ಪೂಮಾ, ನೈಕ್ ಬ್ರ್ಯಾಂಡ್ ಹೆಸರಲ್ಲಿ ನಕಲಿ ಚಪ್ಪಲಿ, ಶೂಗಳ ತಯಾರಿಕೆ: ನೀವೂ ಮೋಸ ಹೋದ್ರಾ? ಚೆಕ್ ಮಾಡ್ಕೊಳಿ
ಅಂತಾರಾಷ್ಟ್ರೀಯ ಮಟ್ಟದ ಬ್ರ್ಯಾಂಡ್‌ಗಳಾದ ಪುಮಾ, ನೈಕ್ ಸೇರಿದಂತೆ ವಿವಿಧ ಬ್ರ್ಯಾಂಡ್‌ಗಳ ನಕಲಿ ಚಪ್ಪಲಿ ಮತ್ತು ಶೂಗಳನ್ನು ತಯಾರಿಸುವ ಜಾಲವನ್ನು ಬೆಂಗಳೂರು ಪೊಲೀಸರು ಬೇಧಿಸಿದ್ದಾರೆ.

ಬೆಂಗಳೂರು (ಸೆ.13): ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧ ಬ್ರ್ಯಾಂಡ್‌ಗಳಾಗಿ ಗುರುತಿಸಿಕೊಂಡಿರುವ ಪೂಮಾ, ನೈಕೀ ಹಾಗೂ ವಿವಿಧ ಸ್ಪೋರ್ಟ್ಸ್ ಬ್ರಾಂಡ್ ಗಳ ಹೆಸರಿನಲ್ಲಿ ನಕಲಿ ಚಪ್ಪಲಿ ಮತ್ತು ಶೂಗಳನ್ನು ತಯಾರಿಸಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಜಾಲ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದೆ. ಬೆಂಗಳೂರಿನ ವಾಣಿಜ್ಯ ಕೇಂದ್ರವಾಗಿರುವ ಕಾಟನ್‌ಪೇಟೆ ವ್ಯಾಪ್ತಿಯಲ್ಲಿನ ಚಪ್ಪಲಿ ಫ್ಯಾಕ್ಟರಿಯಲ್ಲಿ ವಿವಿಧ ಬ್ರ್ಯಾಂಡ್‌ಗಳ ಮುದ್ರೆಗಳನ್ನು ಬಳಕೆ ಮಾಡುತ್ತಿದ್ದ ವಸ್ತುಗಳನ್ನು ಹಾಗೂ ಆರೋಪಿಯನನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅನಧಿಕೃತವಾಗಿ ಬ್ರಾಂಡ್ ಚಪ್ಪಲಿ ತಯಾರಿಕೆ ಮಾಡ್ತಿದ್ದ ಫ್ಯಾಕ್ಟರಿ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಎಕನಾಮಿಕ್ಸ್ ಅಫೆನ್ಸ್ ವಿಂಗ್ ನಿಂದ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದ್ದು, ಪೂಮಾ, ನೈಕೀ, ಸ್ಪೋರ್ಟ್ಸ್ ಬ್ರಾಂಡ್ ಗಳ ಹೆಸ್ರಲ್ಲಿ ಸ್ಲೀಪರ್, ಶೂಸ್ ತಯಾರು ಮಾಡ್ತಿದ್ದ ಫ್ಯಾಕ್ಟರಿ ಮೇಲೆ ದಾಳಿ ಮಾಡಿದ್ದಾರೆ. ಪ್ರತಿಷ್ಠಿತ ಬ್ರಾಂಡ್ ಗಳ ಲೋಗೋ ಬಳಸಿ ಮಾರಾಟ ಕಡಿಮೆ ಗುಣಮಟ್ಟದ ಚಪ್ಪಲಿಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ದಾಖಲಾದ ಬೆನ್ನಲ್ಲಿಯೇ ದಾಳಿ ಮಾಡಲಾಗಿದ್ದು, ಖತರ್ನಾಕ್ ವಂಚಕರು ಪೊಲೀಸರ ಅತಿಥಿಯಾಗಿದ್ದಾರೆ.
ಕಾಟನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಫ್ಯಾಕ್ಟರಿ ಓಪನ್ ಮಾಡಿ ಅನಧಿಕೃತವಾಗಿ ಉತ್ಪಾದನೆ ಮಾಡಲಾಗುತ್ತಿತ್ತು. ಈ ಬಗ್ಗೆ ಪಕ್ಕಾ ಮಾಹಿತಿ ಪಡೆದಿದ್ದ ಸಿಸಿಬಿ ಪೊಲೀಸರು, ಫ್ಯಾಕ್ಟರಿ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಸುಮಾರು 2 ಕೋಟಿ ರೂ.ಗಿಂತ ಅಧಿಕ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇನ್ನು ವಿವಿಧ ಬ್ರ್ಯಾಂಡ್‌ಗಳ ಮುದ್ರೆಗಳನ್ನು ಹಾಗೂ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ. ಉತ್ತರ ಭಾರತದ ಮೂಲದ ವ್ಯಕ್ತಿಗಳನ್ನ ಬಳಸಿಕೊಂಡು ತಯಾರಿಕೆ ಮಾಡಲಾಗುತ್ತಿತ್ತು.
ಪೊಲೀಸರಿಗೆ ದೂರು ಕೊಟ್ಟಳೆಂದು ಸ್ವಂತ ಅಜ್ಜಿಯನ್ನೇ ಕಾರು ಗುದ್ದಿಸಿ ಕೊಲೆಗೈದ ಮೊಮ್ಮಗ
ಉತ್ತರ ಭಾರತ ಮೂಲದ ವ್ಯಕ್ತಿ ಗಣೇಶ್ ಎಂಬಾತನಿಂದ ಅಕ್ರಮವಾಗಿ ವಿವಿಧ ಬ್ರ್ಯಾಂಡ್‌ಗಳ ಚಪ್ಪಲಿ, ಶೂಗಳನ್ನು ತಯಾರಿಕೆ ಮಾಡಲಾಘುತ್ತಿತ್ತು. ಇವುಗಳನ್ನು ಸಣ್ಣಪುಟ್ಟ ಅಂಗಡಿಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಅಲ್ಲಿ ಬ್ರ್ಯಾಂಡೆಡ್ ಕಂಪನಿಗಳ ರಟ್ಟಿನ ಬಾಕ್ಸ್‌ಗಳನ್ನು ತಯಾರಿಸಿ ಕಳಪೆ ಗುಣಮಟ್ಟದ ಚಪ್ಪಲಿ ಮತ್ತು ಶೂಗಳಿಗೆ ಬ್ರ್ಯಾಂಡೆಂಡ್ ಮಾರ್ಕ್ ಅಂಟಿಸಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಪೊಲೀಸರು ಸದ್ಯಕ್ಕೆ ಫ್ಯಾಕ್ಟರಿ ಮಾಲೀಕ ಗಣೇಶ್‌ನನ್ನ ವಶಕ್ಕೆ ಪಡೆದಿದ್ದು, ವಿಚಾರಣೆ ಮಾಡುತ್ತಿದ್ದಾರೆ.