Asianet Suvarna News Asianet Suvarna News

ದಿಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಕರ್ನಾಟಕದ ಹಲವು ಮಂದಿ ರೈತರಿಗೆ ಪ್ರಧಾನಿ ಮೋದಿ ವಿಶೇಷ ಆಹ್ವಾನ

ಆ.15ರಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ 76ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯದ ಹಲವು ಮಂದಿ ರೈತರನ್ನು, ಬಡವರನ್ನು ಮೋದಿ ಆಹ್ವಾನಿಸಿದ್ದಾರೆ.

PM narendra modi invited many karnataka people as a Special guests for Independence day 2023 gow
Author
First Published Aug 12, 2023, 9:59 AM IST

ಬೆಂಗಳೂರು (ಆ.12): ಆ.15ರಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ 76ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು 49 ಬಗೆಯ ತೋಟಗಾರಿಗೆ ಮತ್ತಿತರ ಬೆಳೆ ಬೆಳೆಯುತ್ತಿರುವ ಮಂಡ್ಯ ಜಿಲ್ಲೆಯ ಎ.ನಾಗತಿಹಳ್ಳಿಯ ಪ್ರಗತಿಪರ ರೈತ ಎನ್‌.ಎಚ್‌.ವಿರೂಪಾಕ್ಷಮೂರ್ತಿ ಹಾಗೂ ಕಲಬುರಗಿ ಜಿಲ್ಲೆಯ ಕೃಷಿ ಸಾಧಕ ಆನಂದ್‌ ಬೆಲಗುಂಪಿ ಸೇರಿದಂತೆ ಚಾಮರಾಜನಗರ ಜಿಲ್ಲೆಯ ಶ್ರೀಮತಿ ನಳಿನ ಕುಮಾರಿ,  ಚಾಮರಾಜನಗರ ಜಿಲ್ಲೆಯ ಶ್ರೀ ಜಗದೀಶ್, ಹಾವೇರಿ ಜಿಲ್ಲೆಯ ಶ್ರೀ ನೀಲಪ್ಪ , ಹಾವೇರಿಯ ಶ್ರೀಮತಿ ಪುಷ್ಪ ಹೊನ್ನತ್ತಿ  ಅತಿಥಿಗಳಾಗಿ ತೆರಳುತ್ತಿದ್ದಾರೆ.

ಪ್ರಧಾನಿ ಮೋದಿ ಅವರು ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸುವ ಸಂದರ್ಭಕ್ಕೆ ಸಾಕ್ಷಿಯಾಗಲು ಪ್ರಧಾನಿ ಕಚೇರಿಯಿಂದ ದೇಶದ ವಿವಿಧೆಡೆಯಿಂದ ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯ ಫಲಾನುಭವಿ ರೈತರನ್ನು ಆಯ್ಕೆ ಮಾಡಿದ್ದು, ಇವರಲ್ಲಿ ಕರ್ನಾಟಕದಿಂದ ರೈತ ವಿರೂಪಾಕ್ಷಮೂರ್ತಿ ಜತೆಗೆ ಕಲಬುರುಗಿಯ ನಂದೂರ್‌(ಕೆ) ನಿವಾಸಿ ಆನಂದ್‌ ಎ.ಬೆಲಗುಂಪಿ ಅವರಿಗೂ ಅವಕಾಶ ಸಿಕ್ಕಿದೆ. ವಿರೂಪಾಕ್ಷಮೂರ್ತಿ ಅವರು ಪ್ರಗತಿಪರ ರೈತರಾಗಿದ್ದರೆ, ಆನಂದ್‌ ಬೆಲಗುಂಪಿ ಅವರು 3.20 ಎಕ್ರೆ ಹೊಲದಲ್ಲಿ ತೊಗರಿ ಬೆಳೆಯುತ್ತಿದ್ದಾರೆ.

ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ: ಅಂಚೆ ಇಲಾಖೆಯಿಂದ ಹರ್‌ ಘರ್‌ ತಿರಂಗಾ ಅಭಿಯಾನ

4 ಎಕ್ರೆ ಜಾಗದಲ್ಲಿ ಸಾಧನೆ: ಸಾರಿಗೆ ಇಲಾಖೆ ನೌಕರರಾಗಿದ್ದ ಎನ್‌.ಎಚ್‌.ವಿರೂಪಾಕ್ಷಮೂರ್ತಿ ಅವರು ನಾಗಮಂಗಲ ತಾಲೂಕಿನ ಎ.ನಾಗತಿಹಳ್ಳಿಯಲ್ಲಿ 4 ಎಕರೆ 10 ಗುಂಟೆ ಜಮೀನು ಹೊಂದಿದ್ದಾರೆ. ಅಲ್ಲಿ ತಮ್ಮ ಸೇವಾ ನಿವೃತ್ತಿ ನಂತರ ಪೂರ್ಣ ಪ್ರಮಾಣದಲ್ಲಿ ಸಾವಯವ, ಸಮಗ್ರ ಕೃಷಿ ಮತ್ತು ಉನ್ನತ ಸಾಂದ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ರಾಗಿ, ಜೋಳ ಸೇರಿ 49ಕ್ಕೂ ಹೆಚ್ಚು ಬಗೆಯ ತೋಟಗಾರಿಕೆ ಮತ್ತು ಅರಣ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಜತೆಗೆ, ಬೆಂಗಳೂರಿನ ಭಾರತೀಯ ತೋಟಗಾರಿಕಾ ವಿಜ್ಞಾನ ಸಂಸ್ಥೆಯ ಮಡಿಕೇರಿಯ ಚಟ್ಟಹಳ್ಳಿ ಉಪಶಾಖೆಯಿಂದ ಮಾಡಗಾಲ(ತರಕಾರಿ) ಮತ್ತು ಡ್ರಾಗನ್‌ ಫä್ರಟ್‌ ಗಿಡಗಳನ್ನು ತಂದು ಬೆಳೆಸುತ್ತಿದ್ದಾರೆ. ಪ್ರಾಯೋಗಿಕವಾಗಿ ಅಂತರ ಬೆಳೆಯಾಗಿ ಒಂದು ಸಾವಿರ ಏಲಕ್ಕಿ ಗಿಡಗಳನ್ನೂ ಬೆಳೆದು ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ಸದ್ಯ ಇವರ ಜಮೀನಿನಲ್ಲಿ 600 ಶ್ರೀಗಂಧ, 311 ತೆಂಗು, 200 ಬಾಳೆ, 100 ಮಾವು, 50 ಸಪೋಟ, 25 ಹಲಸು, 100 ಕರಿಬೇವು, 6 ಹತ್ತಿಹಣ್ಣಿನ ಮರ ಸೇರಿ 50ಕ್ಕೂ ಹೆಚ್ಚು ಹೊಂಗೆ, ತೇಗದ ಮರಗಳಿವೆ. 800 ಕಾಫಿ, 500 ತæೖವಾನ್‌ ಸೀಬೆ, 400 ಅನಾನಸ್‌, 150 ಮಾಡಗಾಲ, 140 ಬೆಣ್ಣೆಹಣ್ಣಿನ ಗಿಡ, 130 ನಿಂಬೆ, 100 ಕನಕಾಂಬರ, 50 ಕಾಕಡ, 50 ಮೆಣಸು, 40 ಸೇಬು, 20 ಮೂಸಂಬಿ, 20 ಕಿತ್ತಳೆ, 8 ನೇರಳೆ, 7 ಅಗಸೆ, 6 ಹುಣಸೆ ಹಾಗೂ ರಾಮಫಲ, ಸೀತಾಫಲ, ಲಕ್ಷ್ಮಣ ಫಲ, ಡ್ರ್ಯಾಗನ್‌ ಫ್ರೂಟ್, ಲವಂಗ, ಜಾಯಿಕಾಯಿ, ಸೋಂಪುಕಾಳಿನ ಗಿಡ, ಎಗ್‌ಫä್ರಟ್‌, ಬೋರೆಹಣ್ಣು, ದೀವುಹಲಸು, ಪಾರಿಜಾತ, ಬಾದಾಮಿ, ಅಂಜೂರ, ವಾಟರ್‌ಆ್ಯಪಲ…, ಕಿವಿಹಣ್ಣು, ನೋನಿಹಣ್ಣಿನ, ನಾಗಲಿಂಗಪುಷ್ಟ, ಸಂಪಿಗೆ ಸೇರಿ ಇನ್ನಿತರೆ ಮರಗಿಡಗಳ ವೈವಿಧ್ಯತೆ ಇದೆ. ಮಂಡ್ಯದಲ್ಲೂ ಕರ್ಜೂರ ಬೆಳೆಯ ಪ್ರಯೋಗಕ್ಕಿಳಿದಿರುವುದು ಇವರ ಮತ್ತೊಂದು ಹೆಚ್ಚುಗಾರಿಕೆ.

ಮಾರ್ಕೆಟಿಂಗ್ ಕಂಪನಿಯಲ್ಲಿ ಚಾಣಾಕ್ಷ, ದೇಶಾದ್ಯಂತ ಲಕ್ಷಾಂತರ ಜನರ ಉದ್ಯೋಗದಾತ ಡಾ.ಅಫ್ಸರ್ ಹಿಂದೂಸ್ಥಾನಿ!

ಸಂಪೂರ್ಣ ಸಾವಯವ ಪದ್ಧತಿ: ಇಷ್ಟೆಲ್ಲ ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಬೆಳೆಗಳನ್ನು ಬೆಳೆಯುತ್ತಿದ್ದರೂ ವಿರೂಪಾಕ್ಷಮೂರ್ತಿ ಸಾವಯವ ಕೃಷಿಗೇ ಅಂಟಿಕೊಂಡಿದ್ದಾರೆ. ಜೀವಾಮೃತ, ಸಾವಯವ ಗೊಬ್ಬರಗಳನ್ನು ಬಳಸಿ ಎರಡು ಕೊಳವೆಬಾವಿಯಿಂದ ಬರುತ್ತಿರುವ ಕೇವಲ 2 ಇಂಚು ನೀರಿನಲ್ಲೇ 3,500ಕ್ಕೂ ಹೆಚ್ಚು ಮರ-ಗಿಡಗಳನ್ನು ಬೆಳೆಸಿ ಕೃಷಿ ಮಾಡುತ್ತಿದ್ದಾರೆ. ಕೃಷಿ ಚಟುವಟಿಕೆ ಜೊತೆಗೆ ಪಶುಪಾಲನೆಗೂ ಒತ್ತು ನೀಡಿರುವ ಅವರು, ಖಾಸಗಿ ಕಂಪನಿಯ ಸಹಭಾಗಿತ್ವದಲ್ಲಿ 5ಸಾವಿರ ಬಾಯ್ಲರ್‌ ಕೋಳಿ ಮತ್ತು ಕಡಕ್‌ನಾಥ್‌ ಕೋಳಿ ಸಾಕಣೆ ಮಾಡುತ್ತಿದ್ದಾರೆ.

ಪ್ರಧಾನಿ ಮೋದಿಯವರು ತ್ರಿವರ್ಣ ಧ್ವಜ ಹಾರಿಸುವ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕಿಂತ ಬೇರೆ ಭಾಗ್ಯ ಇದೆಯೇ? ನನಗಂತು ತುಂಬಾ ಖುಷಿಯಾಗಿದೆ. ಹೆಂಡತಿ, ಮಕ್ಕಳೊಂದಿಗೆ ತಾವು ದೆಹಲಿಗೆ ಹೋಗುತ್ತಿದ್ದೇನೆ. ನನಗೆ ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯ 14 ಕಂತು ಹಣ ಬಂದಿದೆ. ಈ ಯೋಜನೆಯಿಂದ ಸಣ್ಣ ರೈತರಿಗೆ ತುಂಬಾ ಅನುಕೂಲವಾಗುತ್ತಿದೆ.

- ಆನಂದ ಬೆಳಗುಂಪಿ, ಕಲಬುರಗಿ ರೈತ

Follow Us:
Download App:
  • android
  • ios