Asianet Suvarna News Asianet Suvarna News

ಕನ್ನಡಪರ ಹೋರಾಟಗಾರರಿಗೆ ಹಿಡನ್‌ ಅಜೆಂಡಾ ಇರುತ್ತೆ, ಅದು ಈಡೇರದಾಗ ಹೋರಾಟ ಮಾಡ್ತಾರೆ: ಸಚಿವ ರಾಜಣ್ಣ

ಹೋರಾಟಗಾರರಿಗೆ ಕೆಲ ಹಿಡನ್ ಅಜೆಂಡಾ ಇರುತ್ತದೆ. ಆ ಹಿಡನ್ ಅಜೆಂಡಾ ಈಡೇರದಿದ್ದಾಗ ಹೀಗೆ (ಬೆಂಗಳೂರಿನ ಪ್ರತಿಭಟನೆ) ಹೋರಾಟ ಆಗುತ್ತದೆ ಎಂದು ಸಹಕಾರ ಸಚಿವ ರಾಜಣ್ಣ ಕನ್ನಡಪರ ಸಂಘಟನೆಗಳು ಹಾಗೂ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಅದರ ಮುಖಂಡರ ಹೋರಾಟದ ಕುರಿತು ಪ್ರತಿಕ್ರಿಯಿಸಿದ್ದಾರೆ

Pro Kannada fighters arrest issue KN Rajanna reaction at hassan rav
Author
First Published Jan 7, 2024, 6:11 AM IST

ಬೇಲೂರು(ಹಾಸನ) (ಜ.7) : ಹೋರಾಟಗಾರರಿಗೆ ಕೆಲ ಹಿಡನ್ ಅಜೆಂಡಾ ಇರುತ್ತದೆ. ಆ ಹಿಡನ್ ಅಜೆಂಡಾ ಈಡೇರದಿದ್ದಾಗ ಹೀಗೆ (ಬೆಂಗಳೂರಿನ ಪ್ರತಿಭಟನೆ) ಹೋರಾಟ ಆಗುತ್ತದೆ ಎಂದು ಸಹಕಾರ ಸಚಿವ ರಾಜಣ್ಣ ಕನ್ನಡಪರ ಸಂಘಟನೆಗಳು ಹಾಗೂ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಅದರ ಮುಖಂಡರ ಹೋರಾಟದ ಕುರಿತು ಪ್ರತಿಕ್ರಿಯಿಸಿದ್ದಾರೆ.

ತಾಲೂಕಿನ ಬಿಕ್ಕೋಡು ಹೋಬಳಿಯ ಮತ್ತಾವರ ಗ್ರಾಮದಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ‘ಕನ್ನಡ ಪರ ಹೋರಾಟಗಾರ ನಾರಾಯಣಗೌಡ ಬಂಧನ ವಿಚಾರದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಆದರೆ ತಮಿಳುನಾಡಿನಲ್ಲಿ ಯಾರೂ ತಮಿಳು ಪರವಾಗಿ, ಕೇರಳದಲ್ಲಿ ಮಲೆಯಾಳಂ ಪರ ಯಾವುದೇ ಹೋರಾಟ ನಡೆಸುವ ಸಂಘಟನೆಗಳು ಇಲ್ಲ. ಆದರೆ ಕರ್ನಾಟಕದಲ್ಲಿ ಮಾತ್ರ ಕನ್ನಡಕ್ಕಾಗಿ ಹೋರಾಟ ಮಾಡುವ ಹೋರಾಟಗಾರರು ಬಹಳಷ್ಟು ಜನ ಇದ್ದಾರೆ. ಹೋರಾಟಗಾರರು ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಹೋರಾಟದಿಂದ ಆಸ್ತಿ ಹಾನಿ ಆದರೆ ಕನ್ನಡಿಗರಿಗೇ ನಷ್ಟ ತಾನೆ? ನಾವೇ ಕನ್ನಡದ ಹೆಸರಿನಲ್ಲಿ ಕನ್ನಡಿಗರ ಆಸ್ತಿ ನಾಶ ಮಾಡುವುದು ಸರಿಯಲ್ಲ’ ಎಂದರು.

ರಾಮ ಮಂದಿರ ಉದ್ಘಾಟನೆ ಆಹ್ವಾನದಲ್ಲಿ ತಾರತಮ್ಯ : ರಾಜಣ್ಣ

‘ರಾಜ್ಯದಲ್ಲಿ ನಿನ್ನೆ, ಮೊನ್ನೆಯಿಂದ ಇಂಗ್ಲಿಷ್‌ನಲ್ಲಿ ನಾಮಫಲಕ ಇವೆಯಾ? ಹಲವುವಾರು ವರ್ಷಗಳಿಂದ ಹಾಕಿದ್ದಾರೆ. ಅವುಗಳನ್ನೆಲ್ಲ ಒಂದೇ ದಿನಕ್ಕೆ ತೆಗೆಯಲು ಆಗುತ್ತಾ? ಸಚಿವ ಸಂಪುಟದಲ್ಲಿ ನಾಮಫಲಕದಲ್ಲಿ ಕನ್ನಡಕ್ಕೆ ಶೇ.60 ರಷ್ಟು ಜಾಗ ಮೀಸಲಿರಬೇಕು ಎಂದು ತೀರ್ಮಾನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

Follow Us:
Download App:
  • android
  • ios