ಆ.. 2,000 ವಿಡಿಯೋ, 15,000 ಫೋಟೋಗಳಿರುವ ಮೊಬೈಲ್ ವಾಪಸ್ ಕೊಡಿ; ಪ್ರಜ್ವಲ್ ರೇವಣ್ಣ ಮನವಿ!

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಆರೋಪದ ಪ್ರಕರಣದಲ್ಲಿ ತಮ್ಮ ಮೊಬೈಲ್‌ನಲ್ಲಿರುವ 15,000 ಫೋಟೋಗಳು ಮತ್ತು 2,000 ವಿಡಿಯೋಗಳನ್ನು ಕೋರ್ಟ್ ಮುಂದೆ ಕೊಡಿಸುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಪ್ರಾಸಿಕ್ಯೂಷನ್‌ಗೆ ನೋಟಿಸ್ ಜಾರಿಯಾಗಿದ್ದು, ವಿಚಾರಣೆಯನ್ನು ಜ.16ಕ್ಕೆ ಮುಂದೂಡಲಾಗಿದೆ.

Prajwal Revanna case Request for 15000 photos and 2000 videos having mobiles sat

ಬೆಂಗಳೂರು (ಜ.10): ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಆರೋಪದ ಪ್ರಕರಣದಡಿ ಜೈಲಿನಲ್ಲಿದ್ದಾರೆ. ತಮ್ಮ ಮೇಲಿರುವ ಕೇಸ್ ವಜಾಗೊಳಿಸಲು ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಈ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಮುಂದೆ ನನ್ನ ಮೊಬೈಲ್‌ನಲ್ಲಿ 15,000ದಷ್ಟು ಫೋಟೋಗಳು ಹಾಗೂ 2,000ಕ್ಕೂ ಅಧಿಕ ವಿಡಿಯೋಗಳಿದ್ದು ಅದನ್ನು ಕೊಡಿಸಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಪ್ರಾಸಿಕ್ಯೂಷನ್ ವತಿಯಿಂದ ಕೋರ್ಟ್‌ಗೆ ಉತ್ತರಿಸುವಂತೆ ನೋಟೀಸ್ ಜಾರಿ ಮಾಡಲಾಗಿದೆ.

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದ ಪ್ರಮುಖ ಸಾಕ್ಷಿ ಆಗಿರುವ ವಿಡಿಯೋ ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ತಮ್ಮ ಸ್ಯಾಮ್‌ಸಂಗ್  ಫೋನ್‌ನಲ್ಲಿ ಇರುವ ವಿಡಿಯೊ ದಾಖಲೆಗಳನ್ನು ತಮಗೆ ವಾಪಸ್ ಕೊಡಿ ಎಂದು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅದರಲ್ಲಿರುವ ವಿಡಿಯೋ, ಪೋಟೋಗಳನ್ನು ತಮಗೆ ಒದಗಿಸಬೇಕು. ನಮ್ಮ ಕಾರು ಚಾಲಕನಿಂದ ಪೊಲೀಸರು ಜಪ್ತಿ ಮಾಡಿದ ಮೊಬೈಲ್‌ನಲ್ಲಿ ಬರೋಬ್ಬರಿ 2 ಸಾವಿರ ವಿಡಿಯೋ, 15 ಸಾವಿರ ಫೋಟೋ  ಇದ್ದು ಅದನ್ಉ ವಾಪಸ್ ಕೊಡಿ ಎಂದು ಮನವಿ ಮಾಡಿದ್ದಾರೆ.

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕೋರಿಕೆ ಮನ್ನಿಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠವು ಈ ಬಗ್ಗೆ ಪ್ರಾಸಿಕ್ಯೂಷನ್‌ಗೆ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಲಾಯಿತು. ಇದೇ ವೇಳೆ ಪ್ರಜ್ವಲ್ ವಿರುದ್ಧ ಆರೋಪ ನಿಗದಿ ಮಾಡದಂತೆ ಹೈಕೋರ್ಟ್‌ನಿಂದ ಆದೇಶ ಹೊರಡಿಸಲಾಯಿತು. ಇದೇ ಜ.13ಕ್ಕೆ ವಿಚಾರಣಾಧೀನ ಕೋರ್ಟ್‌ನಲ್ಲಿ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ಆರೋಪ ನಿಗದಿ ಪ್ರಕ್ರಿಯೆ (ಚಾರ್ಜ್ ಶೀಟ್ ಆಧಾರದ ಮೇಲೆ ಆರೋಪಿಯನ್ನ ಕೋರ್ಟ್‌ಗೆ ಕರೆಸಿ ಯಾವ ಯಾವ ಆರೋಪದ ಅಡಿ ಚಾರ್ಜ್ ಶೀಟ್ ಆಗಿದೆ ಎಂದು ವಿಚಾರಣೆ ಎದುರಿಸುವ ಕೋರ್ಟ್ ಸೂಚಿಸುವ ಪ್ರಕ್ರಿಯೆ) ಆರಂಭಿಸಲು ದಿನಾಂಕ ನಿಗದಿಯಾಗಿತ್ತು. ಇದು ಟ್ರಯಲ್‌ನ ಮೊದಲ ಹಂತವಾಗಿದೆ. ಇದೀಗ ಹೈಕೋರ್ಟ್ ತನ್ನ ಮುಂದಿನ ವಿಚಾರಣೆಯನ್ನು ಜ.16ಕ್ಕೆ ಮುಂದೂಡಿಕೆ ಮಾಡಿದೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ಬಿಗ್ ರಿಲೀಫ್, ಆರೋಪ ನಿಗದಿಗೆ ತಡೆ

ವಿಡಿಯೋ ಎಫ್‌ಎಸ್‌ಎಲ್ ವರದಿ ಮೇಲೆ ಅನುಮಾನ: ಇದೇ ವೇಳೆ ಪ್ರಜ್ವಲ್ ರೇವಣ್ಣ ತಮ್ಮ ವಿರುದ್ಧದ ಟೆಕ್ನಿಕಲ್ ಎವಿಡೆನ್ಸ್ ನೀಡಲು ಮನವಿ ಮಾಡಿದ್ದಾರೆ. ತಮ್ಮ ವಿರುದ್ಧದ ಟೆಕ್ನಿಕಲ್ ಎವಿಡೆನ್ಸ್ ಮತ್ತು ವಿಡಿಯೋಗಳನ್ನು ವಾಪಸ್ ಕೊಡುವಂತೆ ಕೆಳಹಂತದ ನ್ಯಾಯಾಲಯದ ಮೂಲಕ ನೀಡಲು ಮನವಿ ಮಾಡಲಾಗಿದೆ. ಇಲ್ಲಿ ತನ್ನ ವಿರುದ್ಧ ಅತ್ಯಾಚಾರ ನಡೆದಿದೆ ಎಂದು ಎಫ್‌ಎಸ್ಎಲ್ ವರದಿ ನೀಡಲಾಗಿದೆ. ಬಳಿಕ ವಿಡಿಯೋಗಳು ಅಸಲಿ ಎಂದು ಎಫ್‌ಎಸ್ಎಲ್ ವರದಿ ಆಗಿತ್ತು. ಈ ಎಫ್‌ಎಸ್‌ಎಲ್‌ ವರದಿಗಳ ಮೇಲೆ ಅನುಮಾನ ಎಂದು ಅರ್ಜಿ ಸಲ್ಲಿಕೆ ಮಾಡಲಾಗಿದೆ.

ವಿಡಿಯೋ ಕೊಡಲು ಸಾಧ್ಯವಿಲ್ಲ ಎಂದ ಸರ್ಕಾರಿ ವಕೀಲರು: ಈ ವಿಡಿಯೋ ಮತ್ತು ಪೋಟೋ ಒದಗಿಸಲು ಸಾಧ್ಯವಿಲ್ಲ. ಹಲವು ಮಹಿಳೆಯರ ಗುರುತು ಬಹಿರಂಗವಾಗುವುದಲ್ಲದೆ ಅವರ ಖಾಸಗಿತನಕ್ಕೆ ಧಕ್ಕೆ ಆಗುತ್ತದೆ.  ವಿಚಾರಣಾ ಪ್ರಕ್ರಿಯೆ ವಿಳಂಬಗೊಳಿಸುವ ಉದ್ದೇಶದಿಂದ ಪ್ರಜ್ವಲ್‌ ಈ ಅರ್ಜಿ ಸಲ್ಲಿಸಿದ್ದಾರೆ ಎಂದು ಸರ್ಕಾರದ ಪರ ವಕೀಲ ಬಿ.ಎನ್.ಜಗದೀಶ್ ಹೇಳಿದರು. ಆಗ ನ್ಯಾಯಾಧೀಶರು - ದೂರುದಾರರನ್ನು ಹೊರತುಪಡಿಸಿ ಉಳಿದ ಸಂತ್ರಸ್ತರ ಗುರುತು ಬಹಿರಂಗವಾಗುವುದಕ್ಕೆ ನ್ಯಾಯಾಲಯ ಅವಕಾಶ ನೀಡುವುದಿಲ್ಲ. ನೀವು ಕೇಳುತ್ತಿರುವ ದಾಖಲೆ ಸಾವಿರಾರು ಪುಟಗಳಿವೆ ಎಂದು ಪ್ರಾಸಿಕ್ಯೂಷನ್‌ ಹೇಳುತ್ತಿದೆ. ನಿಮಗೆ ಅದರ ಅವಶ್ಯಕತೆ ಏನಿದೆ? ಸಂತ್ರಸ್ತರ ಖಾಸಗಿ ಬದುಕಿಗೆ ಎರವಾಗುವ ಯಾವುದೇ ಬೆಳವಣಿಗೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳುತ್ತಾ ಪ್ರಾಸಿಕ್ಯೂಷನ್‌ಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿಕೆ ಮಾಡಲಾಯಿತು.

ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನಲ್ಲೂ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ: 6 ತಿಂಗಳು ಜೈಲೇ ಗತಿ!

Latest Videos
Follow Us:
Download App:
  • android
  • ios