ಬೆಂಗಳೂರು, [ನ.30]: ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಇಂಬು ನೀಡುವಂತೆ, ಸ್ಫೋಟಕ ಮಾಹಿತಿವೊಂದು ಬಯಲಾಗಿದೆ. 

ಪ್ರಶ್ನೆ ಪತ್ರಿಕೆ ಲೀಕ್​​​​ ಮಾಡಲು ನನಗೆ ​ನಿವೃತ್ತ ಐಪಿಎಸ್ ಅಧಿಕಾರಿ ಸಾಥ್ ನೀಡಿದ್ದಾರೆ ಎಂದು ಶಿವಕುಮಾರ್​​​​​ ಸಿಸಿಬಿ ಎದುರು ಸತ್ಯ  ಬಾಯ್ಬಿಟ್ಟಿದ್ದಾನೆ. 

ಜೊತೆಗೆ ವೀರಪ್ಪನ್ ಕಾರ್ಯಾಚರಣೆಗೆ ರಚಿಸಿದ್ದ STF ತಂಡದಲ್ಲಿ ಅಧಿಕಾರಿ ಕೆಲಸ ಮಾಡಿದ್ದಾನೆ ಎಂದು ಶಿವಕುಮಾರ್​​​ ಹೇಳಿದ್ದಾನೆ. 

ಐಪಿಎಸ್​​​ ಅಧಿಕಾರಿ KPSC ಪ್ರಶ್ನೆ ಪತ್ರಿಕೆಯ ಸೋರಿಕೆಯಲ್ಲೂ ಬಾಗಿಯಾಗಿದ್ದ ಎಂದು ಬಾಯಿ ಬಿಟ್ಟಿದ್ದು, ಅಕ್ರಮದಲ್ಲಿ ನಿವೃತ್ತ ಐಜಿಪಿ ಹೆಸರು ಕೇಳಿ ಬಂದಿದ್ರಿಂದ ಸಿಸಿಬಿ ಅಧಿಕಾರಿಗಳೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. 

ಕಲ್ಮಠದ ಶಾಲೆಯ ಟೇರೆಸ್​​​​ನಲ್ಲಿ ಪತ್ರಿಕೆ ಬಗ್ಗೆ 119 ವಿದ್ಯಾರ್ಥಿಗಳಿಗೆ ರಾಜಾರೋಷವಾಗಿ ಶಿವಕಮಾರ್​​​ ಪ್ರಶ್ನೆ ಪತ್ರಿಕೆ ಬಗ್ಗೆ ಮಾಹಿತಿ ನೀಡುತ್ತಿದ್ದ. ಇನ್ನೂ ಈ ಪ್ರಕರಣವನ್ನು ಬೇದಿಸಲು ಸ್ವತಃ ಸಿಸಿಬಿ ಎಸಿಪಿ ​​ವೇಣುಗೋಪಾಲ್, ಡಾಕ್ಟರ್ ವೇಷ ಧರಿಸಿ​​ ಅಖಾಡಕ್ಕಿಳಿದ್ರು.