ಪಾಕಿಸ್ತಾನದ ಪರವಾಗಿ ಯಾರೇ ಮಾತನಾಡಿದರೂ ಅದು ತಪ್ಪು. ದೇಶದ್ರೋಹ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ.

ಬೆಂಗಳೂರು (ಮೇ.1) : ಪಾಕಿಸ್ತಾನದ ಪರವಾಗಿ ಯಾರೇ ಮಾತನಾಡಿದರೂ ಅದು ತಪ್ಪು. ದೇಶದ್ರೋಹ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ.

ಬಸವ ಜಯಂತಿ ಅಂಗವಾಗಿ ಬುಧವಾರ ವಿಧಾನಸೌಧ ಮುಂಭಾಗದ ಬಸವೇಶ್ವರರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

ಪಾಕ್‌ ಪರ ಘೋಷಣೆ ಕೂಗಿದ್ದಕ್ಕೆ ಮಂಗಳೂರಿನಲ್ಲಿ ಅಪರಿಚಿತ ಯುವಕನೊಬ್ಬನ ಗುಂಪುಹತ್ಯೆಯಾಗಿದೆ ಎಂಬ ಆರೋಪ ಸಂಬಂಧ ಪೊಲೀಸ್‌ ತನಿಖೆ ನಡೆಯುತ್ತಿದೆ. ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿದ್ದರೆ ತಪ್ಪು. ಆ ಪ್ರಕರಣದಲ್ಲಿ 15 ಮಂದಿ ಮೇಲೆ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ವರದಿ ಬರಲಿ ಯಾರ ಮೇಲೆ ಏನು ಕ್ರಮ ಕೈಗೊಳ್ಳಬೇಕೆಂದು ತಿಳಿಯುತ್ತದೆ ಎಂದರು.

ಇದನ್ನೂ ಓದಿ: ಮಂಗಳೂರಲ್ಲಿ ಕೇರಳ ಮೂಲದ ಮುಸ್ಲಿಂ ಯುವಕನ ಹತ್ಯೆ ಪ್ರಕರಣ; ಬಿಗ್ ಅಪ್ಡೇಟ್ಸ್!

ಇದೇ ಇದೇ ವಿಚಾರವಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಪಾಕಿಸ್ತಾನವನ್ನು ವಹಿಸಿಕೊಂಡು ಮಾತನಾಡುವುದು ಅಥವಾ ಘೋಷಣೆ ಕೂಗುವುದು ಅಪರಾಧ. ಅಂಥವರನ್ನು ಶಿಕ್ಷಿಸಲು ಕಾನೂನು ವ್ಯವಸ್ಥೆ ಇದೆ. ಆದರೆ, ಯಾರೋ ಒಂದಷ್ಟು ಮಂದಿ ಕಾನೂನು ಕೈಗೆತ್ತಿಕೊಂಡು ಹಲ್ಲೆಗೆ ಮುಂದಾಗುವುದು ಅಥವಾ ಕೊಲೆಗೈಯ್ಯುವುದು ಕೂಡ ಅಪರಾಧವೇ ಆಗಿದೆ. ಈ ಎರಡಕ್ಕೂ ನಾವು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ