Asianet Suvarna News Asianet Suvarna News

ಚಾಮುಂಡೇಶ್ವರಿ ಪ್ರಾಧಿಕಾರ ಕಾಯ್ದೆಯಿಂದ ರಾಜಮನೆತನ ಕಡೆಗಣನೆ: ಇಂಚಿಂಚು ಮಾಹಿತಿ ಬಿಚ್ಚಿಟ್ಟ ರಾಣಿ ಪ್ರಮೋದಾ ದೇವಿ!

ರಾಜ್ಯ ಸರ್ಕಾರದ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೂಲಕ ರಾಜಮನೆತನ ಕಡೆಗಣನೆ ಮಾಡಿದ ಬಗ್ಗೆ ರಾಣಿ ಪ್ರಮೋದಾ ದೇವಿ ರಿಟ್ ಪಿಟಿಷನ್ ಮೂಲಕ ಪ್ರಶ್ನೆ ಮಾಡಿದ್ದಾರೆ.

Pramoda devi Wadiyar filed writ petition against Chamundeshwari authority act of state govt sat
Author
First Published Aug 11, 2024, 1:19 PM IST | Last Updated Aug 11, 2024, 1:19 PM IST

ಬೆಂಗಳೂರು (ಆ.11): ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತರಲಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024ರ ಹೊಸ ಕಾಯ್ದೆಯ ಮೂಲಕ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ದೇವಸ್ಥಾನ ಕಟ್ಟಿ ತಲೆ ತಲಾಂತರಗಳಿಂದ ಪೂಜಿಸಿಕೊಂಡು ಬಂದ ಒಡೆಯರ ರಾಜಮನೆತನಕ್ಕೆ ಅನ್ಯಾಯ ಮಾಡಲಾಗಿದೆ. ಈ ಮೂಲಕ ಚಾಮುಂಡೇಶ್ವರಿ ದೇವಾಲಯಕ್ಕೂ ಹಾಗೂ ರಾಜಮನೆತನಕ್ಕೂ ಇರುವ ಸಂಬಂಧ ಕಡಿತಗೊಳಿಸಿ ಎಲ್ಲ ಆಸ್ತಿ, ಪೂಜೆ, ವಿಧಿ ವಿಧಾನ, ಕಾಯ್ದೆ ರಚನೆ ಎಲ್ಲವೂ ಪ್ರಾಧಿಕಾರದ ಪಾಲಾಗಲಿದೆ. ಇದನ್ನು ಮಹಾರಾಣಿ ಪ್ರಮೋದಾದೇವಿ ಅವರು ಹೈಕೋರ್ಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.

ಪ್ರಮೋದ ದೇವಿ ಒಡೆಯರ್ ಪ್ರಶ್ನಿಸಿರುವ ಸರ್ಕಾರದ ನಿರ್ಧಾರಗಳು:
1. ಸೆಕ್ಷನ್ 2(ಎ) : 
ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ2024 ಬೆಟ್ಟದ ಸಂಪೂರ್ಣ ಸೌಕರ್ಯಗಳ ಬಗ್ಗೆ ಸರ್ಕಾರದಿಂದ ತೀರ್ಮಾನ ರಸ್ತೆ, ಲೈಟ್ಸ್, ಕ್ಲೀನ್, ಅಂಗಡಿ, ಮಾರ್ಕೇಟ್, ಚರಂಡಿ, ಪೊಲೀಸ್, ಹಾಲಿನ ಅಂಗಡಿ, ಮನೋರಂಜನೆ ಕಾರ್ಯಕ್ರಮಗಳು ಸೇರಿ ಎಲ್ಲಾ ರಾಜ್ಯ ಸರ್ಕಾರದ ಅಧಿಸೂಚನೆ ಮೇಲೆ ನಡೆಸಲು ಅಧಿಕಾರ. (ಇದರಲ್ಲಿ ರಾಜಮನೆತನದ ಎಲ್ಲ ಅಧಿಕಾರದ ಮಧ್ಯವಸ್ತಿಕೆ ತೆರವು ಆಗಿದೆ.

2. ಸೆಕ್ಷನ್ 3 ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024 ಪ್ರಾಧಿಕಾರದ ರಚನೆಯ ಅಧಿಕಾರ ಸರ್ಕಾರಕ್ಕೆ ಸೇರಿದ್ದು, ಅದರ ಅಧ್ಯಕ್ಷ ಸ್ಥಾನ ಸಿಎಂ ಅಂತಾ ಸರ್ಕಾರದ ಕಾಯ್ದೆಯಲ್ಲಿದೆ. ಪ್ರಾಧಿಕಾರದ ಪದಾಧಿಕಾರಿಗಳಲ್ಲಿ ರಾಜಮನೆತನವೇ ಇಲ್ಲ. ಬದಲಾಗಿ ಸ್ಥಳೀಯ, ಮಿನಿಸ್ಟರ್, ಶಾಸಕ, ಎಂಪಿ & ಅಧಿಕಾರಿಗಳು ಆಗಿರುತ್ತಾರೆ. (ಇಲ್ಲಿ ರಾಜಮನೆತನದ ಸಂಪೂರ್ಣ ಅಧಿಕಾರವನ್ನೇ ಮೊಟಕು ಮಾಡಲಾಗಿದೆ)

3. ಸೆಕ್ಷನ್ 12(1) ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024 ಪ್ರಾಧಿಕಾರದ ನೌಕರರ ನೇಮಕ ಮಾಡುವ ವಿಚಾರ ಆರ್ಚಕರು ಸೇರಿ ನೌಕರರ ನೇಮಿಸುವ ಅಧಿಕಾರ ಸರ್ಕಾರಕ್ಕೆ ನೀಡಲಾಗಿದೆ. (ರಾಜಮನೆತನದ ಸಂಪೂರ್ಣ ಅಧಿಕಾರವನ್ನೇ ಮೊಟುಕು ಆಗಿದೆ)

ನಾಡದೇವತೆ ಚಾಮುಂಡೇಶ್ವರಿ ಆಸ್ತಿಗೆ ಕೈ ಹಾಕಿದ ಮೂರೇ ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯಗೆ ಮುಡಾ ಉರುಳು!

4. ಸೆಕ್ಷನ್ 14(3) ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024 ಪ್ರಾಧಿಕಾರದ ಸಭೆಯ ತಿರ್ಮಾನಗಳ ಬಗ್ಗೆ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ. ಯಾವುದೇ ತಿರ್ಮಾನ ಇದ್ದರೂ ಅದು ಸರ್ಕಾರ ಮಾತ್ರ ನಿರ್ಣಯ ಆಗಿರುತ್ತದೆ. (ರಾಜಮನೆತನದ ಸಂಪೂರ್ಣ ಅಧಿಕಾರವನ್ನೇ ಮೊಟಕು ಆಗಿದೆ)

5. ಸೆಕ್ಷನ್ 14(4) ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024ರ ಅನ್ವಯ ಪ್ರಾಧಿಕಾರದ ತಿರ್ಮಾನಗಳ ಜಾರಿ ಮಾಡುವುದು ಕಾರ್ಯದರ್ಶಿಗೆ ಅಧಿಕಾರ ನೀಡಲಾಗಿದೆ. ಪ್ರಾಧಿಕಾರದ ಬಗ್ಗೆ ರಾಜ್ಯ ಸರ್ಕಾರದ ಆದೇಶಗಳನ್ನು ಜಾರಿ ಮಾಡುವ ಅಧಿಕಾರ ಹೊಂದಿದೆ. (ರಾಜಮನೆತನದ ಸಂಪೂರ್ಣ ಅಧಿಕಾರವನ್ನೇ ಮೊಟಕು ಆಗಿದೆ)

6. ಸೆಕ್ಷನ್ 16(1) ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024 ಪ್ರಾಧಿಕಾರದ ತಿರ್ಮಾನದ ಸುತ್ತೋಲೆಯೂ ಮುಖ್ಯಮಂತ್ರಿ ಅವರ ಸಹಿಯ ನಂತರವೇ ಬಿಡುಗಡೆ ಆಗಲಿದೆ. (ರಾಜಮನೆತನಕ್ಕೆ ಪ್ರಾಧಿಕಾರದ ಮಾಹಿತಿಯನ್ನು ನೀಡುವ ಅವಕಾಶದಿಂದ ವಂಚನೆ ಮಾಡಲಾಗಿದೆ)

7. ಸೆಕ್ಷನ್ 17(1) ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024 ರ ಅನ್ವಯ ಮುಖ್ಯಮಂತ್ರಿಗೆ ತುರ್ತು ಯಾವುದೇ ನಿರ್ದಾರ ತೆಗದುಕೊಳ್ಳುವ ಅಧಿಕಾರ ನೀಡಲಾಗಿದೆ. ಜೊತೆಗೆ, ಸಿಎಂ ಪ್ರಾಧಿಕಾರದ ಅಧ್ಯಕ್ಷರಾಗಿರಲಿದ್ದು, ತಾವು ಭಾವಿಸಿದ ತಿರ್ಮಾನ ಮಾಡುವ ಅಧಿಕಾರ ಹೊಂದಿರುತ್ಆರೆ. (ರಾಜಮನೆತನಕ್ಕೂ ದೇವಾಲಯದ ಪ್ರಾಧಿಕಾರಕ್ಕೆ ಅಧಿಕಾರವೇ ಕಟ್ ಮಾಡಲಾಗಿದೆ) 

8. ಸೆಕ್ಷನ್ 20(1)(ಒ)  ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024ರ ಅನ್ವಯ ಚಾಮುಂಡಿ ಪ್ರಾಧಿಕಾರದ ಸ್ವತ್ತನ್ನು ಮಾರಾಟದ ಅಧಿಕಾರ ನಿಗಮಕ್ಕೆ ಸೇರಿದೆ. ಯಾವುದೇ ಆಸ್ತಿಯನ್ನು ಮಾರಾಟ ಮಾಡುವ ಅಧಿಕಾರ, ಯಾವುದೇ ಆಸ್ತಿಯನ್ನು ಬಾಡಿಗೆಗೆ ನೀಡುವ ಅಧಿಕಾರ ಬೇಕಾದರೆ ಎಕ್ಸಚೆಂಜ್ ಮಾಡಿಕೊಳ್ಳುವ ಅಧಿಕಾರ ನಿಗಮಕ್ಕೆ ನೀಡಲಾಗಿದೆ. ಅದರಲ್ಲಿಯೂ ನಿಗಮದ ಅಧ್ಯಕ್ಷ ಮುಖ್ಯಮಂತ್ರಿ ಅವರೇ ಹೊಂದಿರುತ್ತಾರೆ.  (ರಾಜಮನೆತನದ ಚಾಮುಂಡಿ ಬೆಟ್ಟವನ್ನು ಕಸಿದುಕೊಂಡಿರುವ ಆರೋಪ)

9. ಸೆಕ್ಷನ್ 20(2) ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024ರ ಅನ್ವಯ ಚಾಮುಂಡೇಶ್ವರಿ ಬೆಟ್ಟದ ಆಸ್ತಿಯ ಮಾರಾಟ ಮಾಡುವ ಸಂಪೂರ್ಣ ಅಧಿಕಾರ ಸರ್ಕಾರಕ್ಕೆ ಇದೆ. ಸರ್ಕಾರ ಪ್ರಾಧಿಕಾರದ ನಿರ್ಧಾರದ ಮೇಲೆ ಅನುಮೋದನೆ & ತಿದ್ದುಪಡಿ ಅಧಿಕಾರವನ್ನು ಹೊಂದಿದೆ. (ಚಾಮುಂಡಿ ಬೆಟ್ಟದ ಬಗ್ಗೆ ರಾಜಮನೆತನಕ್ಕೆ ಯಾವುದೇ ಅಧಿಕಾರವೇ ಇಲ್ಲ)

ಸರ್ಕಾರಗಳು ರಾಜ ಮನೆತನಗಳನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ, ಪ್ರಮೋದಾದೇವಿ ಅಸಮಾಧಾನ

10.ಸೆಕ್ಷನ್ 25 ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024ರ ಅನ್ವಯ ಚಾಮುಂಡಿ ಬೆಟ್ಟದ ನಿಧಿಯ ಅಧಿಕಾರ ಸಂಪೂರ್ಣ ಸರ್ಕಾರದ್ದು. ದೇವಸ್ಥಾನಕ್ಕೆ ಬರುವ ದೇಣಿಗೆ, ಕಾಣಿಕೆ, ಸೇವಾಶುಲ್ಕ, ಹುಂಡಿ ಎಲ್ಲಾ ಸರ್ಕಾರಕ್ಕೆ ಹೋಗಲಿದೆ. ಇನ್ನು ದೇವಸ್ಥಾನದ ನಿಧಿಯ ಬಳಕೆಯ ಅಧಿಕಾರವೂ ಸಹ ಪ್ರಾಧಿಕಾರ & ಸರ್ಕಾರಕ್ಕೆ ಕೊಡಲಾಗಿದೆ. (ರಾಜಮನೆತನದವರು ನಿರ್ಮಿಸಿದ ದೇವಾಲಯದಲ್ಲಿ ರಾಜಮನೆತನಕ್ಕೆ ಯಾವಿದೇ ಅಧಿಕಾರ ಇಲ್ಲ)

11. ಸೆಕ್ಷನ್ 19 ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024ರ ಅನ್ವಯ ಚಾಮುಂಡಿ ಬೆಟ್ಟದ ಸಂಪೂರ್ಣ ಆಸ್ತಿಯ ಅಧಿಕಾರ ಸರ್ಕಾಕ್ಕೆ ಸೇರಿದ್ದು. ಸ್ಥಿರ, ಚರ ಎಲ್ಲಾ ಆಸ್ತಿಗಳ ಮೇಲೆ ಸರ್ಕಾರದಿಂದ ಅಧಿಕಾರ ಚಲಾಯಿಸಲಾಗುತ್ತದೆ. ಎಲ್ಲವನ್ನು ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಲು ಸರ್ಕಾರದ ನಿರ್ಧಾರ ಕೈಗೊಂಡಿದೆ. (ಈ ಮೂಲಕ ರಾಜಮನೆತನದ ಪುರಾತನ ಆಸ್ತಿ ಸದ್ಯ ಎಲ್ಲಾ ಸರ್ಕಾರಕ್ಕೆ ಸೇರ್ಪಡೆ ಆಗಿದ್ದು, ಈಗ ಪ್ರಾಧಿಕಾರಕ್ಕೆ ನೀಡಲಾಗುತ್ತದೆ)

12. ಸೆಕ್ಷನ್ 35(2) ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024ರ ಅನ್ವಯ ಪ್ರಾಧಿಕಾರ ವಿಸರ್ಜನೆಯ ಅಧಿಕಾರ ವಿಧಾನಸಭೆಗೆ ಸೇರುತ್ತದೆ. ವಿಧಾನಸಭೆಯಲ್ಲಿ ಮಂಡಿಸಿ ವಿಘಟನೆ ಮಾಡಲು ನಿರ್ಧಾರ ಕೈಗೊಳ್ಳಲಾಗುವುದು. (ಚಾಮುಂಡೇಶ್ವರಿ ದೇವಾಲಯದ ಪ್ರಾಧಿಕಾರಕ್ಕೂ ರಾಜಮನತನಕ್ಕೂ ಸಂಬಂಧ ಇಲ್ಲದಂತೆ ನಿರ್ಧಾರ ಮಾಡಲಾಗಿದೆ)

13. ಸೆಕ್ಷನ್ 40 ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024 ಅನ್ವಯ, ಈವರೆಗೆ ದೇವಾಲಯದ ಆಚರಣೆಗಳು ಎಲ್ಲವೂ ಬದಲಾವಣೆ ಬಗ್ಗೆ ಕೋರ್ಟ್ ಆದೇಶ, ಸಾಂಪ್ರದಾಯ, ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ. ಆದರೆ, ಇನ್ನುಮುಂದೆ ಹಿಂದೂ ಧಾರ್ಮಿಕ  ಸಂಸ್ಥೆಗಳ ನಿಯಮದಂತೆ ಮಾಡುವ ತಿರ್ಮಾನ  ಕೈಗೊಳ್ಳಲಾಗುತ್ತದೆ. (ರಾಜಮನೆತದ ಹೆಸರಲ್ಲಿ ಸಂಕಲ್ಪ ಮಾಡುತ್ತಿದ್ದ ಪೂಜೆಗೂ ಸರ್ಕಾರದಿಂದ ಬ್ರೇಕ್ ಹಾಕಲಾಗಿದೆ)

Latest Videos
Follow Us:
Download App:
  • android
  • ios