Asianet Suvarna News Asianet Suvarna News

ಬಳ್ಳಾರಿ ಜೈಲಿನಲ್ಲಿ ದರ್ಶನ್ ಸಂಕಷ್ಟ ಡಬಲ್: ಚೈನ್, ಕೈದಾರ, ಕಡಗ ಬಿಚ್ಚಿಸಿದ ಪೊಲೀಸರು!

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಶಿಸ್ತು ತೋರಿದ ನಟ ದರ್ಶನ ಹಾಗೂ ಗ್ಯಾಂಗ್ ದಿಕ್ಕಾಪಾಲಾಗಿದೆ.ದರ್ಶನ್‌ನ್ನು ಪೊಲೀಸರು ಬಳ್ಳಾರಿ ಜೈಲಿಗೆ ಕರೆತಂದಿದ್ದಾರೆ. ಆದರೆ ಬಳ್ಳಾರಿ ಜೈಲಿಗೆ ಎಂಟ್ರಿಯಾಗುತ್ತಿದ್ದಂತೆ ದರ್ಶನ್ ಸಂಕಷ್ಟ ಹೆಚ್ಚಾಗಿದೆ.

Police removes Actor darshan neck chain hand thread before entering ballari jail ckm
Author
First Published Aug 29, 2024, 11:25 AM IST | Last Updated Aug 29, 2024, 11:25 AM IST

ಬಳ್ಳಾರಿ(ಆ.29) ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಜೈಲು ಸೈರಿದ್ದ ನಟ ದರ್ಶನ್ ಹಾಗೂ ಗ್ಯಾಂಗ್ ಸಂಕಷ್ಟ ಹೆಚ್ಚಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಹಾಗೂ ಅಶಿಸ್ತಿನ ಕಾರಣದಿಂದ ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಿತ್ತು. ಇದರ ಬೆನ್ನಲ್ಲೇ ಪೊಲೀಸರು ನಟ ದರ್ಶನ್ ಹಾಗೂ ಆತನ ಗ್ಯಾಂಗ್‌ನ್ನು ರಾಜ್ಯದ ಬೇರೆ ಬೇರೆ ಜೈಲಿಗೆ ಸ್ಥಳಾಂತರ ಮಾಡಿದ್ದಾರೆ. ಈ ಪೈಕಿ ನಟ ದರ್ಶನ್‌ನ್ನು ಪೊಲೀಸರು ಬಳ್ಳಾರಿ ಜೈಲಿಗೆ ಕರೆ ತಂದಿದ್ದಾರೆ. ಜೈಲು ಪ್ರವೇಶಿಸುತ್ತಿದ್ದಂತೆ ದರ್ಶನ್ ಸಂಕಷ್ಟ ಡಬಲ್ ಆಗಿದೆ. ಜೈಲಿನ ಒಳಗೆ ಬರುತ್ತಿದ್ದಂತೆ ಕೈಯಲ್ಲಿದ್ದ ದಾರ, ಕುತ್ತಿಗೆಯ ಚೈನ್, ಕಡಗವನ್ನು ಪೊಲೀಸರು ಬಿಚ್ಚಿಸಿದ್ದಾರೆ.

ದರ್ಶನ್ ಕರೆದ ತಂದ ಪೊಲೀಸರು ನೇರವಾಗಿ ಜೈಲಿನೊಳಗೆ ಕರೆತಂದಿದ್ದಾರೆ. ಬಳಿಕ ದರ್ಶನ್ ಜೈಲು ಪುಸ್ತಕದಲ್ಲಿ ಸಹಿ ಹಾಕಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ದರ್ಶನ್ ತೊಟ್ಟಿದ್ದ ಚೈನ್ ಸೇರಿದಂತೆ ಇತರ ವಸ್ತುಗಳನ್ನು ತೆಗೆದಿಡಲು ಸೂಚಿಸಿದ್ದಾರೆ. ಜೈಲು ಪೊಲೀಸರಲ್ಲಿ ಚೈನ್, ದಾರ ಹಾಗೂ ಕಡಗಕ್ಕೆ ವಿನಾಯಿತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇದರೆ ಇದಕ್ಕೆ ಒಪ್ಪದ ಜೈಲು ಅಧಿಕಾರಿಗಳು ಖಡಕ್ ಸೂಚನೆ ನೀಡಿದ್ದಾರೆ. ಜೈಲು ಅಧಿಕಾರಿಗಳ ತಾಕೀತಿನಿಂದ ದರ್ಶನ್ ಕೈಯಲ್ಲಿದ್ದ ಕೆಂಪು ದಾರ, ಕುತ್ತಿಗೆ ಚೈನ್ ಹಾಗೂ ಕೈಯಲ್ಲಿದ್ದ ಕಡಗವನ್ನು ಬಿಚ್ಚಿಟ್ಟಿದ್ದಾರೆ.  

suvarnanews exclusive: ರೌಡಿ ವಿಲ್ಸನ್‌ ಗಾರ್ಡನ್ ನಾಗನ ಜತೆ ಜೈಲಲ್ಲಿ ದರ್ಶನ್‌ ಸಿಗರೇಟ್‌ ಸೇದುವ ಫೋಟೋ ವೈರಲ್!

ಜೈಲಿನ ಬಲಭಾಗದ ಸೆಕ್ಯೂರಿಟಿಲ ಕೊಠಡಿಯಲ್ಲಿ ದರ್ಶನ್ ಸಹಿ ಮಾಡಿದ್ದಾರೆ. ಇದೇ ವೇಳೆ ದರ್ಶನ್ ತಂದಿರುವ 2 ಬ್ಯಾಗ್‌ಗಳನ್ನು ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಕಪ್ಪು ಟಿಶರ್ಟ್ ಧರಿಸಿದ್ದ ದರ್ಶನ್, ಟಿ ಶರ್ಟ್ ಮೇಲೆ ಚಸ್ಮಾ ಹಾಕಿದ್ದರು. ನಟ ದರ್ಶನ್ ಕರೆತರುವ ಹಿನ್ನಲೆಯಲ್ಲಿ ಜೈಲು ಸುತ್ತು ಮತ್ತು ಭಾರಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ದರ್ಶನ್ ತಪಾಸಣೆ ವೇಳೆ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಎಸ್ಪಿ ಶೋಭರಾಣಿ , ಸೂಪರಿಡೆಂಟ್ ಲತಾ ನೇತೃತ್ವದಲ್ಲಿ ದರ್ಶನ್ ಜೈಲಿನೊಳಗೆ ಕರೆತರಲಾಗಿದೆ.  

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೊತೆ ಅರೆಸ್ಟ್ ಆಗಿರುವ ಇತರ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲಿಗೆ ಸ್ಥಲಾಂತರಿಸಲಾಗಿದೆ.ಆರೋಪಿ ಧನರಾಜ್ ಕೇಂದ್ರ ಕಾರಾಗೃಹ ಧಾರವಾಡಕ್ಕೆ ಸ್ಥಳಾಂರಿಸಲಾಗಿದೆ.  ಎ6 ಆರೋಪಿ  ಜಗದೀಶ್, ಎ12 ಆರೋಪಿ ಲಕ್ಷ್ಮಣ್ ನನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸಲಾಗಿದೆ. 

ಜೈಲಲ್ಲಿ ದೌಲತ್ತು ಮಾಡಿ ದಿಕ್ಕಾಪಾಲಾದ ಡಿ ಗ್ಯಾಂಗ್​​..! ದರ್ಶನ್ ವಿರುದ್ಧ ದಾಖಲಾಯ್ತು ಮತ್ತೆರಡು FIR..!


 

Latest Videos
Follow Us:
Download App:
  • android
  • ios