ತಜ್ಞ ವೈದ್ಯರು ಕೊಟ್ಟ ಮಹತ್ವದ ಸಲಹೆದಿಂದ ಎಚ್ಚೆತ್ತ ಸಿಎಂ ಯಡಿಯೂರಪ್ಪ
ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೊರೋನಾ ತಡೆಯಲು ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತಿದ್ದರೂ ಕೊರೋನಾ ಮಾತ್ರ ಕಡಿಮೆ ಆಗುತ್ತಿಲ್ಲ. ಇದೀಗ ಕೊರೋನಾ ನಿಯಂತ್ರಣ ತಡೆಯಲು ತಜ್ಞ ವೈದ್ಯರು ಕೊಟ್ಟ ಸಲಹೆಯಿಂದ ಸಿಎಂ ಬಿಎಸ್‌ವೈ ದಿಢೀರ್ ಕಾರ್ಯಪ್ರವೃತ್ತರಾಗಿದ್ದಾರೆ.
ಬೆಂಗಳೂರು, (ಜೂ.27): ಸಿಎಂ ನಿವಾಸ ಕಾವೇರಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ತಜ್ಞ ವೈದ್ಯರು ಭೇಟಿಯಾಗಿ ಕೊರೋನಾ ವೈರಸ್ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಈ ವೇಳೆ ತಜ್ಞ ವೈದ್ಯರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಕೆಲವಂದಿಷ್ಟು ಸಲಹೆಗಳನ್ನು ಕೊಟ್ಟಿದ್ದಾರೆ. ಇದರಿಂದ ಕೂಡಲೇ ಕಾರ್ಯಪ್ರವೃತ್ತರಾದ ಬಿಎಸ್‌ವೈ, ಅಧಿಕಾರಿಗಳಿಗೆ ಕೆಲ ಸೂಚನೆಗಳನ್ನು ಕೊಟ್ಟಿದ್ದಾರೆ.
ಕೊರೋನಾ ಸಾವು ಹೆಚ್ಚಳ: ಬದ್ಧತೆಯಿಂದ ಕೆಲಸ ಮಾಡಲು ಅಧಿಕಾರಿಗಳಿಗೆ ಸುಧಾಕರ್ ತಾಕೀತು!
ಬೆಂಗಳೂರಿನಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜು ಗಳನ್ನು ಸರ್ಕಾರ ಪಡೆದು, ಅಲ್ಲಿ 200 ಬೆಡ್‌ಗಳನ್ನು ನಿರ್ಮಿಸಿ ಎನ್ನುವ ಸಲಹೆಯೂ ಇದರಲ್ಲಿದೆ. ಇನ್ನು, ರ್ಯಾಪಿಡ್ ಆಯಂಟಿಜನ್ ಟೆಸ್ಟ್ ಮಾಡಿದ್ರೆ 10 ನಿಮಿಷಗಳಲ್ಲಿ ಕೊವೀಡ್ ವರದಿ ಸಿಗಲಿದೆ. ಇದರಿಂದ ಹೈರಿಸ್ಕ್ ರೋಗಿಗಳಿಗೂ ಹೆಚ್ಚು ಅನುಕೂಲವಾಗಲಿದೆ,' ಎಂದು ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಕೊವೀಡ್ ಪ್ರಕರಣ ಹೆಚ್ಚುತ್ತಿರುವುದರಿಂದ ರೋಗಿಗಳನ್ನು ಕರೆದೊಯ್ಯಲು ಆಂಬುಲೆನ್ಸ್ಗಳ ಸೇವೆ ಅಗತ್ಯವಿದೆ. ಇದಕ್ಕಾಗಿ 200 ಆಂಬ್ಯುಲೆನ್ಸ್ ನೀಡುವಂತೆ ಸಲಹೆ ನೀಡಿದ್ದಾರೆ. ಸಲಹೆ ಕೊಡುವ ವೇಳೆ ತಜ್ಞ ವೈದ್ಯರು ಕೊರೋನಾ ಸಮುದಾಯಕ್ಕೆ ಹರಡಿದ ವಿಚಾರವಾಗಿ ಹೆಚ್ಚು ಚರ್ಚೆ ಮಾಡಿದ್ದಾರೆ.
ಸಭೆ ಅಂತ್ಯ: ಮತ್ತೆ ಲಾಕ್‌ಡೌನ್ ಗೊಂದಲಗಳಿಗೆ ತೆರೆ ಎಳೆದ ಸಚಿವ ಅಶೋಕ್
ಸಿಎಂ ಯಡಿಯೂರಪ್ಪ ಅವರಿಗೆ ತಜ್ಞ ವೈದ್ಯರ ತಂಡ ಸಲಹೆ ಕೊಟ್ಟಿರುವ ಹಿನ್ನೆಲೆ ಕ್ರಿಯಾ ಯೋಜನೆ ರೂಪಿಸಲು ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರಿಗೆ ಸೂಚನೆ ಕೊಟ್ಟಿದ್ದು, ಕೋವಿಡ್ ಮ್ಯಾನೆಜ್‌ಮೆಂಟ್ ಕ್ರಿಯಾಶೀಲಗೊಳಿಸಲು ಕಟ್ಟಪ್ಪಣೆ ಮಾಡಿದ್ದಾರೆ.
ಅಧಿಕಾರಿಗಳಿಗೆ ಸಿಎಂ ಕೊಟ್ಟ ಸೂಚನೆಗಳು.
*ಬೆಂಗಳೂರಿನಲ್ಲಿ 200 ಆ್ಯಂಬುಲೆನ್ಸ್ ನೀಡುವಂತೆ ಸೂಕ್ತ ಕ್ರಮ ತೆಗೆದುಕೊಳ್ಳಿ
*ಎಲ್ಲಾ A ಸಿಂಪ್ಟಮ್ಯಾಟಿಕ್ ವಾರಿಯರ್ಸ್ ರೋಗಿಗಳನ್ನು ಮನೆಯಲ್ಲೇ ಐಸೋಲೇಷನ್ ಮಾಡಲು ಸಾಧ್ಯವೇ ಅಂತ ಪರಿಶೀಲನೆ ಮಾಡಬೇಕು.
* ಬೆಂಗಳೂರಿನಲ್ಲಿನ ಖಾಸಗಿ ಮೆಡಿಕಲ್ ಕಾಲೇಜ್‌ನ್ನು ಸರ್ಕಾರ ಪಡೆದು ಅದರಲ್ಲಿ 200 ಬೆಡ್‌ಗಳನ್ನು ಹಾಕಲು ಸೂಕ್ತ ಕ್ರಮ ತೆಗೆದುಕೊಳ್ಳಿ.
*ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50ರಷ್ಟು ಮೀಸಲಿಡಲು ಸೂಚಿಸಿರುವ ಬೆಡ್ ಗಳನ್ನು ಕೂಡಲೇ ಪಡೆಯುವ ಕೆಲಸ ಆಗಬೇಕು.
* ಖಾಸಗಿ ಆಸ್ಪತ್ರೆಗಳ ಬೆಡ್ ಮತ್ತು ಬಿಐಇಸಿ ಕೋವಿಡ್ ಕೇರ್ ಸೆಂಟರ್ ಬಗ್ಗೆ ಕೂಡಲೇ ಅಗತ್ಯ ಕ್ರಮ.
* ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಬಹುದು.
* ಬಿಐಇಸಿ ಯಲ್ಲಿ ಹತ್ತು ಸಾವಿರ ಬೆಡ್ ಗಳ ವ್ಯವಸ್ಥೆ ಮಾಡಿ A ಸಿಂಪ್ಟಮ್ಯಾಟಿಕ್ ರೋಗಿಗಳಿಗೆ ಅಲ್ಲಿ ಚಿಕಿತ್ಸೆ ನೀಡಬಹುದು.
* ಬಿಐಇಸಿಯಲ್ಲಿ ಏಷ್ಯಾದಲ್ಲೇ ಅತೀ ದೊಡ್ಡ ಕೋವಿಡ್ ಕೇರ್ ಸೆಂಟರ್ ರೂಪಿಸಬಹುದು.
#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"