- ಮಲ್ಲೇಶ್ವರದಲ್ಲೂ ಎಸ್‌ಐ ಪರೀಕ್ಷೆ ಗೋಲ್ಮಾಲ್‌?- ಪಿಎಸ್‌ಐ ಅಭ್ಯರ್ಥಿ ಗಜೇಂದ್ರನ ವಿಚಾರಣೆ ವೇಳೆ ಶಾಲೆಯ ಪಾತ್ರದ ಸುಳಿವು-ಕೆಪಿಎಸ್ಸಿ, ಮಾಲಿನ್ಯ ಮಂಡಳಿ, ಪಿಎಸ್‌ಐ ನೇಮಕದ ತನಿಖೆ ನಡೆಸಿ ಎಂದ ಕಾಂಗ್ರೆಸ್

ಬೆಂಗಳೂರು (ಮೇ. 5): ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪರೀಕ್ಷಾ (PSI REcruitment Scam) ಅಕ್ರಮದಲ್ಲಿ ಬೆಂಗಳೂರಿನ (Bengaluru) ಮಲ್ಲೇಶ್ವರ (Malleshwara) ಸಮೀಪ ಖಾಸಗಿ ಶಾಲೆಯೊಂದರ ಪಾತ್ರದ ಬಗ್ಗೆ ರಾಜ್ಯ ಅಪರಾಧ ತನಿಖಾ ದಳ (CID) ಶಂಕೆ ವ್ಯಕ್ತಪಡಿಸಿದೆ.

ಈ ಪ್ರಕರಣ ಸಂಬಂಧ ಬೆಂಗಳೂರು ನಗರ ದಕ್ಷಿಣ ವಿಭಾಗದ ಸಿಇಎನ್‌ ಠಾಣೆ ಹೆಡ್‌ ಕಾನ್‌ಸ್ಟೇಬಲ್‌ ಗಜೇಂದ್ರ (Ghajendra) ವಿಚಾರಣೆ ವೇಳೆ ಮಲ್ಲೇಶ್ವರ ಶಾಲೆ ಹೆಸರು ಪ್ರಸ್ತಾಪವಾಗಿದ್ದು, ಈ ಬಗ್ಗೆ ತನಿಖೆ ನಡೆದಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಮಲ್ಲೇಶ್ವರ ಪರೀಕ್ಷಾ ಕೇಂದ್ರದ ವಿವಾದ: 2007ರಲ್ಲಿ ಪೊಲೀಸ್‌ ಇಲಾಖೆಗೆ ಸೇರಿದ ರಾಮನಗರ (Ramanagara) ಜಿಲ್ಲೆ ಕನಕಪುರ (Kanakapura) ತಾಲೂಕಿನ ಗಜೇಂದ್ರ, ಆನಂತರ ಜಯನಗರ, ಕುಮಾರಸ್ವಾಮಿ ಹಾಗೂ ತಲಘಟ್ಪಪುರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದ. ಬಳಿಕ ಹೆಡ್‌ ಕಾನ್‌ಸ್ಟೇಬಲ್‌ ಆಗಿ ಮುಂಬಡ್ತಿ ಪಡೆದಿದ್ದ. ಬೆಂಗಳೂರು ದಕ್ಷಿಣ ವಿಭಾಗದ ಸಿಇಎನ್‌ ಠಾಣೆಯಲ್ಲಿ ಕಾರ‍್ಯನಿರ್ವಹಿಸುತ್ತಿದ್ದ ಗಜೇಂದ್ರ, ಐದು ತಿಂಗಳಿಂದ ಅಪರಾಧ ಪ್ರಕರಣವೊಂದರ ತನಿಖೆ ಸಲುವಾಗಿ ಕೋಣನಕುಂಟೆ ಠಾಣೆಯಲ್ಲಿ ಆತ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಪಿಎಸ್‌ಐ ಆಗುವ ಕನಸು ಕಂಡಿದ್ದ ಗಜೇಂದ್ರ, ಇದಕ್ಕಾಗಿ ಕಾರ್ಯದೊತ್ತಡದ ನಡುವೆಯೇ ಬಿಡುವು ಮಾಡಿಕೊಂಡು ಅಧ್ಯಯನ ಮಾಡುತ್ತಿದ್ದ. ಈ ಹಿಂದೆ ಎರಡ್ಮೂರು ಬಾರಿ ಸಾಮಾನ್ಯ ಅಭ್ಯರ್ಥಿಯಾಗಿ ಪಿಎಸ್‌ಐ ಬಾರಿ ಪರೀಕ್ಷೆ ಬರೆದು ವಿಫಲನಾಗಿದ್ದ ಗಜೇಂದ್ರ, ಪ್ರಸಕ್ತ ಸಾಲಿನಲ್ಲಿ ಇನ್‌ ಸವೀರ್‍ಸ್‌ ಕೋಟಾದಡಿ ಹುದ್ದೆ ಪಡೆಯಲು ಯತ್ನಿಸಿದ್ದ. ಮಲ್ಲೇಶ್ವರ ಸಮೀಪದ ಖಾಸಗಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಗಜೇಂದ್ರ ಪರೀಕ್ಷೆ ಬರೆದಿದ್ದ. ಈ ಮಲ್ಲೇಶ್ವರದ ಆ ಪರೀಕ್ಷಾ ಕೇಂದ್ರಕ್ಕೆ ಸಿಐಡಿ ತನಿಖೆ ಬಿಸಿ ತಟ್ಟಲಿದೆ ಎನ್ನಲಾಗಿದೆ.

ಕೃಷಿ ಹಿನ್ನೆಲೆಯ ಗಜೇಂದ್ರ ಕುಟುಂಬವು ಆರ್ಥಿಕವಾಗಿ ಸ್ಥಿತಿವಂತರು. ಸರ್ಕಾರಿ ಹುದ್ದೆಗೆ .50ರಿಂದ .60 ಲಕ್ಷ ವ್ಯಯಿಸುವಷ್ಟುಗಜೇಂದ್ರ ಆರ್ಥಿಕವಾಗಿ ಸಾಮರ್ಥ್ಯ ಹೊಂದಿದ್ದ. ಈ ಬಾರಿ ಹೇಗಾದರೂ ಮಾಡಿ ಪಿಎಸ್‌ಐ ಆಗಲೇಬೇಕು. ಇದು ನನಗೆ ಕೊನೆಯ ಅವಕಾಶವಾಗಿದ್ದು, ಮುಂದೆ ನೇಮಕಾತಿ ಪ್ರಕಟಣೆ ಹೊರಡಿಸುವ ವೇಳೆಗೆ ವಯೋಮಿತಿ ಮೀರಿರುತ್ತದೆ ಎಂದು ಭಾವಿಸಿದ ಆತ, ಇಲಾಖೆಯ ಕೆಲವರ ನೆರವು ಪಡೆದು ಡೀಲ್‌ ನಡೆಸಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಯತ್ನಾಳ್‌ ಹೇಳಿಕೆ ಆಧರಿಸಿ ಭ್ರಷ್ಟರ ವಿರುದ್ಧ ತನಿಖೆಗೆ ಕಾಂಗ್ರೆಸ್‌ ದೂರು

ಬೆಂಗಳೂರು (ಮೇ.5): ‘ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ), ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪಿಎಸ್‌ಐ ನೇಮಕಾತಿಗೆ ಕೋಟ್ಯಂತರ ರು. ಹಣ ನೀಡಬೇಕಾಗುತ್ತಿದೆ’ ಎಂದು ಹೇಳಿಕೆ ನೀಡಿರುವ ಬಿಜೆಪಿ ಶಾಸಕ (BJP MLA) ಬಸನಗೌಡ ಪಾಟೀಲ್‌ ಯತ್ನಾಳ್‌ (Basangouda Patil Yatnal ) ಮಾಹಿತಿ ಆಧರಿಸಿ ತನಿಖೆ ನಡೆಸುವಂತೆ ರಾಜ್ಯ ಕಾಂಗ್ರೆಸ್‌ (Congress) ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ಸಲ್ಲಿಸಿದೆ.

ಪಿಎಸ್‌ಐ ನೇಮಕಾತಿ ಹಗರಣ: ಮಾಜಿ ಸಿಎಂ ಪುತ್ರನ ವಿರುದ್ಧ ದೂರು

ಈ ಬಗ್ಗೆ ಎಸಿಬಿ (ACB) ಪೊಲೀಸರಿಗೆ ದೂರು ಸಲ್ಲಿಸಿರುವ ಕೆಪಿಸಿಸಿ ವಕ್ತಾರ ಎನ್‌.ಡಿ. ಮಂಜುನಾಥ್‌, ‘ಎಸಿಬಿಯು ಕೂಡಲೇ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಆರೋಪಕ್ಕೆ ಅವರಿಂದ ದಾಖಲೆ ಸಂಗ್ರಹಿಸಬೇಕು. ಅವರು ನೀಡುವ ಸಾಕ್ಷ್ಯಗಳನ್ನು ಆಧರಿಸಿ ತನಿಖೆ ನಡೆಸಿ ಅಕ್ರಮವನ್ನು ಬಯಲಿಗೆಳೆಯಬೇಕು’ ಎಂದು ಮನವಿ ಮಾಡಿದ್ದಾರೆ.

PSI Scam: ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಸೋರಿಕೆಯಾಗಿದೆ ಎಂದ ಎಚ್‌ಡಿಕೆ

ಯತ್ನಾಳ್‌ ಅವರು ತಮ್ಮ ಬಳಿ ದಾಖಲೆ ಇರುವುದರಿಂದಲೇ ಕೆಪಿಎಸ್‌ಸಿ ಸದಸ್ಯರಾಗಲು ಕೋಟಿಗಟ್ಟಲೇ ಹಣ ನೀಡಬೇಕು ಎಂಬುದನ್ನು ಹೇಳಿದ್ದಾರೆ. ಭ್ರಷ್ಟಾಚಾರ ತೊಲಗಿಸುವ ಉದ್ದೇಶವಿದ್ದರೆ ಅವರೇ ತನಿಖಾ ಸಂಸ್ಥೆಗಳಿಗೆ ದೂರು ನೀಡಬೇಕಿತ್ತು. ಅವರು ದೂರು ನೀಡದ ಕಾರಣ ಎಸಿಬಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಯತ್ನಾಳ್‌ ಅವರಿಂದ ದಾಖಲೆಗಳನ್ನು ಸಂಗ್ರಹಿಸಿ ತನಿಖೆ ನಡೆಸಬೇಕು’ ಎಂದು ಮಂಜುನಾಥ್‌ ದೂರಿನಲ್ಲಿ ತಿಳಿಸಿದ್ದಾರೆ. ಜತೆಗೆ ಯತ್ನಾಳ್‌ ಹೇಳಿಕೆಯ ವಿಡಿಯೋ ಉಳ್ಳ ಪೆನ್‌ಡ್ರೈವ್‌ನ್ನು ದೂರಿನೊಂದಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.