ಬಿಜೆಪಿಯದು ತೋಳ ಬಂತು ತೋಳ ಕಥೆ: ಪ್ರಿಯಾಂಕ್‌ ಖರ್ಗೆ ಲೇವಡಿ

ಬೆಂಗಳೂರು[ಜ.16]: ಬಿಜೆಪಿಯವರ ಆಪರೇಷನ್‌ ಕಮಲ, ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನಗಳೆಲ್ಲವೂ ‘ತೋಳ ಬಂತು ತೋಳ ಕಥೆ’ ಇದ್ದಂತೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ವ್ಯಂಗ್ಯವಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಬಳಿ ಸಾಕಷ್ಟುಶಾಸಕರ ಸಂಖ್ಯಾಬಲ ಇಲ್ಲದಿದ್ದರೂ ಆಗಾಗ ಸರ್ಕಾರ ರಚನೆಗೆ ಅಸಾಂವಿಧಾನಿಕವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಈಗಲೂ ಹಿಂಬಾಗಿಲಿನಿಂದ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನಗಳೆಲ್ಲವೂ ತೋಳ ಬಂತು ತೋಳ ಕಥೆಯಂತಾಗಿದೆ. ಸಾಂವಿಧಾನಿಕವಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಅವರ ಜೊತೆ ಹದಿನೈದು ಶಾಸಕರಂತೂ ಹೋಗೋದಿಲ್ಲ. ಮೂರ್ನಾಲ್ಕು ಮಂದಿ ಹೋಗಿರಬಹುದು. ಬಿಜೆಪಿ ತಂತ್ರಕ್ಕೆ ಪ್ರತ್ಯುತ್ತರ ಕೊಡಲು ನಾವೂ ಸಿದ್ಧರಿದ್ದೇವೆ ಎಂದು ಹೇಳಿದರು.