ಇದ್ರಿಷ್ ಪಾಷಾ ಸಾವಿಗೆ ಪ್ರತೀಕಾರವಾಗಿ ಪುನೀತ್‌ ಕೆರೆಹಳ್ಳಿಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಮೈಸೂರಿನ ಉದಯಗಿರಿ ನಿವಾಸಿ ಅಕ್ರಮ್ ಖಾನ್ ಎಂಬಾತನ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮೈಸೂರು (ಮೇ.16): ಇದ್ರಿಷ್ ಪಾಷಾ ಸಾವಿಗೆ ಪ್ರತೀಕಾರವಾಗಿ ಪುನೀತ್‌ ಕೆರೆಹಳ್ಳಿಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಮೈಸೂರಿನ ಉದಯಗಿರಿ ನಿವಾಸಿ ಅಕ್ರಮ್ ಖಾನ್ ಎಂಬಾತನ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ 'NEXT YOU WILL KILL' ಎಂದು ಬರೆದು ಜೀವ ಬೆದರಿಕೆ ಹಾಕಿದ್ದ ಆರೋಪಿಯು, ವಾಟ್ಸಾಪ್ ಕಾಲ್ ಹಾಗೂ ವಿಡಿಯೋ ಕಾಲ್ ಮೂಲಕವೂ ನಿರಂತರವಾಗಿ ಬೆದರಿಕೆ ಒಡ್ಡುತ್ತಿದ್ದ ಎಂದು ಆರೋಪಿಸಲಾಗಿದೆ.

ಜೀವ ಬೆದರಿಕೆ ಕರೆ ಬಂದ ಹಿನ್ನೆಲೆ ಕ್ರಮಕ್ಕಾಗಿ ಕಳೆದೆರಡು ದಿನಗಳ ಹಿಂದೆ ದೂರು ದಾಖಲಿಸಲು ಬಸವನಗುಡಿ ಪೊಲೀಸ್ ಠಾಣೆಗೆ ತೆರಳಿದ್ದ ಪುನೀತ್ ಕೆರೆಹಳ್ಳಿ. ಆದರೆ, ಠಾಣೆಯಲ್ಲಿ ತಕ್ಷಣ ದೂರು ದಾಖಲಿಸಿಕೊಳ್ಳದೇ, 'ಇನ್ಸ್ಪೆಕ್ಟರ್ ಬರುತ್ತಾರೆ, ಕಾಯಿರಿ' ಎಂದು ಎರಡು ಗಂಟೆಗೂ ಹೆಚ್ಚು ಕಾಯಿಸಿದ್ದಾರೆ ಎಂದು ಪೊಲೀಸರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. 'ಹಿಂದೂಗಳಿಗೊಂದು ಕಾನೂನು, ಮುಸ್ಲಿಮರಿಗೊಂದು ಕಾನೂನು ಇದೆಯಾ? ಪೊಲೀಸರಿಗೆ ಯಾಕಿಷ್ಟು ಭಯ? ಯಾರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ? ಎಂದು ಪುನೀತ್ ಕೆರೆಹಳ್ಳಿ ಪ್ರಶ್ನಿಸಿದ್ದರು.

ಇದನ್ನೂ ಓದಿ: ಬೆತ್ತಲಾಗಿ ಮೊಬೈಲ್ ಅಂಗಡಿಗೆ ನುಗ್ಗಿ 85 ಫೋನ್ ಕದ್ದ ಹಸನ್ ಸೆರೆ; ಖದೀಮ ಕಳ್ಳತನಕ್ಕೆ ಮುನ್ನ ಬಟ್ಟೆ ಬಿಚ್ಚಿದ್ದು ಯಾಕೆ ಗೊತ್ತಾ?

ಇದೀಗ ನ್ಯಾಯಾಲಯದ ಅನುಮತಿಯೊಂದಿಗೆ ಅಕ್ರಮ್ ಖಾನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವರೇ? ಜೀವ ಬೆದರಿಕೆ ಒಡ್ಡುವವರಿಗೆ ಶಿಕ್ಷೆಯಾಗುವುದೇ? ಮುಂದಿನ ತನಿಖೆಯ ಬಗ್ಗೆ ಕೂತುಹಲ ಮೂಡಿದೆ.