Asianet Suvarna News Asianet Suvarna News

ಪಿಎಸ್‌ಐ ಅಕ್ರಮ: ಕಬುರಗಿಯಲ್ಲಿ ಮತ್ತೋರ್ವ ಸೆರೆ

ಪಿಎಸ್‌ಐ ಹಗರಣದ ಕಿಂಗ್‌ಪಿನ್‌ ಆರ್‌ಡಿಪಿ ಬಲಗೈ ಬಂಟ, ಗುಂಡಗುರ್ತಿ ಹಾಸ್ಟೆಲ್‌ ವಾರ್ಡನ್‌ ರಾವುತಪ್ಪ ಸಿಐಡಿ ಬೋನಿಗೆ

PSI Scam Case Another Accused Arrest in Kalaburagi grg
Author
First Published Sep 30, 2022, 8:00 PM IST

ಕಲಬುರಗಿ(ಸೆ.30):  ಪೊಲೀಸ್‌ ಇಲಾಖೆಯ 545 ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್‌ಪಿನ್‌ , ಅಫಜಲ್ಪುರದ ಆರ್‌ ಡಿ ಪಾಟೀಲ್‌ ಈತನ ಬಲಗೈ ಬಂಟ, ಸಮಾಜ ಕಲ್ಯಾಣ ಇಲಾಖೆಯ ಗುಂಡಗುರ್ತಿ ಹಾಸ್ಟೆಲ್‌ ವಾರ್ಡನ್‌ ರಾವುತಪ್ಪ (35) ಕೊನೆಗೂ ಸಿಐಡಿ ಬೋನಿಗೆ ಬಿದ್ದಿದ್ದಾನೆ. ಈತನ ಬಂಧನದೊಂದಿಗೆ ಸದರಿ ಪ್ರಕರಣದಲ್ಲಿ ದುವರೆಗೂ ಬಂಧಿತರಾದವರ ಸಂಖ್ಯಾಬಲ 53 ದಾಟಿದೆ. ಈ ಪೈಕಿ ಸುರೇಶ ಕಾಟೆಗಾಂವ್‌, ಆತನ ವಾಹನ ಆಲಕ ಸದ್ದಾಂ, ಸಹಾಕ ಕಾಳಿದಾಸ್‌, ಕಿಂಗ್‌ಪಿಎನ್‌ ದಿವ್ಯಾ ಹಾಗರಗಿ ಪತಿ ರಾಜೇಶ ಇವರು ಜಮೀನು ಪಡೆದಿದ್ದಾರೆ. ಉಳಿದತೆ ಎಲ್ಲರು ಕಳೆದ ಐದೂವರೆ ತಿಂಗಳಿಂದ ಕಲಬುರಗಿ ಜೈಲಲ್ಲಿದ್ದಾರೆ.

ಕಲಬುರಗಿಯಲ್ಲೇ ಬಂಧನ:

ಕಲಬುರಗಿಯಲ್ಲಿ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಕಳೆದ ನಾಲ್ಕೂವರೆ ತಿಂಗಳಿಂದ ಈತನ ಶೋಧದಲ್ಲಿದ್ದರು. ಸಿಐಡಿ ತನಿಖೆ ಚುರುಕಾಗುತ್ತಿದ್ದಂತೆಯೇ ತಲೆ ಮರೆಸಿಕೊಂಡಿದ್ದ ಈತ ಇದುವರೆಗೂ ಸಿಕ್ಕಿರಲಿಲ್ಲ. ಸಿಐಡಿ ಹಗರಣದಲ್ಲಿ 3 ಆರೋಪ ಪಟ್ಟಿ ಸಲ್ಲಿಸಿಯಾಯ್ತು, ಇನ್ನೇನು ಅಪಾಯವಿಲ್ಲವೆಂದು ಈತ ಈಚೆಗಷ್ಟೇ ಹೊರಗಡೆ ಕಂಡಿದ್ದ.

ಕಲಬುರಗಿ: ಸಿದ್ಧತೆ ಇಲ್ಲದೆ ಗಾಂಜಾ ಗ್ಯಾಂಗ್‌ ಬೆನ್ನಟ್ಟಿತೆ ಕಲಬುರಗಿ ಖಾಕಿ ಪಡೆ?

ಖಚಿತ ಮಾಹಿತಿ ಪಡೆದಿದ್ದ ಸಿಐಡಿ ಅಧಿಕಾರಿಗಳು ಈತನ ಚಲನ ವಲನಗಳ ಬಗ್ಗೆ ನಿಗಾ ಇಟ್ಟಿದ್ದಲ್ಲದೆ ಬಂಧನಕ್ಕೆ ಬಲೆ ಬೀಸಿದ್ದರು. ರಾವುತಪ್ಪ ಬುಧವಾರ ಸಂಜೆ ಹೊತ್ತಲ್ಲಿ ಕಲಬುರಗಿ ಶರಣಬಸವೇಶ್ವರ ಕೆರೆ ಪಕ್ಕದಲ್ಲಿರುವ ಹೋಟಲ್‌ ಒಂದರ ಬಳಿ ಇದ್ದಾನೆಂಬ ಖಚಿತ ಮಾಹಿತಿ ಆಧರಿಸಿ ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ್‌ ಇವರ ನೇತೃತ್ವದ ದಾಳಿ ನಡಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಆರ್ಡಿಪಿ ಡೀಲ್‌ಗೆ ರಾವುತಪ್ಪನೇ ಸೂತ್ರಧಾರ:

ಪಿಎಸ್‌ಐ ಹಗರಣದಲ್ಲಿ ಆರ್‌ ಡಿ ಪಾಟೀಲ್‌ ನೆಸಿರುವ ಎಲ್ಲಾ ಹಣದ ಡೀಲ್‌ಗಳಿಗೂ ರಾವುತಪ್ಪ ಸೂತ್ರಧಾರನಾಗಿದ್ದ. ಹೀಗಾಗಿ ಈತನ ಬಂಧನ, ವಿಆರಣೆ ಸಿಐಡಿಗೆ ತುಂಬ ಮುಖ್ಯವಾಗಿತ್ತು. ತನಿಖೆ ತೀವ್ರಗೊಂಡಾಗ ತಲೆ ಮರೆಸಿಕೊಂಡಿದ್ದ ರಾವುತಪ್ಪ ಎಲ್ಲಿದ್ದಾನೆಂಬ ಆಹಿತಿ ಇರಲಿಲ್ಲ.

ಸಿಐಡಿ ಅಧಿಕಾರಿಗಳು ಗುಂಡಗುರ್ತಿಯಲ್ಲಿರುವ ಹಾಸ್ಟೆಲ್‌ನಲ್ಲಿ ನಡೆಸಿರುವ ವಿಚಾರಣೆಯಲ್ಲಿ ಈತ ಏ 15 ರಂದು ಇಲ್ಲಿನ ಗುಂಡಗುರ್ತಿ ವಸತಿ ನಿಲಯದ ಕೆಲಸಕ್ಕೇ ಹಾಜರಾಗಿಲ್ಲ ಎಂದೂ ಗೊತ್ತಾಗಿದೆ. ಆದಾಗ್ಯೂ ಈತನ ಕೆಲಸದ ಹಾಜರಿ, ಗೈರು ಹಾಜರಿ ವಿಷಯ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಪಕ್ಕಾ ಮಾಹಿತಿಯೂ ಇಲ್ಲ ಎಂಬಂಶವೂ ಬಲಿಗೆ ಬಂದಿದೆ.

ಇಡೀ ಹಗರಣದಲ್ಲಿ ಬಳಕೆಯಾಗಿರುವ ಬ್ಲೂಟೂತ್‌ ಉಪಕರಣಗಳನ್ನು ಡೀಲ್‌ ಆಂತಹ ಅಭ್ಯರ್ಥಿಗಳಿಗೆ ಸರಿಯಾಗಿ ತಲುಪಿಸಿ ಬರೋದು, ನೌಕರಿ ನೋಟಿಫಿಕೇಷನ್‌ ಹೊರಬೀಳುತ್ತಿದ್ದಂತೆಯೇ ತುಂಬ ಚುರುಕಾಗಿ ಅಭ್ಯರ್ಥಿಗಳನ್ನು ಹುಡುಕಿ ತಂದು ಆರ್ಡಿ ಪಾಟೀಲ್‌ ಜೊತೆ ಸಂಪರ್ಕ ಮಾಡಿಸಿ ಹಣಕಾಸು ಈಲ್‌ ಆಗುವವರೆಗೂ ತುಂಬ ಕಾಳಜಿ ವಹಿಸೋದು ರಾವುತಪ್ಪ ಈ ಹಗರಣದಲ್ಲಿ ಮಾಡುತ್ತ ಬಂದಂತಹ ಕೆಲಸ. ಇದಲ್ಲದೆ ರಾವುತಪ್ಪ ಬ್ಲೂಟೂತ್‌ ಬಳಸಿ ನಡೆಸಲಾಗಿರುವ ಹಗರಣದಲ್ಲಿ ಈತನೇ ಖುದ್ದು 3 ಪ್ರಕರಣಗಳಲ್ಲಿ ಸರಿ ಉತ್ತರ ಅಭ್ಯರ್ಥಿಗಳಿಗೆ ರವಾನಿಸಿರುವ ಖಚಿತ ಮಾಹಿತಿಯೂ ಸಿಐಡಿ ಬಳಿ ಇದೆ. ಇನ್ನುಮುಂದೆ ನಡೆಯುವ ವಿಚಾರಣೆಲ್ಲಿ ಇವೆಲ್ಲ ಸಂಗತಿಗಳ ಬಗ್ಗೆ ಹೆಚ್ಚಿನ ಮಾಹಿತಿ ಸಿಐಡಿ ಕಲೆ ಹಾಕಲಿದೆ.

ತಾಯಿಗೆ ಹುಶಾರಿಲ್ಲಂಥ ಅ.2ರಂದು ಬೇಗ ತೆರಳಿದ್ದ:

ರಾವುತಪ್ಪನ ಬಂಧನದ ನಂತರ ಸಿಐಡಿ ತಂಡ ವಸತಿ ನಿಲಯಕ್ಕೆ ಸಂಬಂಧಿಸಿರುವ ಆದರ್ಶ ಕಾಲೇಜಿನ ಪ್ರಾಚಾರ್ಯರು, ಸಹ ಉಫನ್ಯಾಸಕರೊಂದಿಗೆ ಪ್ರಾಥಮಿಕವಾಗಿ ಚರ್ಚೆಸಿದ್ದು ಅನೇಕ ಸಂಗತಿಗಳು ರಾವುತಪ್ಪನ ಬಗ್ಗೆ ಕಲೆ ಹಾಕಿದೆ ಎನ್ನಲಾಗಿದೆ. ರಾವುತಪ್ಪ ಪಿಎಸ್‌ಐ ಪರೀಕ್ಷೆ ನಡೆಯಲಿದ್ದ ಅ.3ರಂದು ಬೇಗ ತನ್ನೆಲ್ಲ ಇಂತಹ ಡೀಲ್‌ ಕೆಲಸಗಳಿಗೆ ಹೋಗಬೇಕು ಎಂದು ತವಕದಲ್ಲಿದ್ದ. ಇದರಿಂದಾಗಿಯೇ ಈತ ಗುಂಡಗುರ್ತಿ ಕಾಲೇಜಲ್ಲಿ ನಡೆಯಲಿದ್ದ ಅ. 3 ರ ಗಾಂಧಿ ಜಯಂತಿಯಲ್ಲಿಯೂ ಪೂರ್ಣ ಬಾಘವಹಿಸಿರಲಿಲ್ಲ ಎಂಬ ಸಂಗತಿ ಗೊತ್ತಾಗಿದೆ. ಅಂದು ರಾವುತಪ್ಪ ತನ್ನ ತಾಯಿಗೆ ಹುಶಾರಿಲ್ಲವೆಂದು ಸಬೂಬು ಹೇಳಿ ಬೇಗ ತೆರಳಿದ್ದನೆಂತು ಕಾಲೇಜು ಸಿಬ್ಬಂದಿಗಳು ಈತನ ಅಂದಿನ ನಡಾವಳಿ ಮೆಲಕು ಹಾಕಿದ್ದಾರೆ. ಇದನ್ನೆಲ್ಲ ಸಿಐಡಿ ದಾಖಲೆ ಮಾಡಿಕೊಂಡಿದ್ದು ರಾವುತಪ್ಪನನ್ನು ವಿಚಾರಣೆಗೆ ಸಿದ್ಧತೆ ನಡೆಸಿದೆ.

ಸೊನ್ನ ಗ್ರಾಮದ ನಿವಾಸಿ:

ವಾರ್ಡನ್‌ ರಾವುತಪ್ಪ ಕೂಡಾ ಹಗರಣದ ರೂವಾರಿ ಆರ್‌ಡಿ ಪಾಟೀಲ್‌ ತವರೂರು ಅಫಜಲ್ಪುರದ ಸೊನ್ನ ಗ್ರಾಮದವ ಎಂಬುದು ವಿಶೇಷ. ಅದೇ ಊರಿನವನಾದ್ದರಿಂದ ಆರ್‌ಡಿ ಪಾಟೀಲ್‌ ಜೊಎ ತುಂಬ ನಂಟು ಹೊಂದಿದ್ದ ರಾವುತಪ್ಪ. ಒಂದು ವಿಧದಲ್ಲಿ ಇಡೀ ಹಗರಣದಲ್ಲಿ ಆರ್‌ಡಿಪಿ ಜೊತೆಗೇ ಈತನೆ ಬಲಗೈ ಬಂಟನಂತೆ ಕೆಲಸ ಮಾಡಿ ಹಣಕಾಸು ಇತ್ಯಾದಿ ವಹಿವಾಟು ಮಾಡಿದ್ದ.

PSI Recruitment Scam: ಸಿಐಡಿಯಿಂದ ಕೋರ್ಟ್‌ಗೆ 3ನೇ ಆರೋಪ ಪಟ್ಟಿ ಸಲ್ಲಿಕೆ

ಪಿಡಬ್ಲೂಡಿ ಅಕ್ರಮದಲ್ಲೂ ಈತನದ್ದೇ ಕೈಚಳಕ!

ಪಿಡಬ್ಲೂಡಿ ಜೆಇ, ಎಇ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮದ ಪ್ರಕರಣದಲ್ಲಿಯೂ ರಾವುತಪ್ಪ ಬೆಂಗಳೂರಿನ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರಿಂದ ಬಂಧಿತನಾಗಿದ್ದನಂಬ ಸಂಗತಿ ಬಯಲಾಗಿದೆ. ಬೆಂಗಳೂರಿನ ಸೇಂಟ್‌ ಜೋಸೇಫ್‌ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್‌ ಬಳಸಿ ನಡೆದಿದೆ ಎಂಬ ಹಗರಣಕ್ಕೆ ಸಂಬಂಧಿಸಿದಂತೆ ರಾವುತಪ್ಪ ಅಲ್ಲಿ ಬಂಧಿತನಾಗಿದ್ದ.

ಸರಕಾರಿ ನೌಕರ ಬಂಧನವಾದರೂ ಸಹ ಸಮಾಜ ಕಲ್ಯಾಣ ಇಲಾಖೆಗೆ ಈ ಬಗ್ಗೆ ಚೂರು ಸುಳಿವು ದೊರಕದೆ ಮಾಡಿದ್ದ. ಹೀಗಾಗಿ ಅಂದಿನಿಂದ ಇಂದಿನವರೆಗೂ ರಾವುತಪ್ಪ ಮೇಲೆ ಬಂಧನದ ನಂತರವಾಗಲಿ, ಸುದೀರ್ಘ ಗೈರು ಹಾಜರಿಯ ವಿಷಯದಲ್ಲಾಗಲಿ ಶಿಸ್ತುಕ್ರಮ ಇಂದಿಗೂ ಜರುಗಿಲ್ಲ!
 

Follow Us:
Download App:
  • android
  • ios