Vande Bharat Express: ದಕ್ಷಿಣ ಭಾರತದ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಮೋದಿ ಚಾಲನೆ

ದಕ್ಷಿಣ ಭಾರತದ ಮೊಟ್ಟಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ, ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಚಾಲನೆ ನೀಡಿದರು. ಅದರೊಂದಿಗೆ ಕಾಶಿ ದರ್ಶನ ಯಾತ್ರೆಯ ಭಾರತ್‌ ಗೌರವ್‌ ಟ್ರೇನ್‌ಅನ್ನೂ ಮೋದಿ ಅನಾವರಣ ಮಾಡಿದರು.
 

PM Narendra Modi Launched vande bharat express chennai to mysore via bengaluru and bharat gaurav kashi darshan san

ಬೆಂಗಳೂರು (ನ.11): ದಕ್ಷಿಣ ಭಾರತದ ಮೊಟ್ಟಮೊದಲ ವಂದೆ ಭಾರತ್‌ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ, ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದ ಫ್ಲಾಟ್‌ ಫಾರ್ಮ್‌ ನಂ.7ಅಲ್ಲಿ ಹಸಿರು ನಿಶಾನೆ ನೀಡಿದರು. ಮೈಸೂರು-ಚೆನ್ನೈ-ಬೆಂಗಳೂರು ಮಾರ್ಗವಾಗಿ ಹಾಗೂ ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗವಾಗಿ ಈ ರೈಲು ಸಾಗಲಿದೆ. ಮೋದಿ ಆಗಮನದ ಹಿನ್ನಲೆಯಲ್ಲಿ ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಬಂದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣನ್ ಕೂಡ ಆಗಮಿಸಿದ್ದರು. ವಂದೇ ಭಾರತ್ ಹಾಗೂ ಭಾರತ್ ಗೌರವ್ ರೈಲಿಗೆ ಚಾಲನೆ ನೀಡುವ ಹಿನ್ನೆಲಯಲ್ಲಿ ಅವರು ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ರೈಲ್ವೇ ನಿಲ್ದಾಣಕ್ಕೆ ಬರುವ ಮುನ್ನ, ಕಾರಿನಿಂದ ಕೆಳಗಿಳಿದ ಪ್ರಧಾನಿ ನರೇಂದ್ರ ಮೋದಿ ಜನರತ್ತ ಕೈಬೀಸಿದರು. ಈ ವೇಳೆ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲುಮುಟ್ಟಿತ್ತು.ರೈಲು ಅನಾವರಣ ಮಾಡುವ ಮುನ್ನ, ರೈಲಿನ ಒಳಗೆ ಹೊಕ್ಕು ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿದರು. ಮೋದಿ ಚಾಲನೆ ನೀಡಿದ ಬಳಿಕ ರೈಲ ಚೆನ್ನೈ ಕಡೆ ಪ್ರಯಾಣ ಬೆಳೆಸಿತು. ಮೊದಲಿಗೆ ಟ್ರೇನ್‌-18 ಎಂದು ನಾಮಕರಣ ಮಾಡಲಾಗಿತ್ತು. ಬಳಿಕ ಇದಕ್ಕೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಎಂದು ಮರುನಾಮಕರಣ ಮಾಡಲಾಗಿತ್ತು.

ಆ ಬಳಿಕ ಕಾಶಿ ಯಾತ್ರೆ ದರ್ಶನಕ್ಕಾಗಿಯೇ ಮುಜರಾಯಿ ಇಲಾಖೆಯ ಯೋಜನೆಯಡಿಯಲ್ಲಿ ಆರಂಭ ಮಾಡಲಾಗರುವ ಭಾರತ್‌ ಗೌರವ್‌ ರೈಲಿಗೆ ಮೋದಿ ಚಾಲನೆ ನೀಡಿದರು. ರೈಲಿನಲ್ಲಿ ಹೊರಟ ಯಾತ್ರಾರ್ಥಿಗಳಿಗೆ ಮೋದಿ ಕೈಬೀಸಿ ಶುಭ ಕೋರಿದರು. ಮುಜರಾಯಿ ಇಲಾಖೆಯಿಂದ ಕಾಶಿ ಯಾತ್ರೆಗೆ ಈ ವಿಶೇಷ ರೈಲು ಓಡಲಿದೆ.  ಈ ವೇಳೆ ಮೋದಿ ಅವರಿಗೆ ಸಚಿವೆ ಶಶಿಕಲಾ ಜೊಲ್ಲೆ ಕಾಮಧೇನು ಸ್ಮರಣಿಕೆ ನೀಡಿದರು.

Modi Bengaluru Visit Live Updates: ವಂದೇ ಭಾರತ್, ಕಾಶಿ ದರ್ಶನ ರೈಲಿಗೆ ಚಾಲನೆ ನೀಡಿದ ಪ್ರಧಾನಿ...

ರೈಲ್ವೆ ಇಲಾಖೆ ಹಾಗೂ ಮುಜರಾಯಿ ಇಲಾಖೆಯ ನೆರವಿನಿಂದ ಭಾರತ್‌ ಗೌರವ್‌ ಕಾಶಿ ಯಾತ್ರೆ ವಿಶೇಷ ರೈಲು ಓಡಲಿದೆ. ಶುಕ್ರವಾರ ನವೆಂಬರ್‌ 11 ರಂದು ಬೆಂಗಳೂರಿನಿಂದ ತೆರಳಿರುವ ಈ ರೈಲು 18ರಂದು ಕಾಶಿಗೆ ತಲುಪಲಿದೆ. ರಾಜ್ಯದ ವಿವಿಧ ಭಾಗಗಳಿಂದ 547 ಯಾತ್ರಾರ್ಥಿಗಳು ಮೊದಲು ರೈಲಿನಲ್ಲಿ ತೆರಳುತ್ತಿದ್ದಾರೆ.  ಮುಂದಿನ ಎಂಟು ದಿನಗಳ ಕಾಲ ಕಾಶಿ, ಅಯೋಧ್ಯೆ ಹಾಗೂ ಪ್ರಯಾಗ್‌ರಾಜ್‌ನ ಹಿಂದು ಧಾರ್ಮಿಕ ಸ್ಥಳಗಳ ಪುಣ್ಯದರ್ಶನ ಪಡೆಯಲಿದ್ದಾರೆ. 20 ಸಾವಿರ ರು. ವೆಚ್ಚದ ಈ ಯಾತ್ರೆಗೆ ರಾಜ್ಯ ಸರ್ಕಾರ ಯಾತ್ರಾರ್ಥಿಗಳಿಗೆ ಐದು ಸಾವಿರ ರು. ಸಹಾಯಧನ ನೀಡುತ್ತಿದ್ದು, 15 ಸಾವಿರ ರು.ಗಳನ್ನು ಯಾತ್ರಾರ್ಥಿಗಳು ಪಾವತಿಸಿದ್ದಾರೆ. ಪ್ರಯಾಣಿಕರಿಗೆ ಸ್ಲೀಪರ್‌ 3ಎಸಿ ಆಸನ ನೀಡಲಾಗುತ್ತದೆ. ಊಟ, ವಸತಿ, ಸ್ಥಳಗಳ ಭೇಟಿ ಎಲ್ಲವನ್ನು ಐಆರ್‌ಸಿಟಿಸಿ ಸಿಬ್ಬಂದಿಯೇ ನಿರ್ವಹಿಸಲಿದ್ದಾರೆ.

ಇಂದು ಕೆಂಪೇಗೌಡರ ಮೂರ್ತಿ ಅನಾವರಣ: ನಾಡಪ್ರಭು ಬೆಂಗಳೂರು ಕಟ್ಟಿದ್ದು ಹೇಗೆ?

ರೈಲು ನಿಲ್ದಾಣದಲ್ಲಿ ಎರಡು ರೈಲುಗಳಿಗೆ ಚಾಲನೆ ನೀಡಿದ ಬಳಿಕ ವಾಪಾಸ್ ಮೇಖ್ರಿ ಸರ್ಕಲ್‌ ಕಡೆಗೆ ಹೊರಡುವ ಹಾದಿಯಲ್ಲಿ ನರೇಂದ್ರ ಮೋದಿ ಮೆಜೆಸ್ಟಿಕ್‌ ಬಳಿ ಕಾರಿನಿಂದ ಇಳಿದರು. ಈ ವೇಳೆ ಸುಮಾರು 5 ನಿಮಿಷಗಳ ಕಾಲ ಅಲ್ಲಿಯೇ ನರೆದಿದ್ದ ಜನಸ್ತೋಮ್ಮೆ ಕೈಬೀಸಿದರು. ರಸ್ತೆಯ ಎರಡೂ ಕಡೆ ಸೇರಿದ್ದ ಜನರಿಗೆ ಅವರ ಬಳಿಯೇ ತೆರಳಿ ಕೈಬೀಸಿದರು.  ಈ ವೇಳೆ ಮೋದಿ ಭದ್ರತಾ ತಂಡ, ಎಸ್‌ಪಿಜಿ ಕೊಂಚ ಗಲಿಬಿಲಿಗೂ ಒಳಗಾದರು. ಕಾರಿನಲ್ಲಿ ಸಾಗುವ ಮೋದಿಯನ್ನು ಒಮ್ಮೆ ಕಣ್ತುಂಬಿಕೊಳ್ಳೋಣ ಎಂದು ನಿಂತಿದ್ದ ಜನರಿಗೆ ಸ್ವತಃ ಅಚ್ಚರಿ ಎನ್ನುವಂತೆ ಮೋದಿ ತಮ್ಮ ಕಾರನ್ನು ನಿಲ್ಲಿಸಿದ್ದು ಮಾತ್ರವಲ್ಲದೆ, ಸ್ವತಃ ಅವರ ಬಳಿಗೆ ತೆರಳಿ ಕೈಬೀಸಿದರು. ಜನರು ಹಾಗೂ ಅವರ ಹರ್ಷೋದ್ಘಾರದಿಂದ ಮತ್ತಷ್ಟು ಉತ್ಸಾಹಿತರಾದಂತೆ ಕಂಡುಬಂದ ಪ್ರಧಾನಿ ನರೇಂದ್ರ ಮೋದಿ, ಕಾರಿನ ಮೇಲೆಯೇ ನಿಂತುಕೊಂಡು ಕೆಲ ದೂರದವರೆಗೆ ಜನರಿಗೆ ಕೈಬೀಸುತ್ತಾ ನಡೆದರು. 

Latest Videos
Follow Us:
Download App:
  • android
  • ios