ಹಿಂದೂ-ಮುಸ್ಲಿಂ ಭಾವೈಕ್ಯತೆ ಪ್ರಚಾರ ಮಾಡುತ್ತಿದ್ದ ಅಹಮದೀಯ ಮುಸ್ಲಿಂ ಮೌಲ್ವಿ ಮೇಲೆ ಸುನ್ನಿ ಮುಸ್ಲಿಮರಿಂದ ಹಲ್ಲೆ!

ಹೊಸಪೇಟೆಯಿಂದ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಂದೇಶ ಸಾರಲು ಆಗಮಿಸಿದ್ದ ಅಹಮ್ಮದೀಯ ಮುಸ್ಲಿಂ ಮೌಲ್ವಿ ಮೇಲೆ ಸುನ್ನಿ ಮುಸ್ಲಿಮರು ಹಲ್ಲೆ ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ. 

Raichur Sunni Muslims attacked on Ahmadiyya Muslim Maulvi for promoting Hindu Muslim harmony sat

ರಾಯಚೂರು (ಫೆ.15): ಜಗತ್ತಿನಲ್ಲಿ ಹಿಂದೂ-ಮುಸ್ಲಿಂ ಸೇರಿ ಎಲ್ಲ ಧರ್ಮಗಳ ದೇವರೂ ಒಂದೇ ಎಂಬ ಭಾವೈಕ್ಯತೆ ಸಂದೇಶವನ್ನು ಸಾರಲು ಆಗಮಿಸಿದ್ದ ಮೌಲ್ವಿ ಹಾಗೂ ಅವರ ಸಹ ಪ್ರಚಾರಕರ ಮೇಲೆ ಕಟ್ಟಾ ಮುಸ್ಲಿಮರಿಂದ (ಸುನ್ನಿ ಮುಸ್ಲಿಂ ಪಂಗಡ) ಹಲ್ಲೆ ಮಾಡಲಾಗಿದೆ. ನೀವು ಮುಸ್ಲಿಂ ಧರ್ಮವನ್ನು ಮಾತ್ರ ಪ್ರಚಾರ ಮಾಡಬೇಕು, ಭಾವೈಕ್ಯತೆ ಕುರಿತು ಎಲ್ಲಿಯೂ ಧ್ವನಿ ಎತ್ತುವಂತಿಲ್ಲ ಎಂದು ಒಬ್ಬರ ಮೇಲೆ ಹಲ್ಲೆ ಮಾಡಲಾಗಿದ್ದು, ಇನ್ನು ನಾಲ್ವರಿಗೆ ಖಡಕ್ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ಹಿಂದೂ ಧರ್ಮದಲ್ಲಿ ಹಲವು ಜಾತಿ ಪಂಗಡಗಳು ಇರುವಂತೆ ಇಸ್ಲಾಂ ಧರ್ಮದಲ್ಲಿಯೂ ಹಲವು ಪಂಗಡಗಳಿವೆ. ಅದರಲ್ಲಿ ಷಿಯಾ, ಸುನ್ನಿ ಹಾಗೂ ಅಹಮದೀಯ ಮುಸ್ಲಿಮರು ಸೇರಿದಂತೆ ಹಲವು ವರ್ಗಗಳಿವೆ. ಆದರೆ ಎಲ್ಲ ಪಂಗಡಗಳಲ್ಲಿಯೂ 'ಅಲ್ಲಾ' ಆರಾಧನೆ ಮಾಡಲಾಗುತ್ತದೆ. ಆದರೆ, ಆಚರಣೆಯ ವಿಧಾನಗಳಲ್ಲಿ ಕೆಲವು ಭಿನ್ನತೆಗಳು ಕಂಡುಬರುತ್ತದೆ. ಪ್ರತಿನಿತ್ಯದ ಪ್ರಾರ್ಥನೆ (ನಮಾಜ್), ಶುದ್ಧತೆ ಹಾಗೂ ಧರ್ಮ ಪ್ರಚಾರದ ಪ್ರವರ್ತನಗಳಲ್ಲಿ ಸಣ್ಣ ಪುಟ್ಟ ವ್ಯತ್ಯಾಸ ಕಂಡುಬರುತ್ತದೆ.

ಹಾಸನದಲ್ಲಿ ಎಣ್ಣೆ ಏಟಲ್ಲಿ 50 ರೂಪಾಯಿಗಾಗಿ ಸ್ನೇಹಿತನನ್ನೇ ಕೊಲೆ ಮಾಡಿದ ಕುಡುಕ

ನಮ್ಮ ರಾಜ್ಯದಲ್ಲಿ ಅಹಮದೀಯ ಮುಸ್ಲಿಂ ಪಂಗಡದ ಜನರು ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಹೆಚ್ಚಾಗಿದ್ದಾರೆ. ಇವರು ಸೂಫಿ ಸಂತರ ಮಾರ್ಗಗಳಲ್ಲಿ ನಡೆದು ಹಿಂದೂ- ಮುಸ್ಲಿಂ ಭಾವೈಕ್ಯತೆಯನ್ನು ಸಾರುವವರಾಗಿದ್ದಾರೆ. ಜಗತ್ತಿನಲ್ಲಿ ದೇವನೊಬ್ಬ ನಾಮ ಹಲವು ಎಂಬ ತತ್ವದಡಿ ಈಶ್ವರ-ಅಲ್ಲಾ ಎಲ್ಲವೂ ಒಂದೇ ಎಂಬ ಭಾವನೆಯನ್ನು ಹೊಂದಿದವರಾಗಿದ್ದಾರೆ. ಹೀಗಾಗಿ, ವಿಜಯನಗರ ಜಿಲ್ಲೆ ಹೊಸಪೇಟೆಯ ಅಹಮದೀಯ ಪಂಗಡದ ಮೌಲ್ವಿ ಖಾಜಿ ಮೊಹಮ್ಮದ್ ರಫಿ (Maulvi Qazi Mohammad Rafi of the Ahmadiyya sect)  ಅವರು ಧರ್ಮ ಪ್ರಚಾರಕ್ಕಾಗಿ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ದೇವತಗಲ್ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ (Hindu-Muslim spirituality) ಸಂದೇಶ ಸಾರುತ್ತಿದ್ದರು.

ಈ ವೇಳೆ ಅಹಮದೀಯ ಮುಸ್ಲಿಂ ಮೌಲ್ವಿ ಇರುವ ಸ್ಥಳಕ್ಕೆ ಬಂದ ಸುನ್ನಿ ಮುಸ್ಲಿಂ (Sunni Muslim) ಪಂಗಡದ (ಕಟ್ಟಾ ಮುಸ್ಲಿಂ) ಯುವಕರು ಹಾಗೂ ಮುಸ್ಲಿಮರು ಬಂದು ತಮ್ಮ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಂದೇಶ ಸಾರುವುದನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಆಗ ಅಹಮ್ಮದೀಯ ಹಾಗೂ ಸುನ್ನು ಮುಸ್ಲಿಂ ಪಂಗಡದವರ ನಡುವೆ ವಾಗ್ವಾದ ನಡೆದಿದ್ದು, ಅಹಮ್ಮದೀಯ ಪಂಗಡದವರ ಮೇಲೆ ಹಲ್ಲೆ ಮಾಡಲಾಗಿದೆ. ಹೊಸಪೇಟೆಯಿಂದ ಆಗಮಿಸಿದ್ದ ಮೌಲ್ವಿ ಮೊಹಮ್ಮದ್‌ ರಫಿಗೆ ಹಲ್ಲೆ ಮಾಡಿ, ಕೂಡಿ ಹಾಕಿದ್ದಾರೆ. ಜೊತೆಗೆ, ನೀವು ಇಂತಹ ಪ್ರಚಾರ ಮಾಡಿ ಮುಸ್ಲಿಂ ಯುವಕರ ದಾರಿ ತಪ್ಪಿಸಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಘಟನೆ ಬಳಿಕ ಅಹಮದೀಯ ಪಂಗಡದ ಮುಸ್ಲಿಂ ಯುವಕರು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಬಳಿಕ ಮೌಲ್ವಿಯನ್ನು ಬಿಟ್ಟು ಕಳಿಸಿದ್ದಾರೆ.

ಲಕ್ಷಾಂತರ ಭಕ್ತರು ಬರುವ ದೇಗುಲಗಳಿಗೆ ಪ್ರಾಧಿಕಾರ ರಚನೆಗೆ ನಿರ್ಧಾರ: ಸಚಿವ ರಾಮಲಿಂಗಾ ರೆಡ್ಡಿ

ಗ್ರಾಮದಲ್ಲಿ ಮುಸ್ಲಿಂ ಯುವಕರ ನಡುವೆಯೇ ಹಲ್ಲೆ ಮತ್ತು ಹಿಂಸಾಚಾರ ನಡೆಯುವ ಸಾಧ್ಯತೆಯನ್ನು ಮನಗಂಡ ಮುಸ್ಲಿಂ ಸಮುದಾಯದ ಹಿರಿಯ ಮುಖಂಡರು ಎಲ್ಲ ಯುವಕರನ್ನು ಸಮಾಧಾನ ಮಾಡಿದ್ದಾರೆ. ಎಲ್ಲವನ್ನೂ ಶಾಂತಿಯುತವಾಗಿ ಮಾತನಾಡಿ ಬಗೆಹರಿಸಿಕೊಳ್ಳೋಣ ಎಂದು ಹೇಳಿದ್ದಾರೆ. ಆ ನಂತರ ಹೊಸಪೇಟೆಯಿಂದ ಪ್ರಚಾರಕ್ಕೆ ಬಂದಿದ್ದ ಅಹಮದೀಯ ಮುಸ್ಲಿಂ ಮೌಲ್ವಿಯನ್ನು ಬಿಟ್ಟು ಕಳಿಸಲಾಗಿದೆ. ಆದರೆ ಮಸೀದಿಗಳಲ್ಲಿ ಮತ್ತು ಮುಸ್ಲಿಂ ಬಡಾವಣೆಯಲ್ಲಿ ಅಹಮದೀಯರು ಕಾಣಿಸಿಕೊಳ್ಳಬಾರದು. ಹಾಗೇನಾದರೂ ಕಾಣಿಸಿಕೊಂಡರೆ, ಕೂಡಲೇ ಮಾಹಿತಿ ನೀಡುವಂತೆ ಸ್ಥಳೀಯರಿಗೆ ಸುನ್ನಿ ಮುಸ್ಲಿಂ ಪಂಗಡದ ಯುವಕರು ಮಾಹಿತಿ ರವಾನಿಸಿದ್ದಾರೆ.

Latest Videos
Follow Us:
Download App:
  • android
  • ios