Asianet Suvarna News Asianet Suvarna News

ರಾಹುಲ್‌ ವ್ಯಕ್ತಿಯಲ್ಲ ಶಕ್ತಿ, ಲಘು ಮಾತು ಬೇಡ: ಗುಹಾ ಹೇಳಿಕೆಗೆ ಕೈ ನಾಯಕನ ಆಕ್ರೋಶ!

ರಾಹುಲ್‌ ರಾಂಧಿ ಕುರಿತು ಗುಹಾ ಹೇಳಿಕೆಗೆ ಉಗ್ರಪ್ಪ ತೀವ್ರ ಆಕ್ರೋಶ| ರಾಹುಲ್‌ ವ್ಯಕ್ತಿಯಲ್ಲ ಕಾಂಗ್ರೆಸ್‌ನ ಶಕ್ತಿ| ಅವರ ಬಗ್ಗೆ ಲಘುವಾಗಿ ಮಾತಾಡಬೇಡಿ

Rahul Gandhi Is The Power Of Congress Party VS Ugrappa Slams Ramachandra Guha over His Statement
Author
Bangalore, First Published Jan 20, 2020, 8:01 AM IST
  • Facebook
  • Twitter
  • Whatsapp

ಬೆಂಗಳೂರು[ಜ.20]: ರಾಹುಲ್‌ ಗಾಂಧಿ ವ್ಯಕ್ತಿಯಲ್ಲ ಕಾಂಗ್ರೆಸ್‌ನ ಶಕ್ತಿಯಾಗಿದ್ದು, ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಅವರ ವಿರುದ್ಧ ಮಾಜಿ ಸಂಸದ ವಿ.ಎಸ್‌. ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್‌ ಗಾಂಧಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಸರಿಸಾಟಿಯಲ್ಲ ಎನ್ನುವ ರಾಮಚಂದ್ರ ಗುಹಾ ಅವರ ಹೇಳಿಕೆಯನ್ನು ಒಂದು ರೀತಿಯಲ್ಲಿ ಒಪ್ಪಬೇಕು. ನರೇಂದ್ರ ಮೋದಿಯ ರೀತಿಯಲ್ಲಿ ರಾಹುಲ್‌ ಗಾಂಧಿ ಲಕ್ಷಾಂತರ ರು. ಮೊತ್ತದ ಬಟ್ಟೆಧರಿಸುವುದಿಲ್ಲ. ನರೇಂದ್ರ ಮೋದಿ ಅವರ ರೀತಿ ಸುಳ್ಳನ್ನು ನುಡಿಯುವುದಿಲ್ಲ. ರಾಹುಲ್‌ ಗಾಂಧಿ ವ್ಯಕ್ತಿಯಲ್ಲ ಕಾಂಗ್ರೆಸ್‌ನ ಶಕ್ತಿ. ರಾಹುಲ್‌ ಗಾಂಧಿ ಕುಟುಂಬ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದೆ. ಅಂತಹ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದರು.

ಕೇರಳದಲ್ಲಿ ಮೋದಿ ಹೊಗಳಿದ ರಾಮಚಂದ್ರ ಗುಹಾ!

ಚರ್ಚೆಗೆ ಬರಲು ಅಮಿತ್‌ ಶಾಗೆ ಸವಾಲು:

ನರೇಂದ್ರ ಮೋದಿ ಅವರ ಬಳಿಕ ಪ್ರಧಾನಿಯಾಗಲು ಅಮಿತ್‌ ಶಾ ಕನಸು ಕಾಣುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ನೆರೆ ಪರಿಹಾರ, ಮಹದಾಯಿ ವಿಚಾರದ ಬಗ್ಗೆ ಭರವಸೆ ನೀಡದೆ ಪೌರತ್ವ ತಿದ್ದುಪಡಿ ಬಗ್ಗೆ ಮಾತನಾಡಿ ಹೋಗಿದ್ದಾರೆ. ರಾಜ್ಯಕ್ಕೆ ಬರಬೇಕಿರುವ ಅನುದಾನದ ಪಾಲುಗಳ ಬಗ್ಗೆಯೂ ಮಾತನಾಡಿಲ್ಲ. ಈ ಬಗ್ಗೆ ನೀವಾಗಲಿ, ನಿಮ್ಮ ಪ್ರಧಾನ ಮಂತ್ರಿಯಾಗಲಿ, ಪ್ರಹ್ಲಾದ್‌ ಜೋಶಿಯಾಗಲಿ ಚರ್ಚೆಗೆ ಬನ್ನಿ ಎಂದು ಉಗ್ರಪ್ಪ ಸವಾಲು ಹಾಕಿದರು.

ರಾಜ್ಯಕ್ಕೆ ಜಿಎಸ್‌ಟಿ ಪಾಲು 5,600 ಕೋಟಿ ರು., ಗ್ರಾಮೀಣಾಭಿವೃದ್ಧಿ ಇಲಾಖೆಗೆ ನರೇಗಾ ಯೋಜನೆಯಡಿ 2,850 ಕೋಟಿ ರು. ಸೇರಿ 70 ಸಾವಿರ ಕೋಟಿ ರು.ಗಳಷ್ಟುಬಾಕಿ ಹಣ ಬರಬೇಕು. ಆದರೆ, ಈ ಬಗ್ಗೆ ಯಾವುದೇ ಮಾತೂ ಆಡಿಲ್ಲ ಎಂದು ಟೀಕಿಸಿದರು.

ಗುಂಪು ಥಳಿತದ ವಿರುದ್ಧ ಪ್ರಧಾನಿಗೆ ಪತ್ರ ಬರೆದ ಗಣ್ಯರ ವಿರುದ್ಧ ಕೇಸು!

Follow Us:
Download App:
  • android
  • ios