Asianet Suvarna News Asianet Suvarna News

ಕೋಳಿ ಸಾಕಿದ ರೈತನಿಗೆ 1.3 ಲಕ್ಷ ರೂ ತೆರಿಗೆ, ಪಂಚಾಯತ್ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್ ಗರಂ!

ತನ್ನ ಜಮೀನಿನಲ್ಲಿ ಕೋಳಿ ಸಾಕಾಣೆ ಆರಂಭಿಸಿದ ರೈತನಿಗೆ ಗ್ರಾಮ ಪಂಚಾಯಿತಿ ಶಾಕ್ ನೀಡಿತ್ತು. ಬರೋಬ್ಬರಿ 1.3 ಲಕ್ಷ ರೂ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿತ್ತು. ಇದರ ವಿರುದ್ದ ಕೋರ್ಟ್ ಮೆಟ್ಟಿಲೇರಿದ್ದ ರೈತನಿಗೆ ಗೆಲುವಾಗಿದೆ. ಕೋಳಿ ಸಾಕಾಣೆ ವಾಣಿಜ್ಯ ಚಟುವಟಿಕೆ ಅಲ್ಲ. ಹೀಗಾಗಿ ತೆರಿಗೆ ವಿಧಿಸಲು ಗ್ರಾಮ ಪಂಚಾಯಿತಿಗೆ ಅಧಿಕಾರವಿಲ್ಲ ಎಂದು ಆದೇಶ ಹೊರಡಿಸಿದೆ. 

Poultry farm comes under agriculture activity no commercial tax apply says Karnataka high court ckm
Author
First Published Sep 23, 2023, 3:41 PM IST

ಬೆಂಗಳೂರು(ಸೆ.23) ರೈತರು ಹಲವು ತಮ್ಮ ಸಾಂಪ್ರದಾಯಿಕ ಕೃಷಿ ಚಟುವಟಿಕೆ ಜೊತೆಗೆ ಹೈನುಗಾರಿಕೆ, ಕೋಳಿ ಸಾಕಾಣೆ ಸೇರಿದಂತೆ ಹಲವು ಇತರ ಚಟವಟಿಕೆ ಮೂಲಕ ಆದಾಯ ಗಳಿಸುತ್ತಿದ್ದಾರೆ. ಹೀಗೆ ಕೋಳಿ ಸಾಕಾಣೆಗೆ ಕೇಂದ್ರ ನಿರ್ಮಿಸಿ ಹೆಚ್ಚಿನ ಆದಾಯ ಗಳಿಸಲು ಹೊರಟ ರೈತನಿಗೆ ಸೊಂಡೆಕೊಪ್ಪ ಗ್ರಾಮ ಪಂಚಾಯತ್ ಶಾಕ್ ನೀಡಿತ್ತು. ಕೇಂದ್ರಕ್ಕೆ ಬರೋಬ್ಬರಿ 1.37 ಲಕ್ಷ ರೂಪಾಯಿ ತೆರಿಗೆ ವಿಧಿಸಿತ್ತು. ಈ ಪೈಕಿ 50 ಸಾವಿರ ರೂ ಪಾವತಿ ಮಾಡಿದ ರೈತ ಬಾಕಿ ಹಣಕ್ಕಾಗಿ ಪರದಾಡಿದ್ದ. ಇದೇ ವೇಳೆ ತನ್ನ ಕೋಳಿ ಸಾಕಾಣೆ ಕೇಂದ್ರ ವಾಣಿಜ್ಯ ಚಟುವಟಿಕೆ ಅಲ್ಲ ಅನ್ನೋದು ಗಮನಕ್ಕೆ ಬಂದಿದೆ. ತಕ್ಷಣವೇ ಹೈಕೋರ್ಟ್ ಮೆಟ್ಟೆಲೇರಿದ ರೈತನಿಗೆ ನ್ಯಾಯ  ಸಿಕ್ಕಿದೆ. ಈ ಕುರಿತು ಮಹತ್ವದ ಆದೇಶ ಹೊರಡಿಸಿದ ಕರ್ನಾಟಕ ಹೈಕೋರ್ಟ್, ಕೋಳಿ ಸಾಕಾಣಿಕೆಯು (ಪೌಲ್ಟ್ರಿ ಫಾರಂ) ಕೃಷಿ ಚಟುವಟಿಕೆಯಾಗಿದ್ದು, ಅದನ್ನು ವಾಣಿಜ್ಯ ಚಟುವಟಿಕೆಯಾಗಿ ಪರಿಗಣಿಸಿ ಕರ್ನಾಟಕ ಗ್ರಾಮ ಸ್ವರಾಜ್​ ಕಾಯ್ದೆಯಡಿ ಯಾವುದೇ ರೀತಿಯ ತೆರಿಗೆ ವಿಧಿಸಲು ಗ್ರಾಮ ಪಂಚಾಯತಿ​ಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. 

ಕೆ ನರಸಿಂಹ ಮೂರ್ತಿ ಅನ್ನೋ ರೈತನಿಗೆ ಬೆಂಗಳೂರು ಉತ್ತರ ತಾಲೂಕಿನ ಸೊಂಡೆಕೊಪ್ಪ ಗ್ರಾಮ ಪಂಚಾಯತ್ ವಾಣಿಜ್ಯ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿಗೊಳಿಸಿತ್ತು. ಈ ನೋಟಿಸ್ ವಿರುದ್ಧ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದ ಕೆ ನರಸಿಂಹ ಮೂರ್ತಿ ಪರವಾಗಿ ಕೋರ್ಟ್ ಆದೇಶ ನೀಡಿದೆ. ಕೋಳಿ ಸಾಕಾಣೆ ಕೇಂದ್ರದ ಕುರಿತು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ನೇೃತ್ವದ ಪೀಠ ಮಹತ್ವದ ಆದೇಶ ನೀಡಿದೆ. 

ನೋಣದಿಂದ ಮುಕ್ತಿಗೊಳಿಸಿದ್ರೆ ಜನಪ್ರತಿನಿಧಿಗೆ 1 ಲಕ್ಷ ರೂ. ಬಹುಮಾನ; ಹೆಬ್ಬಾಳ್ ಯುವಕ ಘೋಷಣೆ!

ಕೋಳಿ ಸಾಗಾಣಿಕೆಯು ಕೃಷಿ ಚಟುವಟಿಕೆಯಾಗಿದೆ. ಕೋಳಿ ಸಾಗಾಣಿಕೆ ಕೇಂದ್ರದ ಕಟ್ಟಡವನ್ನು ಕರ್ನಾಟಕ ಗ್ರಾಮ ಸ್ವರಾಜ್​ ಕಾಯ್ದೆ ಶೆಡ್ಯೂಲ್ಡ್‌ 4 ರ (ಎ)(2) ಅಡಿಯಲ್ಲಿ ವಾಣಿಜ್ಯ ಕಟ್ಟಡವನ್ನಾಗಿ ಪರಿಗಣಿಸಿ ತೆರಿಗೆ ವಿಧಿಸಲು ಅವಕಾಶವಿಲ್ಲ. ಇನ್ನೂ ಕೃಷಿ ಜಮೀನಿನಲ್ಲಿ ಕೋಳಿ ಸಾಕಣಿಕೆ ಕೇಂದ್ರ ಕಟ್ಟಡ ನಿರ್ಮಿಸಿದ ನಂತರವೂ ಅದು ಕೃಷಿ ಭೂಮಿಯಾಗಿಯೇ ಮುಂದುವರೆಯಲಿದೆ. ಅದನ್ನು ವಾಣಿಜ್ಯ ಭೂಮಿಯಾಗಿ ಪರಿಗಣಿಸಿ ತೆರಿಗೆ ವಿಧಿಸಲು ಸಾಧ್ಯವಿಲ್ಲ. ಕೃಷಿ ಭೂಮಿಯನ್ನು ವಾಣಿಜ್ಯ ಬಳಕೆಗೆ ಪರಿವರ್ತಿಸುವ ಅಗತ್ಯವೂ ಇಲ್ಲ ಎಂದು ಆದೇಶಿಸಿದೆ.

ಅಲ್ಲದೆ, ಕೋಳಿ ಸಾಕಣಿಕೆಯು ವಾಣಿಜ್ಯ ಚಟುವಟಿಕೆಯಾಗಿದ್ದು, ಅದಕ್ಕಾಗಿ ನಿರ್ಮಿಸಿರುವ ಕಟ್ಟಡಕ್ಕೆ ವಿದ್ಯುತ್​ ಸಂಪರ್ಕ ಪಡೆಯುವುದಕ್ಕೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ವಿತರಿಸಲು 1.3 ಲಕ್ಷ ರು. ತೆರಿಗೆ ಪಾವತಿಸುವಂತೆ ಅರ್ಜಿದಾರರಿಗೆ ಸೂಚಿಸಿ ಗ್ರಾಮ ಪಂಚಾಯತಿ ಜಾರಿಗೊಳಿಸಿದ್ದ ನೋಟಿಸ್ ಅನ್ನು ಹೈಕೋರ್ಟ್‌ ಇದೇ ವೇಳೆ ರದ್ದುಪಡಿಸಿದೆ. ಹಾಗೆಯೇ, ಅರ್ಜಿದಾರರಿಂದ ಈಗಾಗಲೇ ತೆರಿಗೆ ರೂಪದಲ್ಲಿ ಸಂಗ್ರಹಿಸಿರುವ 59,551 ರು.ಗಳನ್ನು ಹಿಂದಿರುಗಿಸುವಂತೆ ಪಂಚಾಯತಿಗೆ ನಿರ್ದೇಶಿಸಿದೆ.

 

Business Idea : ಪಶುಸಂಗೋಪನೆ ಮಾಡೋ ಮೊದಲು ಯಾವುದು ಲಾಭದಾಯಕ ಎಂಬುದನ್ನು ತಿಳ್ಕೊಳ್ಳಿ

Follow Us:
Download App:
  • android
  • ios