ಪ್ರಜ್ವಲ್ ರೇವಣ್ಣ 'ಸೀರೆ'ಯಸ್ ಕೇಸ್ ಡಿಎನ್‌ಎ ಟೆಸ್ಟ್‌ನಲ್ಲಿ ಸಾಬೀತು!
ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಹಾಸನದ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಅವ ರ ಡಿಎನ್‌ಎ ಪರೀಕ್ಷೆ ಪಾಸಿಟಿವ್ ಬಂದಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಬೆಂಗಳೂರು (ಅ.16): ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಹಾಸನದ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಅವ ರ ಡಿಎನ್‌ಎ ಪರೀಕ್ಷೆ ಪಾಸಿಟಿವ್ ಬಂದಿದೆ ಎಂಬ ಮಾಹಿತಿ ತಿಳಿದು ಬಂದಿದೆ. 2 ದಿನಗಳ ಹಿಂದೆ ಡಿಎನ್‌ಎ ಪರೀಕ್ಷೆ ವರದಿಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್ ಐಟಿ) ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಜ್ಞರು ಸಲ್ಲಿಸಿದ್ದು, ಈ ವರದಿಯಲ್ಲಿ ಮನೆಕೆಲಸದವರು ಹಾಗೂ ಹಾಸನ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಮನೆಯಲ್ಲಿ ಪತ್ತೆ ಯಾದ ಸೀರೆಗಳು, ಒಳ ಉಡುಪು ಗಳಲ್ಲಿ ಸಿಕ್ಕಿದ ವೀರ್ಯಕ್ಕೂ ಪ್ರಜ್ವಲ್ ಅವರ ವೀರ್ಯಕ್ಕೂ ಸಾಮ್ಯತೆ ಇದೆ ಎಂದು ಉಲ್ಲೇಖವಾಗಿದೆ ಎನ್ನಲಾಗಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾದ ಅತ್ಯಾಚಾರ ಪ್ರಕರಣಗಳ ತನಿಖೆಗೆ ಎಸ್‌ಐಟಿ ಅಧಿಕಾರಿಗಳು ಇಳಿದಿದ್ದರು.ಈ ಕೃತ್ಯಗಳು ನಡೆದಿದೆ ಎನ್ನಲಾದ ಹಾಸನದ ಸಂಸದರ ಅತಿಥಿ ಗೃಹ, ಹೊಳೆನರಸೀಪುರ ಮತ್ತು ಬೆಂಗಳೂರಿನ ಬಸವನಗುಡಿ ಮನೆಗಳು ಹಾಗೂ ತೋಟದ ಮನೆಗಳಲ್ಲಿ ಬೆಡ್ ಶೀಟ್, ಕೆಲ ಬಟ್ಟೆಗಳು ಹಾಗೂ ಸಂತ್ರಸ್ತೆಯರಿಂದ ಸೀರೆಗಳು, ಪೆಟ್ಟಿ ಕೋಟ್‌ಗಳನ್ನು ಜಪ್ತಿ ಮಾಡಿದ್ದರು. ಇವುಗಳಲ್ಲಿ ಪತ್ತೆಯಾದ ಕೂದಲು ಹಾಗೂ ವೀರ್ಯದ ಹೋಲಿಕೆಗೆ ಪ್ರಜ್ವಲ್ ಅವರನ್ನು ಎಸ್‌ಐಟಿ ಅಧಿಕಾರಿಗಳು ಡಿಎನ್‌ಎ ಪರೀಕ್ಷೆಗೊಳಪಡಿಸಿದ್ದರು.
ಚನ್ನಪಟ್ಟಣಕ್ಕೆ ಡಿ.ಕೆ.ಸುರೇಶ್ ಅಭ್ಯರ್ಥಿಯಾಗಲಿ: ಸಚಿವ ಜಮೀರ್ ಅಹಮದ್ ಖಾನ್
ಡಿಎನ್ಎ ವಿಶ್ಲೇಷಣೆಗೆ ಸಂತ್ರಸ್ತೆಯರು ಹಾಗೂ ಪ್ರಜ್ವಲ್ ಅವರಿಂದ ರಕ್ತ ಮಾದರಿ ಮತ್ತು ಕೂದಲನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್‌ಐಟಿ ಅಧಿಕಾರಿಗಳು ಕಳುಹಿಸಿದ್ದರು. ಈ ಬಗ್ಗೆ ಪರಿಶೀಲಿಸಿದ ಎಫ್ ಎಸ್ಎಎಲ್ ತಜ್ಞರು, ಎಸ್‌ಐಟಿಗೆ ಡಿಎನ್‌ಎ ವರದಿ ಸಲ್ಲಿಸಿ ದ್ದಾರೆ. ಕೆಲವೇ ದಿನಗಳಲ್ಲಿ ಡಿಎನ್‌ಎ ವರದಿ ಆಧರಿಸಿ ನ್ಯಾಯಾಲಯಕ್ಕೆ ಪ್ರಜ್ವಲ್ ವಿರುದ್ಧ ಹೆಚ್ಚುವರಿ ಆರೋಪ ಪಟ್ಟಿಯನ್ನು ಎಸ್‌ಐಟಿ ಅಧಿಕಾರಿಗಳು ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಇಬ್ಬರ ಸಂತ್ರಸ್ತೆಯ ಸೀರೆಗಳಲ್ಲಿ ಹೋಲಿಕೆ?: ಆರೋಪಿ ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮನೆ ಮತ್ತು ತೋಟದ ಮನೆಗಳು, ಹಾಸನ ನಗರದ ಸಂಸದರ ಅತಿಥಿ ಗೃಹ ಹಾಗೂ ಬೆಂಗಳೂರಿನ ಬಸವನಗುಡಿ ಮನೆಗಳಲ್ಲಿ ಅತ್ಯಾಚಾರ ನಡೆದಿವೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ ಈ ಕೃತ್ಯದ ಸ್ಥಳಗಳಲ್ಲಿ ಪತ್ತೆಯಾದ ಬಟ್ಟೆಗಳು, ಹೊದಿಕೆ ಹಾಗೂ ಇತರೆ ವಸ್ತುಗಳು ಕೃತ್ಯ ರುಜುವಾತುಪಡಿಸಲು ಎಸ್‌ಐಟಿಗೆ ಮಹತ್ವದ ಕುರುಹು ನೀಡಿವೆ ಎನ್ನಲಾಗಿದೆ.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಯಾರೇ ಸ್ಪರ್ಧಿಸಿದರೂ ನಾನೇ ಅಭ್ಯರ್ಥಿ: ಡಿ.ಕೆ.ಶಿವಕುಮಾರ್
ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆಯರ ಸೀರೆಗಳು ಹಾಗೂ ಪೆಟ್ಟಿಕೋಟ್‌ಗಳು ಈಗ ಪ್ರಜ್ವಲ್‌ಗೆ ಕಂಟಕ ತಂದಿವೆ. ತೋಟದ ಮನೆಯಲ್ಲಿ ಕೆಲಸ ಗಾರರು ಉಳಿದುಕೊಳ್ಳಲು ಪ್ರತ್ಯೇಕ ಕೋಣೆ ಯನ್ನು ಪ್ರಜ್ವಲ್ ಕುಟುಂಬದವರು ನೀಡಿ ದ್ದರು. ಈ ಪ್ರಕರಣದ ತನಿಖೆ ವೇಳೆ ತೋಟದ ಮನೆ ಮೇಲೆ ಎಸ್‌ಐಟಿ ದಾಳಿ ನಡೆಸಿದಾಗ ಕೆಲ ಸಗಾರರ ಕೋಣೆಯಲ್ಲಿ ನಾಲ್ಕು ಸೀರೆಗಳು ಹಾ ಗೂ ಪೆಟ್ಟಿಕೋಟ್‌ಗಳು ಸಿಕ್ಕಿದ್ದವು.