SHOCKING NEWS: ಕೊಡಗು ಸೇರಿ ಕರ್ನಾಟಕದ ಹಲವೆಡೆ ಮಾರಾಟವಾಗುವ ಕೇರಳದ 31 ತಿಂಡಿ ತಿನಿಸುಗಳಲ್ಲಿದೆ ವಿಷ!
ಕೊಡಗು ಕೇರಳ ಗಡಿಯಲ್ಲಿ ಬಾಳೆಹಣ್ಣು ಚಿಪ್ಸ್, ಜಾಮೂನು ಖಾರ ಮಿಕ್ಸ್ಚರ್ ಗಳ ಸಂಗ್ರಹಿಸಿ ಪರಿಶೀಲಿಸಿದ್ದ ಆಹಾರ ಸುರಕ್ಷತಾ ಅಂಕಿತ ಅಧಿಕಾರಿಗಳು
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ನ.9) : ಬಾಯಿಗೆ ರುಚಿ ರುಚಿಯಾಗಿ ಇರುತ್ತೆ, ಸ್ನ್ಯಾಕ್ಸ್ ಟೈಂನಲ್ಲಿ ಇವು ಬೇಕು ಅಂತ ಇಷ್ಟಪಟ್ಟು ಈ ತಿಂಡಿ ತಿನಿಸುಗಳ ತಿಂದರೆ ಮಾರಣಾಂತಿಕ ಕಾಯಿಲೆಗಳು ಬರುತ್ತೆ ಎಚ್ಚರ. ಅಂತಹ ತಿಂಡಿ ತಿನಿಸುಗಳ ತಿನ್ನುವ ಮೊದಲು ಒಮ್ಮೆ ಈ ಸ್ಟೋರಿ ನೋಡಿ. ಪಾಲಕ್ ಮುರುಕ್, ಚಕ್ಕುಲಿ, ಕೋಡುಬಳೆ, ಚಿಪ್ಸ್, ಜಾಮೂನು, ಹಲ್ವಾ, ಕಡ್ಲೆಬರ್ಫಿ, ಡ್ರೈಕಿವಿ ಫ್ರೂಟ್ಸ್, ಖಾರ ಮಿಕ್ಸ್ಚರ್ ಅಂತ ತಿನ್ನುತ್ತೀರಾ ಅವುಗಳು ಎಷ್ಟೊಂದು ಡೇಂಜರ್ ಎನ್ನುವುದನ್ನು ನೀವು ಕೇಳಿದ್ರೆ ಬೆಚ್ಚಿ ಬೀಳ್ತೀರ.
ಹೌದು ಅಂತಹ ಅಪಾಯ ತಿಂಡಿ ತಿನಿಸುಗಳು ಬರುವುದು ಕೇರಳ ರಾಜ್ಯದಿಂದ. ಕೊಡಗು ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಕೇರಳದಲ್ಲಿ ತಯಾರಾಗುತ್ತಿರುವ 90 ಕ್ಕೂ ಹೆಚ್ಚು ತಿಂಡಿ ತಿನಿಸುಗಳು ಕೊಡಗಿನಲ್ಲಿ ಮಾರಾಟವಾಗುತ್ತವೆ. ಅವುಗಳಲ್ಲಿ 31 ಕ್ಕೂ ಹೆಚ್ಚು ತಿಂಡಿ ತಿನಿಸುಗಳು ಅಪಾಯಕಾರಿಯಾಗಿವೆ ಎನ್ನುವುದು ಆಹಾರ ಸುರಕ್ಷಿತ ಅಂಕಿತ ಅಧಿಕಾರಿಗಳು ನಡೆಸಿದ ಪ್ರಯೋಗಾಲಯದ ಪರಿಶೀಲನೆಯಲ್ಲಿ ದೃಢಪಟ್ಟಿದೆ.
ವಕ್ಫ್ ಬೋರ್ಡ್ ಹೆಸರಲ್ಲಿ ಮುಸ್ಲಿಮರ ದಬ್ಬಾಳಿಕೆ: ಒಬ್ಬಂಟಿ ಹಿಂದೂ ಮಹಿಳೆಗೆ ಮನೆ ಖಾಲಿ ಮಾಡುವಂತೆ ಧಮ್ಕಿ!
ಈ ತಿನಿಸುಗಳಿಗೆ ಅಪಾಯಕಾರಿ ಕೆಮಿಕಲ್ಸ್ ಪೂರಿತ ಬಣ್ಣ ಬಳಕೆ ಮಾಡಲಾಗುತ್ತಿದೆ. ಕೇರಳದಿಂದ ಬರುತ್ತಿರುವ ಕರಿದ ಮತ್ತು ಇತರೆ ತಿಂಡಿ ತಿನಿಸುಗಳ ಮೇಲೆ ಅನುಮಾನ ಮೂಡಿದ್ದ ಹಿನ್ನೆಲೆಯಲ್ಲಿ ಕೊಡಗಿನ ಆಹಾರ ಸುರಕ್ಷತಾ ಅಂಕಿತಾ ಅಧಿಕಾರಿಗಳು ಕೊಡಗು ಕೇರಳ ಗಡಿಭಾಗವಾದ ಮಾಕುಟ್ಟದಲ್ಲಿ ರೈಡ್ ಮಾಡಿ ಕೇರಳದಿಂದ ಬರುತ್ತಿದ್ದ ವಾಹನಗಳಿಂದ 90 ರೀತಿಯ ತಿನಿಸುಗಳ ಸ್ಯಾಂಪಲ್ಸ್ ಸಂಗ್ರಹಿಸಿ ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಿದ್ದರು. ಆ 90 ತಿನಿಸುಗಳ ಪೈಕಿ 31 ತಿನಿಸುಗಳಲ್ಲಿ ವಿಷಕಾರಿ ಬಣ್ಣಗಳ ಬಳಸಿರುವುದು ಪತ್ತೆಯಾಗಿದೆ.
ಬಾಳೆಹಣ್ಣು ಚಿಪ್ಸ್, ಜಾಮೂನು, ಚಕ್ಕುಲಿ ಹಲ್ವಾ, ಖಾರ ಮಿಕ್ಸ್ಚರ್ ಹಾಗೂ ಡ್ರೈ ಕಿವಿ ಫ್ರೂಟ್ಸ್ ಗಳಲ್ಲಿ ಟೆಟಾರ್ಜಿನ್, ಮೆಲಾಚಿಟ್ ಗ್ರೀನ್, ಕಾರ್ಮೋಸಿನ್, ಸನ್ಸೆಟ್ ಯೆಲ್ಲೋ ಮುಂತಾದ ವಿಷಕಾರಿ ಬಣ್ಣಗಳನ್ನು ಬಳಕೆ ಮಾಡಲಾಗಿದೆ. ಬಾಳೆಹಣ್ಣು ಚಿಪ್ಸ್ ನಲ್ಲಿ ಸನ್ಸೆಟ್ ಯೆಲ್ಲೋ ಎಂಬ ವಿಷಕಾರಿ ಬಣ್ಣವನ್ನು ಎತ್ತೇಚ್ಛವಾಗಿ ಬಳಕೆ ಮಾಡಲಾಗಿದ್ದು ಇದು ಕ್ಯಾನ್ಸರ್ ತರುತ್ತದೆ ಎನ್ನುವುದು ಬಯಲಾಗಿದೆ. ಅಷ್ಟಕ್ಕೂ ಈ ಬಣ್ಣಗಳನ್ನು ಬಳಸುತ್ತಿರುವುದು ಈ ತಿನಿಸುಗಳು ಬಣ್ಣ ಬಣ್ಣಗಳಿಂದ ಆಕರ್ಷಿತವಾಗಿರಲಿ ಎನ್ನುವುದಕ್ಕೆ. ತಮ್ಮ ಮಾರಾಟಕ್ಕೆ ಆಕರ್ಷಕವಾಗಿರಲಿ ಎಂದು ಈ ಬಣ್ಣಗಳನ್ನು ಬಳಸಿ ತಯಾರು ಮಾಡಲಾಗುತ್ತಿದೆ. ಇಂತಹ ತಿನಿಸುಗಳನ್ನು ಕೇರಳದಿಂದ ಕೊಡಗು ಮತ್ತು ಮೈಸೂರು, ಮಂಗಳೂರು ಹಾಗೂ ಹಾಸನ ಜಿಲ್ಲೆಗಳಿಗೆ ಸಾಗಿಸಿ ಮಾರಾಟ ಮಾಡಲಾಗುತ್ತಿದೆ.
ನಿತ್ಯ ಹತ್ತಾರು ಲೋಡ್ ಆಹಾರ ಪದಾರ್ಥಗಳನ್ನು ಕೊಡಗಿನ ವಿರಾಜಪೇಟೆ, ಪೊನ್ನಂಪೇಟೆ ಗೋಣಿಕೊಪ್ಪ ಮುಂತಾದೆಡೆ ಮಾರಾಟ ಮಾಡಲಾಗುತ್ತಿದೆ. ಜೊತೆಗೆ ಮೈಸೂರು, ಮಂಗಳೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈ ತಿನಿಸುಗಳನ್ನು ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಈ ಜಿಲ್ಲೆಗಳ ರೈಲ್ವೇ ನಿಲ್ದಾಣಗಳಲ್ಲಿ ಕಡಿಮೆ ಬೆಲೆಗೆ ಅತೀ ಹೆಚ್ಚು ಮಾರಾಟ ಮಾಡಲಾಗುತ್ತಿದೆ. ವಿಷಕಾರಿಯುಕ್ತ ಆಹಾರ ಪದಾರ್ಥಗಳ ಕರ್ನಾಟಕಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇರಳದ ಅಧಿಕಾರಿಗಳಿಗೆ ಎರಡು ಮೂರು ಬಾರಿ ಪತ್ರ ಬರೆದರೂ ಅಲ್ಲಿನ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಕೊಡಗು ಜಿಲ್ಲೆಯ ಅಧಿಕಾರಿಗಳೇ ಗಡಿಯಲ್ಲಿ ಸ್ವತಃ ತಾವೇ ರೈಡ್ ಮಾಡಿದ್ದಾರೆ.
ಸಾಲು ಸಾಲು ರಜೆ ಹಿನ್ನೆಲೆ ಕೊಡಗಿಗೆ ಹರಿದು ಬಂದ ಪ್ರವಾಸಿಗರು: ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳಲ್ಲಿ ಜನವೋ ಜನ!
ಈ ತಿಂಡಿ ತಿನಿಸುಗಳ ಮೇಲೆ ಯಾರು ತಯಾರಕರು ಎಲ್ಲಿ ತಯಾರು ಆಗುವುದು, ಯಾವಾಗ ಇದರ ಡೇಟ್ ಮುಗಿಯುತ್ತದೆ ಎನ್ನುವ ಯಾವ ಮಾಹಿತಿಯೂ ಇರುವುದರಿಲ್ಲ. ಇಂತಹ ತಿಂಡಿ ತಿನಿಸುಗಳ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಅನಿಲ್ ಧವನ್ ಎಚ್ಚರಿಕೆ ನೀಡಿದ್ದಾರೆ.