ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳು ಮತ್ತು ಅವರ ಅಭಿಮಾನಿಗಳ ಸಾಮಾಜಿಕ ಜಾಲತಾಣದ ಅಕೌಂಟ್‌ ಅನ್ನು ನಿಷೇಧಿಸಬೇಕು  ಸಂಸದ ಪ್ರತಾಪ್‌ ಸಿಂಹ ಅವರು ಐಟಿ- ಬಿಟಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರಿಗೆ ಮನವಿ 

ಮೈಸೂರು (ಆ.21): ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳು ಮತ್ತು ಅವರ ಅಭಿಮಾನಿಗಳ ಸಾಮಾಜಿಕ ಜಾಲತಾಣದ ಅಕೌಂಟ್‌ ಅನ್ನು ನಿಷೇಧಿಸಬೇಕು ಎಂದು ಸಂಸದ ಪ್ರತಾಪ್‌ ಸಿಂಹ ಅವರು ಐಟಿ- ಬಿಟಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರಿಗೆ ಮನವಿ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

IPS VS IAS, ರೋಹಿಣಿ 'ಸ್ವಿಮಿಂಗ್ ಪೂಲ್‌'ಗೆ ಕಲ್ಲೆಸೆದ ಡಿ ರೂಪಾ!

ನಗರದ ಹೆಬ್ಬಾಳ ಕೈಗಾರಿಕ ಪ್ರದೇಶದಲ್ಲಿ ಕೆಡಿಇಎಂ ಕಚೇರಿ ಹಾಗೂ ಗ್ಲೋಟಚ್‌ ಟೆಕ್ನಾಲಜೀಸ್‌ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಮಾಡಿದ ಕೆಲಸಗಳನ್ನ ಜಿಲ್ಲೆಯಿಂದ ಒಂದು ಅಕೌಂಟ್‌ ತೆರೆದು ಅದರಲ್ಲಿ ಮಾಹಿತಿ ಹಾಕಲಿ. ಫ್ಯಾನ್‌ಪೇಜ್‌ಗಳಿಂದ ಕೇವಲ ಹೊಗಳಿಕೆಗಳು ಸೃಷ್ಟಿಯಾಗಿದೆ. 

ಐಎಎಸ್‌, ಐಪಿಎಸ್‌ ಅಧಿಕಾರಿಗಳು ಏನೂ ಕೆಲಸ ಮಾಡದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಕೋರಿದರು.