Asianet Suvarna News Asianet Suvarna News

ರಾಜಕಾರಣಿಗಳಷ್ಟು ನಿರ್ಲಜ್ಜ, ನೀಚರು ಯಾರೂ ಇಲ್ಲ : ಮುತಾಲಿಕ್ ವಾಗ್ದಾಳಿ

* ರಾಜಕಾರಣಿಗಳ ವಿರುದ್ಧ ಪ್ರಮೋದ್ ಮುತಾಲಿಕ್ ಕೆಂಡಾಮಂಡಲ
* ‘ವಿಧ್ವತ್ ಭಾರತ’ ಎಂಬ ಧಾರ್ಮಿಕ ಕಾರ್ಯಕ್ರಮದಲ್ಲಿ ವಾಗ್ದಾಳಿ
* ಹಿಂದುತ್ವದ ಮುಖವಾಡ ಹೊತ್ತ ರಾಜಕಾರಣಿಗಳಿಗೆ ಧಿಕ್ಕಾರವಿರಲಿ ಎಂದ ಮುತಾಲಿಕ್

Ram Sene President Pramod muthalik Hits out at politicians rbj
Author
Bengaluru, First Published Oct 20, 2021, 3:51 PM IST
  • Facebook
  • Twitter
  • Whatsapp

ಶಿವಮೊಗ್ಗ, (ಅ.20): ಶ್ರೀರಾಮ ಸೇನೆ ಅಧ್ಯಕ್ಷ (Ram Sene President) ಪ್ರಮೋದ್ ಮುತಾಲಿಕ್ (Pramod Muthalik) ಅವರು ರಾಜಕಾರಣಿಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ಇಂದು (ಅ.20)  ಕುವೆಂಪು ರಂಗಮಂದಿರದಲ್ಲಿ ನಡೆದ ‘ವಿಧ್ವತ್ ಭಾರತ’ ಎಂಬ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಮುತಾಲಿಕ್ ರಾಜಕಾರಣಿಗಳಷ್ಟು ನಿರ್ಲಜ್ಜ, ನೀಚರು ಯಾರೂ ಇಲ್ಲ. ರಾಜಕಾರಣಿಗಳ (politicians) ಬದಲಾಗಿ ಹಿಂದೂ (Hindu) ಸಂಘಟನೆಗಳಿಗೆ ಬಲ ತುಂಬಿ ಎಂದು ಕರೆ ಕೊಟ್ಟರು.

ಹುಬ್ಬಳ್ಳಿ: ಕ್ರೈಸ್ತ ಸಮುದಾಯದದಿಂದ ಮತಾಂತರ, ಚರ್ಚ್‌ಗೆ ನುಗ್ಗಿದ ಹಿಂದೂ ಕಾರ್ಯಕರ್ತರು

ನಮಗೆ ಬಲ ತುಂಬಿ, ನಿಮ್ಮ ದೇವಸ್ಥಾನ ಉಳಿಸುತ್ತೆವೆ. ನಮಗೆ ಬಲ ತುಂಬಿದರೆ, ನಿಮ್ಮ ಅಕ್ಕ-ತಂಗಿಯರನ್ನು ಉಳಿಸುತ್ತೆವೆ. ನಮಗೆ ಬಲ ತುಂಬಿ, ನಿಮ್ಮ ಹಸುವಿನ ಒಂದೇ ಒಂದು ಹನಿ ರಕ್ತ ಕೆಳಕ್ಕೆ ಬೀಳಲು ಬಿಡುವುದಿಲ್ಲ. ರಾಜಕಾರಣಿಗಳಿಗೆ ಬಲ ತುಂಬಬೇಡಿ. ಅವರಷ್ಟು ನಿರ್ಲಜ್ಜ, ನೀಚರು ಯಾರು ಇಲ್ಲ ಎಂದು ರಾಜಕಾರಣಿಗಳ ವಾಗ್ದಾಳಿ ನಡೆಸಿದರು.

ಹಿಂದುತ್ವದ ಮುಖವಾಡ ಹೊತ್ತ ರಾಜಕಾರಣಿಗಳಿಗೆ ಧಿಕ್ಕಾರವಿರಲಿ .ರಾಜಕಾರಣಿಗಳು ಯಾವುದೇ ಪಕ್ಷದವರಾಗಿರಲಿ ಅವರಿಗೆ ಧಿಕ್ಕಾರವಿರಲಿ. ನಿಮಗೆ ನಾಚಿಕೆ, ಮಾನ, ಮರ್ಯಾದೆ ಇದೆಯಾ? ಹಿಂದುತ್ವದ ಮುಖವಾಡ ಹಾಕಿಕೊಂಡು ದೇಶದಲ್ಲಾಗುತ್ತಿರುವ ಅನಾಹುತಗಳಿಗೆ ಏನು ಹೇಳುತ್ತೀರಿ ಎಂದು ಕಿಡಿಕಾರಿದರು.

ದೇವಸ್ಥಾನ ಒಡೆಯುತ್ತೀರಿ , ಸಾರ್ವಜನಿಕ ಗಣೇಶೋತ್ಸವ ಬ್ಯಾನ್ ಮಾಡುತ್ತೀರಿ, ದುರ್ಗಾ ಮಾತೆಯ ವಿಗ್ರಹ ಇಷ್ಟೇ ಇರಬೇಕೆಂದು ಹೇಳುತ್ತೀರಿ. ಸುಪ್ರೀಂ ಕೋರ್ಟ್ ನ ಆರ್ಡರ್ ತೋರಿಸಿ, ದೇವಾಲಯ ಒಡೆಯುತ್ತಿರಿ , ಮಸೀದಿಯ ಮೈಕ್ ಮತ್ತು ಮಸೀದಿ ತೆರವಿಗೂ ಸುಪ್ರೀಂ ಕೋರ್ಟ್ ಆರ್ಡರ್ ಇದೆ.ಅದನ್ಯಾಕೆ ತೋರಿಸುವುದಿಲ್ಲಾ? ಎಂದು ಪ್ರಶ್ನಿಸಿದರು.

Follow Us:
Download App:
  • android
  • ios