ಬೆಂಗಳೂರು(ಅ.15): ನೈಋುತ್ಯ ರೈಲ್ವೆಗೆ ಅತಿ ಹೆಚ್ಚು ಆದಾಯ ತಂದುಕೊಡುವ 10 ರೈಲುಗಳ ಪೈಕಿ ಬೆಂಗಳೂರು-ದೆಹಲಿ ನಡುವೆ ಸಂಚರಿಸುವ ‘ರಾಜಧಾನಿ ಎಕ್ಸ್‌ಪ್ರೆಸ್‌’ ರೈಲು ಪ್ರಥಮ ಸ್ಥಾನದಲ್ಲಿದೆ.

ನೈಋುತ್ಯ ರೈಲ್ವೆಗೆ 2019-20ನೇ ಸಾಲಿನಲ್ಲಿ 10 ರೈಲುಗಳಿಂದ ಒಟ್ಟು 609.36 ಕೋಟಿ ಆದಾಯ ಬಂದಿದೆ. ಈ ಪೈಕಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಿಂದ ಅತಿ ಹೆಚ್ಚು 137.31 ಕೋಟಿ ಆದಾಯ ಬಂದಿದೆ. 

ರೈಲು ನಿಲ್ದಾಣದ ಫ್ಲಾಟ್‌ಫಾರ್ಮ್‌ ಟಿಕೆಟ್‌ ದರ 50ಕ್ಕೆ ಹೆಚ್ಚಳ

ಉಳಿದಂತೆ ಸಂಘಮಿತ್ರ ಎಕ್ಸ್‌ಪ್ರೆಸ್‌ ರೈಲು 73.92 ಕೋಟಿ, ಕರ್ನಾಟಕ ಎಕ್ಸ್‌ಪ್ರೆಸ್‌ನಿಂದ 72.62 ಕೋಟಿ, ತುರೊಂತೋ ಎಕ್ಸ್‌ಪ್ರೆಸ್‌ನಿಂದ 62.70 ಕೋಟಿ,     ಯಶವಂತಪುರ- ಹೌರಾ ಎಕ್ಸ್‌ಪ್ರೆಸ್‌ನಿಂದ 62.21 ಕೋಟಿ, ಗೋವಾ ಎಕ್ಸ್‌ಪ್ರೆಸ್‌ನಿಂದ 42.49 ಕೋಟಿ, ಅಗರ್ತಲಾ ಹಮ್‌ಸಫರ್‌ ರೈಲಿನಿಂದ 41.13 ಕೋಟಿ, ಸಂಪರ್ಕ ಕ್ರಾಂತಿ ರೈಲಿನಿಂದ 39.52 ಕೋಟಿ, ಪ್ರಶಾಂತಿ ಎಕ್ಸ್‌ಪ್ರೆಸ್‌ನಿಂದ 39.04 ಕೋಟಿ ಹಾಗೂ ಗುವಾಹಟಿ ಎಕ್ಸ್‌ಪ್ರೆಸ್‌ ರೈಲಿನಿಂದ 38.42 ಕೋಟಿ ಆದಾಯ ಬಂದಿದೆ ಎಂದು ನೈಋುತ್ಯ ರೈಲ್ವೆ ಮಾಹಿತಿ ನೀಡಿದೆ.