ರಾಯಚೂರು ತೆಲಂಗಾಣಕ್ಕೆ ಸೇರಿಸುವ ವಿಚಾರ; ಕೆಸಿಆರ್ ಹೇಳಿಕೆಗೆ ಜನಪ್ರತಿನಿಧಿಗಳ ಆಕ್ರೋಶ
- ಆರಿದ ವಿವಾದಕ್ಕೆ ತುಪ್ಪ ಸುರಿದ ತೆಲಂಗಾಣ ಸಿಎಂ ಕೆಸಿಆರ್
- ಕೆಸಿಆರ್ ಹೇಳಿಕೆಗೆ ರಾಯಚೂರು ನಗರ ಶಾಸಕ ತಿರುಗೇಟು
- ರಾಯಚೂರಿನ ಕನ್ನಡಪರ ಸಂಘಟನೆಗಳು ಗರಂ
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು (ಆ.18) : ರಾಯಚೂರಿನ ಜನರು ತೆಲಂಗಾಣಕ್ಕೆ ಸೇರಿಸಿ ಎಂದು ಕರ್ನಾಟಕ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಏಕೆಂದರೆ ತೆಲಂಗಾಣದ ಸರ್ಕಾರ ಅಭಿವೃದ್ಧಿ ನೋಡಿ ಹಾಗೇ ಹೇಳುತ್ತಿದ್ದಾರೆ ಎಂದು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಹೇಳಿಕೆ ನೀಡಿದ್ರು. ಈ ಹೇಳಿಕೆ ಈಗ ಮತ್ತೆ ತೆಲಂಗಾಣ ಮತ್ತು ರಾಯಚೂರು ಜಿಲ್ಲೆ ಜನಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ತೆಲಂಗಾಣ(Telangana)ದ ಹೊಸ ಜಿಲ್ಲೆ ವಿಕಾರಾಬಾದ್ ನಲ್ಲಿ ಹೊಸ ಜಿಲ್ಲಾಡಳಿತದ ಕಚೇರಿ ಉದ್ಘಾಟಿಸಿ ಮಾತನಾಡಿದ ಕೆಸಿಆರ್ ಕರ್ನಾಟಕದ ರಾಯಚೂರು ಜಿಲ್ಲೆಯ
ಜನರು ಟಿಆರ್‌ಎಸ್ ಸರ್ಕಾರದ ಕಲ್ಯಾಣ ಯೋಜನೆಗಳಿಂದ ಆಕರ್ಷಿತರಾಗಿ ತಮ್ಮ ಪ್ರದೇಶವನ್ನು ತೆಲಂಗಾಣಕ್ಕೆ ವಿಲೀನಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದ್ದು ಮತ್ತೆ ವಿವಾದಕ್ಕೆ ತುಪ್ಪ ಸುರಿದಿದ್ದಾರೆ. ಇತ್ತೀಚಿಗೆ ಶಾಸಕ ಡಾ.ಶಿವರಾಜ ಪಾಟೀಲರು ಆಡಿದ್ದ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ ನೆಟ್ಟಿಗರು ಮತ್ತು ಅದೇ ಮಾತನ್ನು ತೆಲಂಗಾಣದ ಶಾಸಕ, ಸಚಿವರು, ಗೃಹ ಸಚಿವ ಅಮಿತ್ ಶಾ ಅವರ ಹೆದ್ರಾಬಾದ್' ರ್ಯಾಲಿಗೂ ಮುನ್ನ ಬಿಜೆಪಿಗೆ ಮುಜುಗರ ತಂದಿಟ್ಟಿದ್ದರು. ಅದರ ಪ್ರತಿಕಾರಕ್ಕಾಗಿ ನಾರಾಯಣಪೇಟೆ ಕ್ಷೇತ್ರದಲ್ಲಿ ಬಿಜೆಪಿ ರ್ಯಾಲಿಯಲ್ಲಿ ಪಾಲ್ಗೊಂಡು ವಿವಾದಕ್ಕೆ ಪ್ರತಿಕಾರ ತೀರಿಸಿಕೊಂಡಿದ್ದರು.
Raichuru; ಬಿಸಿಯೂಟ ಸೇವಿಸಿ 58 ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ಮಸ್ಕಿ ತಹಸೀಲ್ದಾರ್ ಕವಿತಾ ಭೇಟಿ!
ಈಗ ಪುನಃ ತೆಲಂಗಾಣದ ಸಿಎಂ ಚಂದ್ರಶೇಖರರಾವ್(Chandrashekhar rao) ಮಾತನಾಡಿ, ಕರ್ನಾಟಕದಲ್ಲಿ ಓಡಾಟ ಮಾಡಲು ಒಳ್ಳೆಯ ರಸ್ತೆಗಳು ಇಲ್ಲ. ನಮ್ಮ ಸರ್ಕಾರ ಮಾಡಿದ ಅಭಿವೃದ್ಧಿ ಕೆಲಸಗಳು ಹಾಗೂ ಯೋಜನೆಗಳಾದ ಉಚಿತ ಕುಡಿಯುವ ನೀರು ಮಿಷನ್ ಭಗೀರಥ, ಗರ್ಭಿಣಿಯರಿಗೆ ಕೆಸಿಆರ್ ಕಿಟ್ ಸೇರಿದಂತೆ ನಾನಾ ಯೋಜನೆಗಳು ಇಡೀ ದೇಶಕ್ಕೆ ಮಾದರಿ ಆಗಿವೆ. ರಾಜ್ಯದಲ್ಲಿ ಉತ್ತಮ ಸರ್ಕಾರ ಬಂದರೆ ಸಾಕಾಗುವುದಿಲ್ಲ. ದೇಶದಲ್ಲಿನ ನಿರುದ್ಯೋಗ, ನಮ್ಮ ರೂಪಾಯಿ ಮೌಲ್ಯ ನೋಡಿ ಎಲ್ಲಿದೆ? ಬಿಜೆಪಿ ಸರ್ಕಾರ ದೊಡ್ಡ ಉದ್ಯಮಿಗಳ ಲಾಭಕ್ಕಾಗಿ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಅವರನ್ನು ಮನೆಗೆ ಕಳುಹಿಸಿ ಉತ್ತಮ ಸರ್ಕಾರವನ್ನು ತರಬೇಕು ಎಂದು ಹೇಳಿದರು. ಈ ಹೇಳಿಕೆ ವಿಡಿಯೋ ಈಗ ರಾಯಚೂರು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ರಾಯಚೂರು ತೆಲಂಗಾಣ ಸೇರ್ಪಡೆ ವಿವಾದ ಶುರು:
ಕಳೆದ ವರ್ಷ ಅಕ್ಟೋಬರ್ 10ರಂದು ರಾಯಚೂರು(Raichur) ಜಿಲ್ಲೆಗೆ ಪಶು ಮತ್ತು ಸಂಗೋಪನೆ ಸಚಿವ ಪ್ರಭು ಚವ್ಹಾಣ್(Prabhu chauhan) ಭೇಟಿ ನೀಡಿದ್ರು. ಈ ವೇಳೆ ರಾಯಚೂರು ಶಾಸಕ ಡಾ. ಶಿವರಾಜ್ ಪಾಟೀಲ್(Shivaraj Patil) ರಾಯಚೂರು ಜಿಲ್ಲೆಗೆ ಸರ್ಕಾರ ಕಡೆಗಣಿಸುತ್ತಿಲ್ಲ. ಹೀಗಾಗಿ ನಮ್ಮ ರಾಯಚೂರು ಹಿಂದೂಳಿದಿದೆ. ಸಚಿವರೇ ತಾವೂ ಹಿರಿಯರು ನಮ್ಮ ಕಷ್ಟ ನೋಡರೀ, ನಮ್ಮ ಕಷ್ಟಗಳ ಕಡೆ ಕಣ್ಣು ತೆರೆಯಿರಿ, ಉತ್ತರ ಕರ್ನಾಟಕ ಅಂದ್ರೆ ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿ, ಹೈದ್ರಾಬಾದ್ ಕರ್ನಾಟಕ ಅಂದ್ರೆ ಕಲಬುರಗಿ ಮತ್ತು ಬೀದರ್. ನಮ್ಮ ರಾಯಚೂರು ಜಿಲ್ಲೆಯನ್ನ ಸುಮ್ಮನೇ ತೆಲಂಗಾಣಕ್ಕೆ ಸೇರಿಸಿ ಬೀಡಿ ಅಂತ ಶಾಸಕರು ಬಾಯಿತಪ್ಪಿ ಹೇಳಿಬಿಟ್ಟರು. ಆಗ ಶಾಸಕರ ಬೆಂಬಲಿಗರು ಚಪ್ಪಾಳೆ ಹಾಕಿ ಶಾಸಕ ಡಾ.ಶಿವರಾಜ್ ಪಾಟೀಲ್ ಹೇಳಿಕೆಗೆ ಬೆಂಬಲಿಸಿ ದ್ರು. ಅಷ್ಟೇ ಅಲ್ಲದೆ ಎಲ್ಲಿ ನೆರೆದವರು ಎಲ್ಲರೂ ಕೆಲಕಾಲ ನಕ್ಕರೂ, ಆಗ ಶಾಸಕ ಡಾ. ಶಿವರಾಜ್ ಪಾಟೀಲ್ , ಪ್ರಭು ಚವ್ಹಾಣ್ ಅವರೇ ತಾವೂ ಹಿರಿಯರು, ಸಂಪುಟದಲ್ಲಿ ಸ್ಥಾನ ಹೊಂದಿರುವರು ನೀವೂ, ನಮ್ಮ ರಾಯಚೂರು ಜಿಲ್ಲೆಯನ್ನು ಹಿಡಿದುಕೊಂಡು ಹೋಗಬೇಕು. ನಮ್ಮ ಜಿಲ್ಲೆಗೆ ಜೀವ ತುಂಬಬೇಕು, ಸತ್ತಹೆಣದಂತೆ ಆಗಿದ್ದೇವು ನಾವು, ನಾವು ಎಷ್ಟೇ ಕೂಗಾಗಿದ್ರೂ ನಮ್ಮ ಧ್ವನಿ ಕೇಳುವುದಿಲ್ಲ. ಇನ್ನೂ ಉಳಿದಿರುವುದು ಒಂದೇ ದಾರಿ ಕೈ ಮಾಡುವುದು ಎಂದು ಶಾಸಕ ಡಾ. ಶಿವರಾಜ್ ಪಾಟೀಲ್ ಮಾತನಾಡಿದ್ದರು. ತಾವೂ ದಯಮಾಡಿ ನಮ್ಮ ಜಿಲ್ಲೆಗೆ ಅಭಿವೃದ್ಧಿ ಕೈಜೋಡಿಸ ಎಂದು ಶಾಸಕರು ತಿಳಿಸಿದರು. ಈ ವಿಡಿಯೋ ಆಗ ಸೋಷಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಆ ಬಳಿಕ ಎಚ್ಚತ್ತುಕೊಂಡ ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ್, ನಾನು ಇರುವರೆಗೆ ರಾಯಚೂರಿನ ಒಂದು ಇಂಚು ಜಾಗ ತೆಲಂಗಾಣಕ್ಕೆ ಸೇರಿಸಲು ಸಾಧ್ಯವೇ ಇಲ್ಲ. ಸುವರ್ಣ ಅಕ್ಷರದಲ್ಲಿ ಅಲ್ಲ..ನನ್ನ ರಕ್ತದಲ್ಲಿ ಬೇಕಾದರೂ ನಾನು ಬರೆದುಕೊಂಡುವೆ. ತೆಲಂಗಾಣದವರಿಗೆ ಬೇರೆ ಯಾವುದೇ ಅಭಿವೃದ್ದಿ ವಿಚಾರವಿಲ್ಲ. ಹೀಗಾಗಿ ನನ್ನನ್ನು ತೆಜೋವಧೆ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ನನ್ನ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಈ ಮಾತು ಆಡಿದ್ದೇನೆ. ಆದ್ರೆ ತೆಲಂಗಾಣಕ್ಕೆ ಆಗಲಿ, ಆಂಧ್ರಕ್ಕೆ ಆಗಲಿ ಒಂದು ಇಂಚು ಜಾಗ ಹೋದ್ರೆ ಫಸ್ಟ್ ನನ್ನ ಪ್ರಾಣ ತ್ಯಾಗ ಮಾಡಲು ನಾನು ಸಿದ್ಧವೆಂದು ರಾಯಚೂರು ಶಾಸಕ ಡಾ.ಶಿವರಾಜ್ ಪಾಟೀಲ್. ಸ್ಪಷ್ಟನೆ ನೀಡಿದ್ರು.
ತೆಲಂಗಾಣ ಸಿಎಂ ಕೆಸಿಆರ್ ಹೇಳಿಕೆಗೆ ಕನ್ನಡಪರ ಸಂಘಟನೆಗಳು ಗರಂ:
ತೆಲಂಗಾಣದ ಅಭಿವೃದ್ಧಿ ನೋಡಿ ರಾಯಚೂರಿನ ಜನರು ತೆಲಂಗಾಣಕ್ಕೆ ಬರಲು ಸಿದ್ದರಾಗಿದ್ದಾರೆ ಹೇಳಿಕೆಗೆ ರಾಯಚೂರಿನ ಕನ್ನಡಪರ ಸಂಘಟನೆಗಳ ಮುಖಂಡರು ಗರಂ ಆಗಿದ್ದಾರೆ. ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಅವರೇ ನಾವು ರಾಯಚೂರು ಬಿಟ್ಟು ತೆಲಂಗಾಣಕ್ಕೆ ಬರುತ್ತೇವೆ ಎಂದು ಚಳವಳಿ ಮಾಡಿದ್ದೇವಾ? ಯಾವುದೋ ಕಾರಣಕ್ಕೆ ರಾಯಚೂರಿನ ಶಾಸಕ ಡಾ. ಶಿವರಾಜ್ ಪಾಟೀಲ್ ಹೇಳಿಕೆ ನೀಡಿದರು. ಅಷ್ಟೇ ಅಲ್ಲದೆ ಅವರು ಆಗಲೇ ಕ್ಷಮೆ ಕೂಡ ಕೇಳಿದ್ದಾರೆ. ಅಭಿವೃದ್ಧಿ ವಿಚಾರಕ್ಕಾಗಿ ಸ್ಥಳೀಯ ಶಾಸಕ ತೆಲಂಗಾಣಕ್ಕೆ ಸೇರಿಸಿ, ಇಲ್ಲ ರಾಯಚೂರು ಜಿಲ್ಲೆಗೆ ಅನುದಾನ ನೀಡಿ ಅಂತ ಹೇಳಿಕೆ ನೀಡಿದರು.ಕೆಸಿಆರ್ ತೆಲಂಗಾಣದ ಜನರನ್ನು ಸೆಳೆಯಲು ಈ ರೀತಿ ಹೇಳಿಕೆ ನೀಡಿದ್ದಾರೆ. ತೆಲಂಗಾಣದ ಸಿಎಂ ಕೆಸಿಆರ್ ಗೆ ನಾವು ಸ್ಪಷ್ಟವಾಗಿ ಹೇಳುತ್ತೇವೆ. ನಾವು ತೆಲಂಗಾಣಕ್ಕೆ ಬರಲ್ಲ, ಕನ್ನಡದ ನೆಲ, ಜಲ, ಕನ್ನಡಿಗರು ಸ್ವಾಭಿಮಾನಿಗಳು. ನಾವು ಕರ್ನಾಟಕದಲ್ಲಿಯೇ ಇರುತ್ತೇವೆ.ಇದನ್ನು ಮೊದಲು ಕೆಸಿಆರ್ ತಿಳಿದುಕೊಳ್ಳಬೇಕು.
ನಿಮ್ಮ ರಾಜಕೀಯ ಉದ್ದೇಶಕ್ಕೆ ನಮ್ಮನ್ನು ಬಳಸಿಕೊಂಡು ನಮ್ಮ ದಿಕ್ಕೂ ತಪ್ಪಿಸಬೇಡಿ. ನೀವೂ ಹೀಗೆ ಹೇಳಿಕೆ ನೀಡಿದ್ರೆ ನಿಮ್ಮ ವಿರುದ್ಧ ಹೋರಾಟ ಮಾಡುತ್ತೇವೆ ಎಂದ ಕನ್ನಡಪರ ಸಂಘಟನೆಗಳು ತೆಲಂಗಾಣ ಸಿಎಂ ಕೆ.ಚಂದ್ರಶೇಖರರಾವ್ ಅವರಿಗೆ ಎಚ್ಚರಿಕೆ ನೀಡಿದರು
ರಾಯಚೂರು ಅಬಕಾರಿ ಅಧಿಕಾರಿಗಳಿಗೆ ತಲೆನೋವಾದ ಸಿಹೆಚ್ ಪೌಡರ್ ಶೇಂದಿ ದಂಧೆ
ತೆಲಂಗಾಣ ಸಿಎಂ ಹೇಳಿಕೆಗೆ ರಾಯಚೂರು ನಗರದ ಶಾಸಕರು ಹೇಳುದೇನು?
ನಮ್ಮ ಉಸಿರು ಇರುವವರೆಗೂ ತೆಲಂಗಾಣಕ್ಕೆ ಒಂದು ಇಂಚು ಭೂಮಿ ನಾವು ಬಿಟ್ಟುಕೊಡಲ್ಲ. ತೆಲಂಗಾಣದ ಕೆಸಿಆರ್ ಸರ್ಕಾರ ಏನು ಅಭಿವೃದ್ಧಿ ಮಾಡಿದ್ದು ಹೇಳಲು ಏನು ಇಲ್ಲ. ಹೀಗಾಗಿ ನಮ್ಮ ಹೇಳಿಕೆಯನ್ನ ಇಟ್ಟುಕೊಂಡು ಜನರನ್ನು ಸೆಳೆಯುವ ಪ್ರಯತ್ನ ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಮಾಡುತ್ತಿದ್ದಾರೆ. ರಾಜಕೀಯ ದುರುದ್ದೇಶದಿಂದ ಇಂತಹ ಹೇಳಿಕೆಗಳು ಕೆಸಿಆರ್ ನೀಡುತ್ತಿದ್ದಾರೆ. ರಾಯಚೂರು ಜಿಲ್ಲೆಯ ಜನತೆಗೆ ನೀರಿನ ಸಮಸ್ಯೆ ಇಲ್ಲ. ರಾಯಚೂರು ಜಿಲ್ಲೆಯಲ್ಲಿ ಎರಡು ದೊಡ್ಡ ನದಿಗಳು ಹರಿಯುತ್ತವೆ. ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಯಚೂರು ಜಿಲ್ಲೆಯ ನೀರಾವರಿಗಾಗಿ 6 ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದೆ. ಜಿಲ್ಲೆಯ ಪ್ರತಿ ಹಳ್ಳಿಗೆ ಜಲಾಧಾರೆ ಯೋಜನೆಗಾಗಿ 2 ಸಾವಿರ ಕೋಟಿ ರೂಪಾಯಿ ನೀಡಿದೆ. ತೆಲಂಗಾಣ ಸರ್ಕಾರ ಅವರ ರಾಜ್ಯದ ಯಾವ ಜಿಲ್ಲೆಗೆ ಇಷ್ಟು ಅನುದಾನ ನೀಡಿದೆ ಎಂಬುವುದು ಮೊದಲು ಸಿಎಂ ಕೆಸಿಆರ್ ಹೇಳಲಿ, ತೆಲಂಗಾಣದ ಗಡಿಯಲ್ಲಿ ಸೂಕ್ತ ಆಸ್ಪತ್ರೆ ಸೌಲಭ್ಯಗಳು ಇಲ್ಲದೆ ಜನರು ರಾಯಚೂರು ಜಿಲ್ಲೆಗೆ ಬರುತ್ತಾರೆ. ತೆಲಂಗಾಣದ ಗಡಿಹಳ್ಳಿಯ ಜನರು ರಾಯಚೂರು ಜಿಲ್ಲೆಗೆ ತೆಲಂಗಾಣವನ್ನು ಸೇರಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಮೊದಲು ತೆಲಂಗಾಣದ ಅಭಿವೃದ್ಧಿ ಬಗ್ಗೆ ಹೇಳಲಿ ಎಂದು ತೆಲಂಗಾಣ ಸಿಎಂಗೆ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಟಾಂಗ್ ನೀಡಿದ್ರು.
ಒಟ್ಟಿನಲ್ಲಿ ಆಂಧ್ರ ಮತ್ತು ತೆಲಂಗಾಣದ ಗಡಿ ಹೊಂದಿರುವ ರಾಯಚೂರು ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ತೆಲಂಗಾಣ ಮತ್ತು ರಾಯಚೂರು ನಗರದ ಶಾಸಕರ ಟಾಕ್ ವಾರ್ ಈಗ ಮತ್ತೆ ಶುರುವಾಗಿದೆ.