ಕರ್ನಾಟಕದಲ್ಲಿಂದು ಮೋದಿ ಹವಾ: ಒಂದೂವರೆ ವರ್ಷದ ಬಳಿಕ ರಾಜ್ಯಕ್ಕೆ ಆಗಮನ
* 20 ಗಂಟೆಯಲ್ಲಿ ಬೆಂಗಳೂರು, ಮೈಸೂರಲ್ಲಿ 10 ಕಾರ್ಯಕ್ರಮದಲ್ಲಿ ಭಾಗಿ
* ನಾಳೆ ಮೈಸೂರಿನಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿ
* 20 ಗಂಟೆ ರಾಜ್ಯದಲ್ಲಿ ಪ್ರಧಾನಿ ಮೋದಿ ಇರುವ ಸಮಯ
ಬೆಂಗಳೂರು(ಜೂ.20): ಬರೋಬ್ಬರಿ ಒಂದೂವರೆ ವರ್ಷದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಸೋಮವಾರ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರು ಒಟ್ಟು 20 ಗಂಟೆಗಳ ಅವಧಿಯಲ್ಲಿ ಬೆಂಗಳೂರು ಮತ್ತು ಮೈಸೂರಿನ 10 ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಒಟ್ಟು 27 ಸಾವಿರ ಕೋಟಿ ರು. ವೆಚ್ಚದ ವಿವಿಧ ಯೋಜನೆಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ನೆರವೇರಿಸಲಿದ್ದಾರೆ.
ಮಂಗಳವಾರ ಬೆಳಗ್ಗೆ ಮೈಸೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಎಂಟನೇ ‘ಅಂತಾರಾಷ್ಟ್ರೀಯ ಯೋಗ ದಿನಾಚರಣೆ’ ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಪ್ರಧಾನಮಂತ್ರಿ ಅವರೊಂದಿಗೆ 75 ಮಂದಿ ಕೇಂದ್ರ ಸಚಿವರು ದೇಶದ ವಿವಿಧೆಡೆ 75 ಪ್ರಮುಖ ಸ್ಥಳಗಳಲ್ಲಿ ಯೋಗ ಪ್ರದರ್ಶನ ಮಾಡಲಿದ್ದಾರೆ.
ಮೋದಿ ತಾಯಿಗೆ 100ನೇ ಹುಟ್ಟುಹಬ್ಬ, ತಾಯಿಯ ಪಾದ ಮುಟ್ಟಿ ಆಶೀರ್ವಾದ ಪಡೆದ ಪಿಎಂ!
ಆಗಮನ:
ಸೋಮವಾರ ಬೆಳಗ್ಗೆ 11.55 ಗಂಟೆಗೆ ಯಲಹಂಕ ಐಎಎಫ್ ಸ್ಟೇಷನ್‌ಗೆæ ವಿಶೇಷ ವಿಮಾನದ ಮೂಲಕ ಆಗಮಿಸಲಿರುವ ಅವರು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಹೆಬ್ಬಾಳದ ಮೇಖ್ರಿ ವೃತ್ತದ ಬಳಿಯ ಎಚ್‌ಕ್ಯೂಟಿಸಿ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಅಲ್ಲಿಂದ ರಸ್ತೆ ಮೂಲಕ ಐಐಎಸ್ಸಿಗೆ ತೆರಳಿ ಬ್ರೈನ್ ರೀಸಚ್‌ರ್ ಸೆಂಟರ್ ಉದ್ಘಾಟನೆ ಹಾಗೂ ಬಾಗ್ಚಿ ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಬಳಿಕ ಕೊಮ್ಮಘಟ್ಟಹೆಲಿಪ್ಯಾಡ್‌ಗೆ ಹೆಲಿಕಾಪ್ಟರ್ ಮೂಲಕ ತೆರಳಲಿರುವ ಅವರು ಅಲ್ಲಿಂದ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ರಸ್ತೆ ಮೂಲಕ ತೆರಳಿ ಡಾ.ಬಿ.ಅರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್) ವಿಶ್ವವಿದ್ಯಾಲಯ ಉದ್ಘಾಟನೆ ಮಾಡಲಿದ್ದಾರೆ. ಇದೇ ವೇಳೆ ಅಂಬೇಡ್ಕರ್ ಪುತ್ಥಳಿ ಅನಾವರಣ ಮಾಡಲಿದ್ದಾರೆ.
ಎ.ಸಿ. ರೈಲ್ವೆ ನಿಲ್ದಾಣ ಲೋಕಾರ್ಪಣೆ:
ಬಳಿಕ ಪ್ರಧಾನಿ ಮೋದಿ ಅವರು ಕೊಮ್ಮಘಟ್ಟದಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ವಿವಿಧ ರೈಲು ಮತ್ತು ರಸ್ತೆ ಮೂಲಭೂತ ಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ.
ಬೈಯಪ್ಪನಹಳ್ಳಿಯ ದೇಶದ ಮೊದಲ ಹವಾನಿಯಂತ್ರಿತ ರೈಲ್ವೆನಿಲ್ದಾಣ ಹಾಗೂ ಕೊಂಕಣ ರೈಲ್ವೆ ಮಾರ್ಗದ ಶೇ.100 ರಷ್ಟುವಿದ್ಯುದೀಕರಣ ಸೇರಿದಂತೆ ವಿವಿಧ ರೈಲು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. 500 ಕೋಟಿ ರು. ವೆಚ್ಚದಲ್ಲಿ ಬೆಂಗಳೂರು ಕಂಟೋನ್‌ಮೆಂಟ್ ಹಾಗೂ 370 ಕೋಟಿ ರು. ವೆಚ್ಚದಲ್ಲಿ ಯಶವಂತಪುರ ಜಂಕ್ಷನ್ ರೈಲ್ವೆ ನಿಲ್ದಾಣ ಅಭಿವೃದ್ಧಿ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದೇ ವೇಳೆ ಮಲ್ಟಿಮಾಡೆಲ್ ಲಾಜಿಸ್ಟಿಕ್ ಪಾರ್ಕ್ಗೆ ಶಂಕುಸ್ಥಾಪನೆ, 4,600 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ 150 ತಂತ್ರಜ್ಞಾನ ಹಬ್ ಲೋಕಾರ್ಪಣೆ ಮಾಡಲಿದ್ದಾರೆ.
ಕೋವಿಡ್ ಪರೀಕ್ಷೆಯ ಗೊಂದಲ ತಂದಿಟ್ಟ ಪ್ರಧಾನಿ ಮೋದಿ ರಾಜ್ಯ ಪ್ರವಾಸ
ಅರಮನೆ ನಗರಿಗೆ ಭೇಟಿ:
ಬಳಿಕ ಸಂಜೆ ಬೆಂಗಳೂರಿನಿಂದ ಮೈಸೂರಿಗೆ ತೆರಳಲಿದ್ದು, ಕೇಂದ್ರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಸುತ್ತೂರು ಮಠಕ್ಕೆ ಭೇಟಿ ನೀಡಿ ವೇದ ಪಾಠಶಾಲ ಕಟ್ಟಡ ಉದ್ಘಾಟನೆ ಮಾಡಿ ಯೋಗ ಮತ್ತು ಭಕ್ತಿ ಕುರಿತು ಸಂಭಾಷಣೆ ನಡೆಸಲಿದ್ದಾರೆ.
ನಂತರ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಮೈಸೂರಿನಲ್ಲಿ 480 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮೈಸೂರಿನ ನಾಗನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಕೋಚಿಂಗ್ ಟರ್ಮಿನಲ್ ನಿರ್ಮಾಣಕ್ಕೆ ಶಂಕುಸ್ಥಾಪನೆ, ಮೈಸೂರಿನ ಎಐಐಎಸ್‌ಎಚ್‌ನಲ್ಲಿ ‘ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಪರ್ಸನ್ಸ್ ವಿತ್ ಕಮ್ಯುನಿಕೇಷನ್ ಡಿಸಾರ್ಡರ್ಸ್’ ಕೇಂದ್ರದ ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ರಾರಯಡಿಸನ್ ಬ್ಲ್ಯೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮರು ದಿನ ಮಂಗಳವಾರ ಬೆಳಗ್ಗೆ 7 ಗಂಟೆಯಿಂದ 45 ನಿಮಿಷ ಯೋಗ ಪ್ರದರ್ಶನ ನಡೆಸಿ 9 ಗಂಟೆಗೆ ಮೈಸೂರಿನಿಂದ ದೆಹಲಿಗೆ ವಾಪಸು ತೆರಳಲಿದ್ದಾರೆ.
ಮೋದಿ ಆಗಮನಕ್ಕೆ ಭರದ ಸಿದ್ಧತೆ:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಗಮನಕ್ಕೆ ಬೆಂಗಳೂರು ಹಾಗೂ ಮೈಸೂರಿನಲ್ಲಿ ಭರದ ಸಿದ್ಧತೆ ನಡೆಸಲಾಗಿದೆ. ಬೆಂಗಳೂರಿನಲ್ಲಿ ಪ್ರಧಾನಮಂತ್ರಿಗಳು ಹಾದುಹೋಗಲಿರುವ ಮಾರ್ಗದಲ್ಲಿ ಅವರನ್ನು ಕರೆದೊಯ್ಯುವ ವ್ಯವಸ್ಥೆ ಹಾಗೂ ಭದ್ರತೆ ಒದಗಿಸುವ ಕುರಿತು ಭಾನುವಾರ ಅಣಕು ಪ್ರದರ್ಶನ ಮಾಡಲಾಯಿತು. ಪ್ರಧಾನಿಗಳು ಸಂಚರಿಸುವ ರಸ್ತೆಗಳನ್ನು ಸಂಪೂರ್ಣ ಡಾಂಬರೀಕರಣ ಮಾಡಿ ಸಿಂಗಾರ ಮಾಡಲಾಗಿದೆ. ಜತೆಗೆ ಮೋದಿ ಸಂಚರಿಸುವ ಮಾರ್ಗದಲ್ಲಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದು, ರಸ್ತೆಯುದ್ದಕ್ಕೂ ಸಿಸಿಟಿವಿ ಅಳವಡಿಕೆ ಸೇರಿದಂತೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಬಿಜೆಪಿ ಮುಖಂಡರ ಫ್ಲೆಕ್ಸ್‌ಗಳ ಅಬ್ಬರ
ಪ್ರಧಾನಿ ಮೋದಿ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯಲಹಂಕದಿಂದ ಬೆಂಗಳೂರು ಅರಮನೆ ಮೈದಾನ, ಸಿ.ವಿ. ರಾಮನ್ ರಸ್ತೆ, ಕೊಮ್ಮಘಟ್ಟ, ಬೆಂಗಳೂರು ವಿಶ್ವವಿದ್ಯಾಲಯದ ರಸ್ತೆ ಸೇರಿದಂತೆ ಹಲವೆಡೆ ಪ್ರಧಾನಿಗೆ ಸ್ವಾಗತ ಕೋರುವ ಫ್ಲೆಕ್ಸ್‌ಗಳ ರಾರಾಜಿಸುತ್ತಿವೆ. ಬಿಜೆಪಿ ಪಕ್ಷ, ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ, ವಿವಿಧ ಮುಖಂಡರ ಹೆಸರಿನಲ್ಲಿ ನೂರಾರು ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ.
ಪ್ರಧಾನಿ ಮೋದಿ ಭೇಟಿ: ಬೆಂಗಳೂರಿನಲ್ಲಿ ಪೂರ್ವ ಸಿದ್ಧತೆ ಪರಿಶೀಲಿಸಿದ ಸಚಿವರು
ಮೋದಿ ಕಾರ್ಯಕ್ರಮ
ಜೂ.20
12.30 ಐಐಎಸ್ಸಿಯಲ್ಲಿನ ಕಾರ್ಯಕ್ರಮದಲ್ಲಿ ಭಾಗಿ
1.45 ಬೇಸ್ ವಿ.ವಿ. ಉದ್ಘಾಟನೆ ಹಾಗೂ ತಂತ್ರಜ್ಞಾನ ಹಬ್‌ಗಳ ಲೋಕಾರ್ಪಣೆ
ಮ. 2.45 ಕೊಮ್ಮಘಟ್ಟದಲ್ಲಿನ ಸಾರ್ವಜನಿಕ ಸಮಾವೇಶ, ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ, ಲೋಕಾರ್ಪಣೆ.
ಸ.5.20 ಮೈಸೂರಿಗೆ ತಲುಪಲಿರುವ ಮೋದಿ
ಸ.5.30 ಮಹಾರಾಜ ಮೈದಾನದಲ್ಲಿ ವಿವಿಧ ಕಾರ್ಯಕ್ರಮಗಳ ಲೋಕಾರ್ಪಣೆ, ಶಂಕುಸ್ಥಾಪನೆ
ಸ.6.30 ಕೇಂದ್ರದ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ
ಸ.7 ಸುತ್ತೂರು ಮಠಕ್ಕೆ ಭೇಟಿ ವೇದ ಪಾಠ ಶಾಲಾ ಉದ್ಘಾಟನೆ
ಸ.7.50 ಚಾಮುಂಡಿಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ
ಜೂ.21 ಮಂಗಳವಾರ
ಬೆ.6.30 ಮೈಸೂರು ಅರಮನೆ ಆವರಣದಲ್ಲಿ ಯೋಗ ದಿನಾಚರಣೆ ಅಂಗವಾಗಿ ಸಾಮೂಹಿಕ ಯೋಗ ಪ್ರದರ್ಶನ
ಬೆ.8.10 ವಸ್ತು ಪ್ರದರ್ಶನ ಸ್ಥಳಕ್ಕೆ ಭೇಟಿ
ಬೆ. 9.45 ಮೈಸೂರು ವಿಮಾನ ನಿಲ್ದಾಣದಿಂದ ನವದೆಹಲಿಗೆ ವಾಪಸ್
-ಟೈಂ ಲೈನ್:
ಜೂ.20 ರಂದು ಸೋಮವಾರ
ಬೆ.11.55 ಯಲಹಂಕ ಏರ್‌ಫೋರ್ಸ್ ಸ್ಟೇಷನ್‌ಗೆ ಆಗಮನ
ಮ.12.20 ಯಲಹಂಕದಿಂದ ಕಾಪ್ಟರ್ ಮೂಲಕ ಹೆಬ್ಬಾಳದ ಎಚ್‌ಕ್ಯೂಟಿಸಿ ಹೆಲಿಪ್ಯಾಡ್‌ಗೆ ಆಗಮನ.
ಮ.12.30 ಎಚ್‌ಕ್ಯೂಟಿಸಿ ಹೆಲಿಪ್ಯಾಡ್‌ನಿಂದ ರಸ್ತೆ ಮೂಲಕ ಐಐಎಸ್ಸಿಗೆ ಆಗಮನ
12.30-12.50 ಐಐಎಸ್ಸಿಯಲ್ಲಿನ ಕಾರ್ಯಕ್ರಮದಲ್ಲಿ ಭಾಗಿ
ಮ.1.45 ಕೊಮ್ಮಘಟ್ಟಹೆಲಿಪ್ಯಾಡ್‌ನಿಂದ ರಸ್ತೆ ಮೂಲಕ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಆಗಮನ
1.45- 2.25 ಬೇಸ್ ವಿ.ವಿ. ಉದ್ಘಾಟನೆ ಹಾಗೂ ತಂತ್ರಜ್ಞಾನ ಹಬ್‌ಗಳ ಲೋಕಾರ್ಪಣೆ
ಮ. 2.45 ಕೊಮ್ಮಘಟ್ಟದಲ್ಲಿನ ಸಾರ್ವಜನಿಕ ಸಮಾವೇಶದಲ್ಲಿ ಭಾಗಿ, ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ.
ಸ.5.20 ಮೈಸೂರಿಗೆ ತಲುಪಲಿರುವ ನರೇಂದ್ರ ಮೋದಿ
ಸ.5.30 ಮೈಸೂರು ಮಹಾರಾಜ ಮೈದಾನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ, ಸಾರ್ವಜನಿಕರ ಉದ್ದೇಶಿಸಿ ಭಾಷಣ.
ಸ.6.30 ಕೇಂದ್ರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ
ಸ.7 ಸುತ್ತೂರು ಮಠಕ್ಕೆ ಭೇಟಿ ವೇದ ಪಾಠ ಶಾಲಾ ಉದ್ಘಾಟನೆ ಹಾಗೂ ಯೋಗ, ಭಕ್ತಿ ಕುರಿತು ಸಂಭಾಷಣೆ.
ಸ.7.50 ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ
ಜೂ.21 ಮಂಗಳವಾರ
ಬೆ.6.30 ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗಪಟುಗಳೊಂದಿಗೆ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಭಾಗಿ.
ಬೆ.8.10 ವಸ್ತು ಪ್ರದರ್ಶನ ಸ್ಥಳಕ್ಕೆ ಭೇಟಿ
ಬೆ.9.20 ಮೈಸೂರು ಅರಮನೆ ಆವರಣದಿಂದ ನಿರ್ಗಮನ
ಬೆ. 9.45 ಮೈಸೂರು ವಿಮಾನ ನಿಲ್ದಾಣದಿಂದ ನವದೆಹಲಿಗೆ ವಾಪಸ್ಸು