ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಫುಲ್ ಆಕ್ಟಿವ್; ಸರ್ಕಾರದ ವಿರುದ್ಧ ಪೋಸ್ಟರ್ ಅಭಿಯಾನ!
ರಾಜ್ಯದಲ್ಲಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ , ವಿಪಕ್ಷ ನಾಯಕನ ಆಯ್ಕೆ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಆಕ್ಟಿವ್ ಆಗಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಕಾಫಿನಾಡಿನಲ್ಲಿ ಆಕ್ಟಿವ್ ಆಗಿ ಪೋಸ್ಟರ್ ಅಭಿಯಾನ ನಡೆಸಿದ್ದಾರೆ. ಸರ್ಕಾರದ ಪಂಚ ಗ್ಯಾರಂಟಿಗಳ ವಿರುದ್ಧ ವ್ಯಂಗ್ಯ-ಆಕ್ರೋಶ ಹೊರಹಾಕಿ ಸಿಎಂ ಸಿದ್ದು ವಿರುದ್ಧ ಶ್ಯಾಡೋ ಸಿಎಂ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ನ.18) : ರಾಜ್ಯದಲ್ಲಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ , ವಿಪಕ್ಷ ನಾಯಕನ ಆಯ್ಕೆ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಆಕ್ಟಿವ್ ಆಗಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಕಾಫಿನಾಡಿನಲ್ಲಿ ಆಕ್ಟಿವ್ ಆಗಿ ಪೋಸ್ಟರ್ ಅಭಿಯಾನ ನಡೆಸಿದ್ದಾರೆ. ಸರ್ಕಾರದ ಪಂಚ ಗ್ಯಾರಂಟಿಗಳ ವಿರುದ್ಧ ವ್ಯಂಗ್ಯ-ಆಕ್ರೋಶ ಹೊರಹಾಕಿ ಸಿಎಂ ಸಿದ್ದು ವಿರುದ್ಧ ಶ್ಯಾಡೋ ಸಿಎಂ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ.
ವ್ಯಂಗ್ಯ ಚಿತ್ರದ ಮೂಲಕ ವ್ಯಂಗ್ಯ
ಚಿಕ್ಕಮಗಳೂರು ನಗರದಲ್ಲಿ ಬಿಜೆಪಿ ಯುವಮೋರ್ಚಾದಿಂದ ಸರ್ಕಾರದ ವಿರುದ್ಧ ವ್ಯಂಗ್ಯ ಹಾಗೂ ಆಕ್ರೋಶದ ಫೋಸ್ಟರ್ ಅಂಟಿಸುವ ಮೂಲಕ ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಶ್ಯಾಡೋ ಸಿಎಂ ಪೋಸ್ಟರ್ ಅಂಟಿಸಿದ್ದಾರೆ. ನಗರದ ತಾಲೂಕು ಆಫೀಸ್, ಮೆಸ್ಕಾಂ ಕಚೇರಿ, ತಾಲೂಕು ಪಂಚಾಯಿತಿ, ಪ್ರವಾಸಿ ಮಂದಿರದಲ್ಲಿ ಪೋಸ್ಟರ್ ಅಭಿಯಾನ ನಡೆಸಲಾಗಿದೆ. ಚಿಕ್ಕಮಗಳೂರು ನಗರದ ವಿವಿಧೆಡೆ ಪೋಸ್ಟರ್ ಅಭಿಯಾನ ನಡೆಸಿರೋ ಬಿಜೆಪಿ ಕಾರ್ಯಕರ್ತರು ಮುಂಜಾನೆಯೇ ಪ್ರತಿಭಟನೆಗೆ ಇಳಿದಿದ್ದಾರೆ. ವ್ಯಂಗ್ಯ ಚಿತ್ರದ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಸಮರ್ಥ ವ್ಯಕ್ತಿಯ ಆಯ್ಕೆ: ಶಾಸಕ ಪ್ರಭು ಚವ್ಹಾಣ್
ಇಂಧನ ಸಚಿವರು ಕಾಣೆ ಪೋಸ್ಟರ್ :
ರಾಜ್ಯವನ್ನ ಕತ್ತಲೆಗೆ ದೂಡಿ ಇಂಧನ ಸಚಿವರು ನಾಪತ್ತೆ ಎಂದು ಪೋಸ್ಟರ್ ಹಾಕಿದ್ದು, ಕೆ.ಜೆ.ಜಾರ್ಜ್ ಇಂಧನ ಸಚಿವ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕಾಣೆ ಎಂದು ಪೋಸ್ಟ್ ಸಹಾ ಅಂಟಿಸಲಾಗಿದೆ. ಈ ತಿಂಗಳ ಕಪ್ಪ ಎಲ್ಲಿ ಎಂದು ಪ್ರಶ್ನೆ ಕೇಳಿರೋ ಸೋನಿಯಾ ಗಾಂಧಿ ರೀತಿಯ ಪೋಸ್ಟರ್ ಸಹಾ ಅಂಟಿಸಲಾಗಿದೆ. ಅದಕ್ಕೆ ಉತ್ತರ ಎಂಬಂತೆ ಈಗ ತಾನೇ ವಿದ್ಯುತ್ ಬಿಲ್ ಹೆಚ್ಚಳವಾಗಿದೆ. ಇರೀ ಮ್ಯಾಮ್ ಎನ್ನುತ್ತಿರೋ ಇಂಧನ ಸಚಿವರ ಫೋಟೋ ಅಲ್ಲದೇ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ವಿರುದ್ಧ ವ್ಯಂಗ್ಯ-ಆಕ್ರೋಶದಿಂದ ಕೂಡಿದ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರು, ಇಂಧನ ಸಚಿವರ ಕಛೇರಿಗೆ ಅಂಟಿಸಿದ್ದ ಪೋಸ್ಟರ್ ಗಳನ್ನು ಸಿಬ್ಬಂದಿಗಳ ತೆರೆವುಗೊಳಿಸಿದ್ದು ಇನ್ನು ಸರ್ಕಾರಿ ಕಛೇರಿಗಳಲ್ಲಿ ಅಂಟಿಸಲಾಗಿದ್ದ ಪೋಸ್ಟರ್ ಗಳನ್ನ ಪೊಲೀಸರು ತೆರವುಗೊಳಿಸಿದ್ದಾರೆ.
News Hour: ಆರ್.ಅಶೋಕ್‌ಗೆ ವಿಪಕ್ಷ ನಾಯಕನ ಪಟ್ಟ, ಬಿಜೆಪಿಯಲ್ಲಿ ಬಂಡಾಯ ಸ್ಫೋಟ!
ಎಫ್‌ಐಆರ್ ದಾಖಲು :
ಪೋಸ್ಟರ್‌ಗಳನ್ನು ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆ ಪೊಲೀಸರು ಐದು ಮಂದಿ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರವಾಸಿ ಮಂದಿರದ ಮೇಟಿ ಲಿಂಗೇಗೌಡ ಅವರು ನೀಡಿದ ದೂರನ್ನಾಧರಿಸಿ ಸಾರ್ವಜನಿಕ ಆಸ್ತಿ ವಿಕಾರ ತಡೆ ಕಾಯ್ದೆ 1981ರ ಪ್ರಕಾರ ಐಪಿಸಿ ಸೆಕ್ಷನ್ 290 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪರ-ವಿರೋಧ ಚರ್ಚೆ
ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಪೋಸ್ಟರ್ ಅಂಟಿಸಿರುವ ವಿಚಾರ ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಪೋಸ್ಟರ್ ಅಂಟಿಸುವ ಸಂಸ್ಕೃತಿ ಸರಿಯಲ್ಲ ಎಂದು ವಾದಿಸುತ್ತಿದ್ದರೆ, ಇಂತಹ ಸಂಸ್ಕೃತಿಯನ್ನು ಮೊದಲ ಬಾಗರಿಗೆ ಆರಂಭಿಸಿದ್ದೇ ಕಾಂಗ್ರೆಸಿಗರು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ.