂಡೇಶ್ವರಿ ಕರಗ ಮಹೋತ್ಸವ(Chamundeshwari karaga Mahotsav 2024)ದ ಅಂಗವಾಗಿ ನಡೆದ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ತಾಯಿ ಚಾಮುಂಡೇಶ್ವರಿ, ಜನರ ಆಶೀರ್ವಾದ ಪಡೆಯಲು ಬಂದಿದ್ದೇನೆ. ತಾಯಿ ಚಾಮುಂಡಿ ನೊಂದ ಜನರಿಗೆ ನ್ಯಾಯಕೊಡಲಿ ಎಂದು ಪ್ರಾರ್ಥಿಸುತ್ತೇನೆ. ಕೃಷ್ಣಾ ನೀರಾವರಿ ನಿಗಮದ ವ್ಯಾಪ್ತಿಯ ಶಾಸಕರು ಮತ್ತು ಅಧಿಕಾರಿಗಳ ಸಭೆ ನಡೆಸಿ ಇಲ್ಲಿಗೆ ಬರುವುದಕ್ಕೆ ತಡವಾಯಿತು. ಇದಕ್ಕೆ ಕ್ಷಮೆ ಇರಲಿ. ಅಚ್ಚುಕಟ್ಟಾದ ಕಾರ್ಯಕ್ರಮವನ್ನು ಆಯೋಜಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಶಿವಕುಮಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಇಕ್ಬಾಲ್ ಹುಸೇನ್, ಮದ್ದೂರು ಕ್ಷೇತ್ರ ಶಾಸಕ ಉದಯ್, ಮಾಜಿ ಶಾಸಕ ಕೆ.ರಾಜು, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಬಿಎಂಐಸಿಪಿ ಅಧ್ಯಕ್ಷ ರಘುನಂದನ್ ರಾಮಣ್ಣ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗುರುಪ್ರಸಾದ್ , ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಚಿತ್ರನಟರಾದ ದುನಿಯಾ ವಿಜಯ್, ನೆನಪಿರಲಿ ಪ್ರೇಮ್ ಮತ್ತಿತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios