Asianet Suvarna News Asianet Suvarna News

ದರ್ಶನ್‌ಗೆ ಕೊಡ್ತೀರಿ, ನಮಗೇಕೆ ಕೊಡಲ್ಲ: ಶಿವಮೊಗ್ಗ ಜೈಲಲ್ಲೂ ಬೀಡಿ ಕೇಳಿ ಕೈದಿಗಳ ಪ್ರತಿಭಟನೆ

ಬೀಡಿ, ಸಿಗರೇಟು ನೀಡುವಂತೆ ಆಗ್ರಹಿಸಿ ಶಿವಮೊಗ್ಗ ಕೇಂದ್ರ ಕಾರಗೃಹದ ಕೈದಿಗಳು ಜೈಲಿನಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ್ದು, ಬೀಡಿ ಸಿಗುತ್ತಿಲ್ಲ ಎಂದು ಕೈದಿಗಳು ಪಟ್ಟು ಹಿಡಿದಿದ್ದಾರೆ. 

Prisoners protest in Shivamogga Jail asking for cigarettes gvd
Author
First Published Sep 3, 2024, 10:25 AM IST | Last Updated Sep 3, 2024, 10:25 AM IST

ಶಿವಮೊಗ್ಗ (ಸೆ.03): ಬೀಡಿ, ಸಿಗರೇಟು ನೀಡುವಂತೆ ಆಗ್ರಹಿಸಿ ಶಿವಮೊಗ್ಗ ಕೇಂದ್ರ ಕಾರಗೃಹದ ಕೈದಿಗಳು ಜೈಲಿನಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ್ದು, ಬೀಡಿ ಸಿಗುತ್ತಿಲ್ಲ ಎಂದು ಕೈದಿಗಳು ಪಟ್ಟು ಹಿಡಿದಿದ್ದಾರೆ. ಸೋಗಾನೆ ಬಳಿ ಇರುವ ಕೇಂದ್ರ ಕಾರಗೃಹದಲ್ಲಿ ಕೈದಿಗಳು ಬೀಡಿ ಸಿಗರೇಟಿಗಾಗಿ 778 ಕೈದಿಗಳು ಬೆಳಗ್ಗಿನ ಉಪಹಾರವನ್ನು ಸೇವಿಸದೇ ಪ್ರತಿಭಟನೆ ನಡೆಸಿದ್ದಾರೆ. ನಟ ದರ್ಶನ್ ಪ್ರಕರಣದ ಬಳಿಕ ಕಾರಾಗೃಹ ಇಲಾಖೆಯ ಬಿಗಿ ಕ್ರಮದಿಂದ ಜೈಲಿನಲ್ಲಿ ಬಿಡಿಯು ಸಹ ಸಿಗುತ್ತಿಲ್ಲ. 

ಆದರೆ, ಬೀಡಿ ಸಿಗರೇಟಿನ ಚಟಕ್ಕೆ ಅಡಿಕ್ಟ್ ಆಗಿರುವ ಕೈದಿಗಳು ಒದ್ದಾಡುತ್ತಿದ್ದಾರೆ. ಇದೆ ಕಾರಣಕ್ಕೆ ಒಗ್ಗಟ್ಟಿನ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ನಿರತ ಕೈದಿಗಳ ಮನವೊಲಿಸುವ ಸಲುವಾಗಿ ಕಾರಾಗೃಹ ಇಲಾಖೆಯ ಅಧಿಕಾರಿಗಳ ತಂಡ ಪ್ರಯತ್ನ ನಡೆಸುತ್ತಿದೆಯಾದರೂ ಅಧಿಕಾರಿಗಳ ಮಾತಿಗೆ ಕೈದಿಗಳು ಸುಮ್ಮನಾಗುತ್ತಿಲ್ಲ. ಬೀಡಿಯಾದರೂ ಬೇಕು ಎಂದು ಪ್ರತಿಭಟನೆ ಮುಂದುವರಿಸಿದ್ದಾರೆ.

ಸಿಎ ಸೈಟ್: ಮಲ್ಲಿಕಾರ್ಜುನ ಖರ್ಗೆ ಟ್ರಸ್ಟ್, ಎಂಬಿಪಾಗೆ ಗೌರ್ನರ್ ಬಿಸಿ!

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ಇತ್ತೀಚೆಗೆಷ್ಟೆ ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್ ನೇತೃತ್ವದ 100ಕ್ಕೂ ಹೆಚ್ಚು ಪೊಲೀಸರ ತಂಡ ದಾಳಿ ನಡೆಸಿದಾಗ ಬೆಂಕಿ ಪೊಟ್ಟಣ ಹಾಗೂ ಬೀಡಿ ಬಂಡಲ್ ಮತ್ತು ಚಾರ್ಜರ್ ವಯರ್ ಸಿಕ್ಕಿತ್ತು. ಈ ಬಗ್ಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಹ ದಾಖಲಾಗಿತ್ತು. ಅಲ್ಲದೇ ಶಿವಮೊಗ್ಗ ಜೈಲಿಗೆ ದರ್ಶನ್ ಗ್ಯಾಂಗ್‌ನ ಇಬ್ಬರು ಆರೋಪಿಗಳನ್ನು ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಆನಂತರ ಜೈಲಿನಲ್ಲಿ ಇನ್ನಷ್ಟು ಬಂದೋಬಸ್ತ್ ಮಾಡಲಾಗಿತ್ತು. ಇದೆಲ್ಲದರ ಪರಿಣಾಮವಾಗಿ ಕೈದಿಗಳಿಗೆ ಬೀಡಿಯು ಸಿಗಂದತಾಗಿದೆ. ಇದರಿಂದ ಸಿಟ್ಟಿಗೆದ್ದಿರುವ ಕೈದಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.

Latest Videos
Follow Us:
Download App:
  • android
  • ios