Asianet Suvarna News Asianet Suvarna News

PU ಪರೀಕ್ಷೆ ನಡೆಸುವಲ್ಲಿ ಸರ್ಕಾರ ಪಾಸ್, ಆದ್ರೆ ಸಾಮಾಜಿಕ ಅಂತರ ಕಾಪಾಡುವಲ್ಲಿ ಫೇಲ್..!

ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸುವುದಾಗಿ ಪಿಯು ಮಂಡಳಿ ತಿಳಿಸಿತ್ತು. ಪಿಯು ಮಂಡಳಿ ಹೇಳಿದ್ದೇ ಒಂದು ಆದರೆ ರಾಜ್ಯದ ಬಹುತೇಕ ಪರೀಕ್ಷಾ ಕೇಂದ್ರಗಳಲ್ಲಿ ಆಗಿದ್ದೇ ಮತ್ತೊಂದು ಎನ್ನುವಾಗಿದೆ. ವಿದ್ಯಾರ್ಥಿಗಳು ಕೊರೋನಾ ಭೀತಿಯ ನಡುವೆಯೇ ಪರೀಕ್ಷಾ ಕೇಂದ್ರ ಪ್ರವೇಶಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

PUC Exam No Social Distances in Various Karnataka Exam centres
Author
Bengaluru, First Published Jun 18, 2020, 1:30 PM IST

ಬೆಂಗಳೂರು(ಜೂ.18): ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಇಂದು(ಜೂ.18) ನಡೆಯುತ್ತಿದೆ. ಲಾಕ್‌ಡೌನ್‌ನಿಂದಾಗಿ ಆಂಗ್ಲ ಪರೀಕ್ಷೆ ಬಾಕಿ ಉಳಿದಿತ್ತು. ಪಿಯು ಮಂಡಳಿ ಪರೀಕ್ಷೆ ಆಯೋಜನೆ ಅವ್ಯವಸ್ಥೆಯಿಂದ ಕೂಡಿರುವುದು ಬಟಾಬಯಲಾಗಿದೆ.

ಬೆಂಗಳೂರಿನ ವಿವೇಕಾನಂದ ಕಾಲೇಜಿನ ದೃಶ್ಯಾವಳಿಗಳು:

"

ಹೌದು, ಪಿಯು ಪರೀಕ್ಷೆ ಆಯೋಜನೆಯ ಕುರಿತಂತೆ ಆರಂಭದಿಂದಲೂ ಪೋಷಕರ ವಲಯದಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದರ ಹೊರತಾಗಿಯೂ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸುವುದಾಗಿ ಪಿಯು ಮಂಡಳಿ ತಿಳಿಸಿತ್ತು. ಪಿಯು ಮಂಡಳಿ ಹೇಳಿದ್ದೇ ಒಂದು ಆದರೆ ರಾಜ್ಯದ ಬಹುತೇಕ ಪರೀಕ್ಷಾ ಕೇಂದ್ರಗಳಲ್ಲಿ ಆಗಿದ್ದೇ ಮತ್ತೊಂದು ಎನ್ನುವಾಗಿದೆ. ವಿದ್ಯಾರ್ಥಿಗಳು ಕೊರೋನಾ ಭೀತಿಯ ನಡುವೆಯೇ ಪರೀಕ್ಷಾ ಕೇಂದ್ರ ಪ್ರವೇಶಿಸಿದ್ದಾರೆ. ಕೊನೆಗೂ ಪರೀಕ್ಷೆ ನಡೆಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಆದರೆ ಸಾಮಾಜಿಕ ಅಂತರ ಕಾಪಾಡುವ ವಿಚಾರದಲ್ಲಿ ಮಾತ್ರ ಫೇಲ್ ಆಗಿದೆ.

ಉಡುಪಿ ಕಾಲೇಜಿನಲ್ಲಿ ಕಂಡು ಬಂದ ದೃಶ್ಯಾವಳಿಗಳು:

"

ರಾಜ್ಯದ ವಿವಿಧ ಭಾಗಗಳಲ್ಲಿ ಸಾಮಾಜಿಕ ಅಂತರವೂ ಇಲ್ಲದೇ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುವ ಸಂಗತಿ ಬಯಲಾಗಿದೆ. ರಾಜ್ಯದ ನಾನಾ ಕಡೆ ಸರಿಯಾದ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಮಾಡಿರಲಿಲ್ಲ. ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಅವ್ಯವಸ್ಥೆಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಯಾವೆಲ್ಲಾ ಕಾಲೇಜಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ, ಮುನ್ನೆಚ್ಚರಿಕೆ ವಹಿಸುವಲ್ಲಿ ವಿಫಲವಾದ್ರು ಎನ್ನುವುದರ ವಿವರ ಇಲ್ಲಿದೆ ನೋಡಿ.

ಕೊಪ್ಪಳದಲ್ಲಿ ಸಾಮಾಜಿಕ ಅಂತರ ಮರೆತ ವಿದ್ಯಾರ್ಥಿಗಳು:

"

ಮೈಸೂರಲ್ಲೂ ಅದೇ ರಾಗ, ಅದೇ ತಾಳ:

"

ಎಂಇಎಸ್ ಕಾಲೇಜಿನಲ್ಲೂ ಅರಾಜಕತೆಯ ಅನಾವರಣ:

"

ವಿವಿ ಪುರಂ ಕಾಲೇಜಿನಲ್ಲೇ ಸಾಮಾಜಿಕ ಅಂತರ ಮಾಯ:

"

Follow Us:
Download App:
  • android
  • ios