ಜವಾಹರಲಾಲ್ ನೆಹರೂ ತನ್ನನ್ನು ಕತ್ತೆ ಎನ್ನಿ, ಆದ್ರೆ ಹಿಂದೂ ಎನ್ನಬೇಡಿ ಎಂದಿದ್ದರು; ಸಿ.ಟಿ. ರವಿ
ಜವಾಹರ ಲಾಲ್ ನೆಹರೂ ಅವರು ತನ್ನನ್ನು ಕತ್ತೆ ಎನ್ನಿ ಆದರೆ ಹಿಂದೂ ಎನ್ನಬೇಡಿ ಎಂದಿದ್ದರು. ಈಗ ಅವರ ಕುಡಿ ರಾಹುಲ್ ಗಾಂಧಿ ಸಾಂವಿಧಾನಿಕ ಹುದ್ದೆಯಲ್ಲಿದ್ದು ಹಿಂದೂ ಧರ್ಮದ ಬಗ್ಗೆ ದ್ವೇಷವನ್ನ ತೋರಿಸಿದ್ದಾರೆ.
ಬೆಂಗಳೂರು (ಜು.02): ಜವಾಹರ ಲಾಲ್ ನೆಹರೂ ಅವರು ತನ್ನನ್ನು ಕತ್ತೆ ಎನ್ನಿ ಆದರೆ ಹಿಂದೂ ಎನ್ನಬೇಡಿ ಎಂದಿದ್ದರು. ಈಗ ರಾಹುಲ್ ಗಾಂಧಿ ಸಾಂವಿಧಾನಿಕ ಹುದ್ದೆಯಲ್ಲಿದ್ದು ಹಿಂದೂ ಧರ್ಮದ ಬಗ್ಗೆ ದ್ವೇಷವನ್ನ ತೋರಿಸಿದ್ದಾರೆ. ಕನ್ವರ್ಷನ್ ಮಾಫಿಯಾದ ಕೈಗೊಂಬೆಯಾಗಿ ರಾಹುಲ್ ಈ ಹೇಳಿಕೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಟೀಕೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ಯಾವುದೇ ದೇಶದ ಮೇಲೆ ದಾಳಿ ಮಾಡಿ ಅಥವಾ ಬಲವಂತವಾಗಿ ಧರ್ಮ ಹೇರಿಕೆ ಮಾಡದ ಹಾಗೂ ಧಾರ್ಮಿಕ ಮತ್ತು ಮತೀಯ ಕಾರಣಕ್ಕೆ ಆಕ್ರಮಣಕ್ಕೆ ಒಳಗಾದವರಿಗೆ ಅನ್ನ, ಆಶ್ರಯ, ವಿದ್ಯೆ ನೀಡಿದ ದೇಶ ನಮ್ಮದಾಗಿದೆ. ಜಗತ್ತಿನ ಜನರನ್ನ ಶ್ರೇಷ್ಟರನ್ನಾಗಿ ಮಾಡಿದ ಪರಂಪರೆ ಸನಾತನ ಧರ್ಮವಾಗಿದೆ. ಆದ್ರೆ ರಾಹುಲ್ ಗಾಂಧಿಯವರು ಹಿಂದೂಗಳು ಹಿಂಸೆ, ದ್ವೇಷ ಬಿತ್ತುವ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ. ಅವರು ಕನ್ವರ್ಷನ್ ಮಾಫಿಯಾದ ಕೈಗೊಂಬೆಯಾಗಿ ಈ ಹೇಳಿಕೆ ಕೊಟ್ಟಿದ್ದಾರೆ. ಇಲ್ಲವೇ ಅವರ ಕುಟುಂಬದ ಡಿಎನ್ ಎ ಕಾರಣ ಇರಬಹುದು ಎಂದು ಟೀಕೆ ಮಾಡಿದ್ದಾರೆ.
ರಾಹುಲ್ ಗಾಂಧಿ ತನ್ನ ಅಯೋಗ್ಯತನವನ್ನ ಪ್ರರ್ದರ್ಶನ ಮಾಡಿದ್ದಾರೆ; ಎಂಎಲ್‌ಸಿ ಸಿ.ಟಿ. ರವಿ ಟೀಕೆ
ಇನ್ನು ಜವಾಹರ ಲಾಲ್ ನೆಹರೂ ಅವರು ತನ್ನನ್ನು ಕತ್ತೆ ಎನ್ನಿ ಆದರೆ ಹಿಂದೂ ಎನ್ನಬೇಡಿ ಎಂದಿದ್ದರು. ಈಗ ರಾಹುಲ್ ಗಾಂಧಿ ಸಾಂವಿಧಾನಿಕ ಹುದ್ದೆಯಲ್ಲಿದ್ದು ಹಿಂದೂ ದ್ವೇಷವನ್ನ ತೋರಿಸಿದ್ದಾರೆ. ಭಾರತ ವಿಭಜನೆಗೆ ಕಾರಣವಾಗಿದ್ದು ಏನು ? ರಾಜಕೀಯ ಲಾಭಕ್ಕಾಗಿ ದೇಶ ವಿಭಜನೆಗೆ ಸಹಿ ಹಾಕಿದವರು ಯಾರು ? ಕಾಶ್ಮೀರದಲ್ಲಿ ಭಯೋತ್ಪಾದನೆ ಬೆಳೆಯಲು ಕಾರಣವಾದ ಪಕ್ಷ ಯಾರು ? ಪಂಜಾಬ್ ನಲ್ಲಿ ಬಿಂದ್ರೆನ್ ವಾಲೆಯನ್ನ ಬೆಳೆಸಿ ಖಲಿಸ್ತಾನ್ ಚಳುವಳಿಗೆ ಶಕ್ತಿ ನೀಡಿದ ವ್ಯಕ್ತಿ, ಪಕ್ಷ ಯಾವುದು ? ಎಲ್ ಟಿ ಟಿ ಗೆ ಶಕ್ತಿ ಕೊಟ್ಟ ಪಕ್ಷ ಯಾವುದು ? ಎಲ್ಲದಕ್ಕು ಉತ್ತರ ಕಾಂಗ್ರೆಸ್, ನೆಹರು, ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಎಂದು ಹೇಳುತ್ತಾರೆ.
ಇವರೆಲ್ಲ ಆರ್‌ಎಸ್ಎಸ್ ನಾವರಲ್ಲ, ರಾಹುಲ್ ಖಾಂದಾನ್ ಗೆ ಸೇರಿದವರು. ತುರ್ತು ಪರಿಸ್ಥಿತಿ ಹೇರಿ ನಾಗರಿಕ ದಮನ ಮಾಡಿ, ಸಂವಿಧಾನ ಬುಡಮೇಲು ಮಾಡಿದರು. ಇದಕ್ಕೆಲ್ಲ ಮುತ್ತಜ್ಜಿಯ ಸ್ವಾರ್ಥ, ಕಾಂಗ್ರೇಸ್ ಪಕ್ಷವೆ ಕಾರಣ. ಸಿಖ್ಖರ ಮೇಲಿನ ದೌರ್ಜನ್ಯ ಆರ್‌ಎಸ್‌ಎಸ್ ಮಾಡಿದ್ದಲ್ಲ. ನಾವು ಹಿಂದುಗಳು ಎಂದು ಹೇಳಿಕೊಳ್ಳುವವರು ಮಾಡಿದ್ದಲ್ಲ. ಭಯೋತ್ಪಾದಕರಾಗಿ ಬಂಧಿತರಾದವರಲ್ಲಿ 99% ಹಿಂದೂಗಳಲ್ಲ. ಯಾರನ್ನ ಓಟ್ ಬ್ಯಾಂಕ್ ಅಂದುಕೊಂಡಿದ್ದಿರೋ, ಅವರೇ ಭಯೋತ್ಪಾದಕರಾಗಿ ಬಂಧಿತರಾದವರು. ನಿಮ್ಮ ಮತಬ್ಯಾಂಕ್‌ನವರೇ ಬಂಧಿತರಾಗಿರುವುದು. ಭಯೋತ್ಪಾದಕರನ್ನ ಮತಬ್ಯಾಂಕ್ ಎಂದು ಪರಿಗಣಿಸಿದ್ದೀರಿ ಎಂದು ಟೀಕಿಸಿದರು.
ಎಲ್ಲೆಲ್ಲೋ.. ದರ್ಶನ್ ಮೇಲಿನ ಅಭಿಮಾನ; ಕೈ, ಕುತ್ತಿಗೆ, ಎದೆ ಆಯ್ತು, ಈಗ ಪುಷ್ಠ ಭಾಗದ ಮೇಲೂ ಕೈದಿ ನಂಬರ್ 6106..!
ರಾಹುಲ್ ನಾಯಕತ್ವದಲ್ಲಿ ಕಾಂಗ್ರೆಸ್ 3ನೇ ಬಾರಿ ಕನಿಷ್ಟ ಫಲಿತಾಂಶ ಬಂದಿದೆ. 2014ರಿಂದ ಈವರೆಗೆ 3 ಬಾರಿ ಕನಿಷ್ಟ ಸ್ಥಾನಗಳನ್ನ ಗೆದ್ದಿದೆ. ಕಳೆದ 10 ವರ್ಷದ ನಂತರ ವಿಪಕ್ಷ ನಾಯಕನಾಗಿವ ಯೋಗ್ಯತೆ ಸಿಕ್ಕಿದೆ. ಆದರೆ ಆ ಸ್ಥಾನಕ್ಕೆ ಯೋಗ್ಯನಲ್ಲ ಎಂದು ತೋರಿಸಿಕೊಟ್ಟಿದ್ದೀರ. ನಿಮ್ಮ ಮಾತಿನ ಮೂಲಕ ತನಗಿನ್ನೂ ವಿಪಕ್ಷ ನಾಯಕನಾಗುವ ಯೋಗ್ಯತೆ ಬಂದಿಲ್ಲ ಎಂದು ತೋರಿಸಿಕೊಟ್ಟಿದ್ದೀರಿ. ಹಿಂದೂಗಳಿಗೆ ಅಪಮಾನ ಮಾಡಿದ್ದೀರಿ. ಕಾಂಗ್ರೆಸ್‌ಗೆ ತಿಳಿದೊ ತಿಳಿಯದೆಯೋ ಮತ ನೀಡಿದ ಹಿಂದೂಗಳಿಗೂ ಅಪಮಾನ ಆಗಿದ್ದು, ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಮುಂದಿನ ಬಾರಿ ವಿಪಕ್ಷ ಸ್ಥಾನವೂ ಸಿಗದಂತೆ ಜನ ಮಾಡ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.