ಬೆಂಗಳೂರು(ಜೂ.30): ಕ್ವಾರಂಟೈನ್‌ ಮುಗಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರು ಮಂಗಳವಾರದಿಂದ ಮತ್ತೆ ತಮ್ಮ ಇಲಾಖಾ ಕೆಲಸಕ್ಕೆ ಸಕ್ರಿಯವಾಗಿ ಮರಳಲಿದ್ದಾರೆ.

ಮನೆಗೆಲಸದವರಿಂದಾಗಿ ತಮ್ಮ ತಂದೆ, ಪತ್ನಿ ಹಾಗೂ ಪುತ್ರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದರಿಂದ ಸುಧಾಕರ್‌ ಅವರು ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗಿದ್ದರು. ಮನೆಯಲ್ಲಿದ್ದರೂ ವರ್ಚುಯೆಲ್‌ ಸಭೆಗಳ ಮೂಲಕ ಸತತವಾಗಿ ಸಭೆಗಳನ್ನು ನಡೆಸಿ ಕೋವಿಡ್‌ ನಿಯಂತ್ರಣಕ್ಕೆ ಶ್ರಮಿಸಿದ್ದರು. ಇದೀಗ ಕ್ವಾರಂಟೈನ್‌ ಅವಧಿ ಮುಗಿದಿದ್ದು, ಅವರಿಗೆ ಕೊರೋನಾ ಸೋಂಕು ತಗುಲಿಲ್ಲ ಎಂಬುದು ಪರೀಕ್ಷೆಯಿಂದ ದೃಢವಾಗಿದೆ. ಹೀಗಾಗಿ, ಮಂಗಳವಾರದಿಂದ ಎಂದಿನಂತೆ ತಮ್ಮ ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಜ್ಞ ವೈದ್ಯರು ಕೊಟ್ಟ ಮಹತ್ವದ ಸಲಹೆದಿಂದ ಎಚ್ಚೆತ್ತ ಸಿಎಂ ಯಡಿಯೂರಪ್ಪ

ಮಂಗಳವಾರ ಬೆಳಗ್ಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಂದಿಗೆ ಚರ್ಚಿಸಲು ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಇಲಾಖೆಯ ಸಚಿವರಾಗಿ ಸುಧಾಕರ್‌ ಅವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.